Shiva Rajkumar: ರಾಜಕೀಯಕ್ಕೆ ಬರುವುದರ ಬಗ್ಗೆ ಸ್ಪಷ್ಟನೆ ಕೊಟ್ಟ ಶಿವರಾಜ್ ಕುಮಾರ್.

ನಟ ಶಿವ ರಾಜಕುಮಾರ್ ಅವರು ತಾನು ರಾಜಕೀಯಕ್ಕೆ ಬರುವುದರ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Actor Shiva Rajkumar About Political Entry: ವಿಧಾನಸಭಾ ಚುನಾವಣೆ (Assembly Election) ಹತ್ತಿರ ಬರುತ್ತಿದ್ದಂತೆಯೇ ಸಿನಿಮಾ ಸ್ಟಾರ್ ನಟ ನಟಿಯರ ಮನೆಮುಂದೆ ರಾಜಕೀಯ ಪಕ್ಷದ ಮುಖಂಡರು ಹೋಗಿದ್ದರು. ಕೆಲವು ಸ್ಟಾರ್ ನಟ ನಟಿಯರ ಬಳಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವಂತೆ ಹಾಗು ರಾಜಕೀಯಕ್ಕೆ ಸೇರ್ಪಡೆಯಾಗುವಂತೆ ಮನವಿ ಕೂಡ ಮಾಡಿದ್ದರು.

ಈ ಹಿಂದೆ ಸಿನಿಮಾ ಸ್ಟಾರ್ ನಟ ನಟಿಯರ ರಾಜಕೀಯ ಪ್ರವೇಶದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಮೊನ್ನೆ ಅಷ್ಟೇ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಅವರು ಕಾಂಗ್ರೆಸ್ ಸೇರಿಕೊಂಡರು. ಈ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ (Shiva Rajkumar) ಅವರ ರಾಜಕೀಯದ ಬಗ್ಗೆ ಸಹ ಚರ್ಚೆ ಆಯಿತು.

Actor Shiva Rajkumar has clarified to the media about his entry into politics.
Image Credit: powertvnews

ನಟ ಶಿವರಾಜ್ ಕುಮಾರ್ ಅವರ ರಾಜಕೀಯ ಪ್ರವೇಶ
ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾಗುವ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಜೊತೆ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಆಗಿದೆ. ನಟ ಶಿವರಾಜ್ ಕುಮಾರ್ ಅವರು ರಾಜಕೀಯಕ್ಕೆ ಬರುವುದಿಲ್ಲ ಎಂದು ನೇರವಾಗಿಯೇ ಮಾತನಾಡಿದ್ದಾರೆ. ಇನ್ನು ನಟ ಶಿವರಾಜ್ ಕುಮಾರ್ ಅವರು ಪತ್ನಿ ಜೊತೆಗೆ ಕಾಂಗ್ರೆಸ್ ಪ್ರಚಾರದಲ್ಲಿ ಸಹ ಭಾಗಿಯಾಗಲಿದ್ದಾರೆ.

Actor Shiva Rajkumar has given six clarifications to the media that he will not join politics
Image Credit: ibtimes

ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ನೇರವಾಗಿ ಮಾತನಾಡಿದ ಶಿವಣ್ಣ
ನಟ ಶಿವರಾಜ್ ಕುಮಾರವರಿಗೆ ರಾಜಕೀಯಕ್ಕೆ ಸೇರುವ ಆಲೋಚನೆ ಇಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಒಳ್ಳೆಯ ಕೆಲಸ ಮಾಡುವವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಅಷ್ಟೇ . ಭೀಮಣ್ಣ ನನಗೆ ಸಂಬಂಧಿಕರು. ಜಗದೀಶ್ ಶೆಟ್ಟರ ಜೊತೆ ಒಳ್ಳೆಯ ಫ್ರೆಂಡ್ ಶಿಪ್ ಇದೆ. ಆದರೆ ರಾಜಕೀಯಕ್ಕೆ ಸೇರುವ ಆಲೋಚನೆ ಇಲ್ಲ ಎಂದು ಶಿವಣ್ಣ ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group