Prabhas Marriage: ಮದುವೆಯ ಬಗ್ಗೆ ಮಾಹಿತಿ ನೀಡಿದ ಪ್ರಭಾಸ್, ನನಗೆ ಮದುವೆ ಯೋಗ ಇನ್ನೂ ಬಂದಿಲ್ಲ.

Prabhas Marriage:  ಬಾಹುಬಲಿ ನಟ ಪ್ರಭಾಸ್ (Prabhas)  ಅವರ ಮದುವೆಯ ವಿಚಾರಗಳು ಚರ್ಚೆಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ಪ್ರಭಾಸ್ ತಮ್ಮ ಮದುವೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದರು. ಇದೀಗ ಪ್ರಭಾಸ ಅವರ ಮದುವೆಯ ಬಗ್ಗೆ ಹೊಸ ಮಾಹಿತಿ ಲಭಿಸಿದೆ.

ಮದುವೆಯ ಯೋಜನೆಯ ಬಗ್ಗೆ ಮಾತನಾಡಿದ ಪ್ರಭಾಸ್
ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಪ್ರಭಾಸ್ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಅನ್ ಸ್ಟಾಪಬಲ್ ವಿಥ್ ಏನ್ ಬಿಕೆ ಚಾಟ್ ಶೋ (Unstoppable With NBK Chat Show) ನಲ್ಲಿ ಬಾಲಯ್ಯ ಅವರು ಪ್ರಭಾಸ್ ಅವರ ಮದುವೆಯ ಪ್ಲಾನ್ ಗಳ ಬಗ್ಗೆ ಪ್ರಶ್ನಿಸಿದ್ದಾರೆ.

Prabhas informed about the marriage, I have not received the marriage yoga yet.
Image Source: Times Of India

 

 

ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾಸ್ ಅವರು ಮದುವೆಯಾಗಲು ಪ್ಲಾನ್ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ ಅದು ಯಾವಾಗ ಸಂಭವಿಸುತ್ತದೆ ಎಂಬುದರ ಯಾವುದೇ ಖಚಿತ ಐಡಿಯಾ ಇಲ್ಲ ಎಂದು ಅವರು ಹೇಳಿದ್ದಾರೆ. ಮದುವೆಗಾಗಿ ತಮ್ಮ ಕುಟುಂಬದಿಂದ ಬರುವ ಒತ್ತಡವನ್ನು ನಿಭಾಯಿಸುವ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.

Join Nadunudi News WhatsApp Group

ಮದುವೆಯ ಯೋಗ ಇನ್ನು ಬಂದಿಲ್ಲ
ಬಾಲಕೃಷ್ಣ (Balakrishna) ಅವರು ಕೇಳಿದ ಪ್ರಶ್ನೆಗೆ ಪ್ರಭಾಸ್ ಉತ್ತರಿಸಿದ್ದಾರೆ. ಖಂಡಿತವಾಗಿ ನಾನು ಮದುವೆಯಾಗುತ್ತೇನೆ. ಆದರೆ ಯಾವಾಗ ಮದುವೆಯಾಗುತ್ತೇನೆ ಎಂದು ನನಗೆ ಗೊತ್ತಿಲ್ಲ. ಮದುವೆಯ ಬಗ್ಗೆ ಇನ್ನು ಐಡಿಯಾ ಮಾಡಿಲ್ಲ. ಆದರೆ ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ. ನನ್ನ ಮದುವೆಯ ಯೋಗ ಇನ್ನು ಬಂದಿಲ್ಲ ಎಂದಿದ್ದಾರೆ.

Prabhas informed about the marriage, I have not received the marriage yoga yet.
Image Source: India Today

ಸಲ್ಮಾನ್ ಖಾನ್ (Salman Khan) ನಂತರ ಮದುವೆಯಾಗುತ್ತೇನೆ
ಇನ್ನು ಬಾಹುಬಲಿ ನಟ ಪ್ರಭಾಸ್ ಅವರ ಮದುವೆ ವಿಚಾರವಾಗಿ ಕಾರ್ಯಕ್ರಮ ಒಂದರಲ್ಲಿ ಪ್ರಶ್ನೆ ಮಾಡಲಾಗಿತ್ತು. ಈ ಪ್ರಶ್ನೆಗೆ ಪ್ರಭಾಸ್ ಉತ್ತರಿಸಿದ್ದರು. ನಟ ಸಲ್ಮಾನ್ ಖಾನ್ ಮದುವೆಯಾದ ನಂತರ ನಾನು ಮದುವೆಯಾಗುತ್ತೇನೆ ಎಂದು ಪ್ರಭಾಸ ಉತ್ತರಿಸಿದ್ದರು. ಈ ವಿಷಯ ಸೋಶಿಯಲ್ ಮಿಡಿಯಾದಲ್ಲೂ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಇನ್ನು ಬಾಹುಬಲಿ ನಾಯಕಿ ಅನುಷ್ಕಾ (Anushka) ಅವರ ಜೊತೆ ಪ್ರಭಾಸ ಪ್ರೀತಿಯಲ್ಲಿದ್ದರು ಎಂದು ಹೇಳಲಾಗಿತ್ತು. ಆದರೆ ಇವರಿಬ್ಬರ ನಡುವೆ ಇರುವುದು ಸ್ನೇಹ ಎಂದು ಹೇಳಿಕೊಂಡಿದ್ದಾರೆ. ನಂತರ ಕೃತಿ ಸನೋನ್ (Krathi Sanoon) ಅವರ ಜೊತೆ ಪ್ರಭಾಸ್ ಡೇಟ್ ಮಾಡುತ್ತಿದ್ದಾರೆ ಇಬ್ಬರು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿತ್ತು. ನಂತರ ಕೃತಿ ಸನೋನ್ ಅವರು ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದರು.

Prabhas informed about the marriage, I have not received the marriage yoga yet.
Image Source: India Today

Join Nadunudi News WhatsApp Group