Actor Yash: ಯಶ್ ಗೆ ದುಬಾರಿ ಬೆಲೆಯ ವಾಚ್ ಗಿಫ್ಟ್ ಆಗಿ ಕೊಟ್ಟ ಅಂಬಾನಿ, ವಾಚ್ ನ ಬೆಲೆ ಎಷ್ಟು ಗೊತ್ತಾ…?

ಯಶ್ ಗೆ ದುಬಾರಿ ಬೆಲೆಯ ವಾಚ್ ಗಿಫ್ಟ್ ಆಗಿ ಕೊಟ್ಟ ಅಂಬಾನಿ

Actor Yash Expensive Watch: ಸದ್ಯ ಎಲ್ಲೆಡೆ ದೇಶದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಮದುವೆಯ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ದೇಶದ ದುಬಾರಿ ಮದುವೆಯನ್ನು ಸಾಕಷ್ಟು ಜನರು ಕಣ್ತುಂಬಿಕೊಂಡಿದ್ದಾರೆ. ಸೋಶಿಯಲ್ ಮಿಡಿಯದಲ್ಲೆಲ್ಲ ಅನಂತ್ ಅಂಬಾನಿ ಅದ್ದೂರಿಯ ಮದುವೆಯ ವಿಡಿಯೋ, ಫೋಟೋಗಳೇ ತುಂಬಿ ಹೋಗಿದೆ ಎನ್ನಬಹುದು. ಇನ್ನು ಅನಂತ ಅಂಬಾನಿ ಮದುವೆಗೆ ವಿವಿಧ ಕ್ಷೇತ್ರಗಲ್ಲಿ ಹೆಸರು ಮಾಡಿರುವ ಗಣ್ಯರು ಸಾಕ್ಷಿಯಾಗಿದ್ದರು.

ಇವರಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಂತರದ Yash ಕೂಡ ಒಬ್ಬರು. ಇನ್ನು ಯಶ್ ತಮ್ಮ ಕುಟುಂಬ ಸ್ಮೆತರಾಗಿ ಮದುವೆಗೆ ಆಗಮಿಸಿದ್ದಾರೆ. ಇನ್ನು ಯಶ್ ಮದುವೆಗೆ ಬರುತ್ತಿರುವ ವಿಡಿಯೋಗಳು ಕೂಡ ಬಾರಿ ವೈರಲ್ ಆಗಿವೆ. ಯಶ್ ಅನಂತ್ ಅಂಬಾನಿ ಮದುವೆಯಲ್ಲಿ ಡಿಫರಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಗಮನ ಸೆಳೆದಿದ್ದಾರೆ. ಇದರಲ್ಲಿ ವಿಶೇಷ ಏನೇಂದ್ರ  ನಟ ಯಶ್ ಗೆ ಅಂಬಾನಿ ದುಬಾರಿ ಬೆಲೆಯ ವಾಚ್ ಗಿಫ್ಟ್ ನೀಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬಂದಿದೆ.

Yash In Anant Ambani Marriage
Image Credit: Onearabia

ಅಂಬಾನಿ ಮಗನ ಮದುವೆಯಲ್ಲಿ ಯಶ್ -ರಾಧಿಕಾ…!
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಸಾವಿರಾರು ಗಣ್ಯರು ಮತ್ತು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದುಬಾರಿ ಕಲ್ಯಾಣ ಮಹೋತ್ಸವದಲ್ಲಿ ಪ್ರಧಾನಿ ಮೋದಿ ಕೂಡ ಪಾಲ್ಗೊಂಡಿದ್ದು ವಿಶೇಷ. ರಜನಿಕಾಂತ್, ಮಹೇಶ್ ಬಾಬು, ರಾಮ್ ಚರಣ್ ಸೇರಿದಂತೆ ಹಲವು ದಕ್ಷಿಣ ಭಾರತದ ಸಿನಿಮಾ ತಾರೆಯರಿಗೆ ಮದುವೆಯ ಆಮಂತ್ರಣ ಪತ್ರಗಳು ಬಂದಿವೆ. ನಟ ಯಶ್-ಪತ್ನಿ ರಾಧಿಕಾ ಪಂಡಿತ್ ಕೂಡ ಭಾಗಿಯಾಗಿದ್ದಾರೆ.

ಯಶ್ ಗೆ ದುಬಾರಿ ಬೆಲೆಯ ವಾಚ್ ಗಿಫ್ಟ್ ಆಗಿ ಕೊಟ್ಟ ಅಂಬಾನಿ
ಮಗನ ಮದುವೆಗೆ ಬಂದಿದ್ದ ಅತಿಥಿಗಳಿಗೆ ಮುಖೇಶ್ ಅಂಬಾನಿ ರಿಟರ್ನ್ ಗಿಫ್ಟ್ ನೀಡಿದ್ದಾರೆ. ನಟ ಯಶ್ ಸೇರಿದಂತೆ ಹಲವರಿಗೆ 2 ಕೋಟಿ ರೂ. ಬೆಲೆಬಾಳುವ ಔಡುಮಾರ್ ಪಿಯಾಗೆಟ್ ವಾಚ್ ಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಟರಾದ ಶಾರುಖ್ ಖಾನ್, ರಣವೀರ್ ಸಿಂಗ್ ಮತ್ತು ಅನೇಕರು ಇದೇ ರೀತಿಯ ವಾಚ್‌ ಗಳನ್ನು ಧರಿಸಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ನಟ ಯಶ್ ಅದೇ ವಾಚ್ ಧರಿಸಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಯಶ್ ದುಬಾರಿ ವಾಚ್ ನಲ್ಲಿ ಮಿಂಚುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Actor Yash Expensive Watch
Image Credit: Indianexpress

Join Nadunudi News WhatsApp Group

Join Nadunudi News WhatsApp Group