Amulya In Adichunchanagiri: ಆಧಿಚುಂಚನಗಿರಿಗೆ ತೆರಳಿದ ಅಮೂಲ್ಯ- ಜಗದೀಶ್, ಫೋಟೋಗಳನ್ನ ಶೇರ್ ಮಾಡಿದ ಜಗದೀಶ್.

Actress Amulya And Jagadeesh Visit Adichunchanagiri: ಕನ್ನಡದ ಸ್ಟಾರ್ ನಟಿ ಅಮೂಲ್ಯ (Amulya) ಹಾಗು ಅವರ ಪತಿ ಜಗದೀಶ್ ಚಂದ್ರ (Jagadeesh Chandra) ಅವರು ಇದೀಗ ತಮ್ಮ ಅವಳಿ ಮಕ್ಕಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಇದೀಗ ಈ ದಂಪತಿ ಮಕ್ಕಳ ಹುಟ್ಟುಹಬ್ಬದ ಸಲುವಾಗಿ ಕುಟುಂಬದೊಂದಿಗೆ ಆಧಿಚುಂಚನಗಿರಿಗೆ ತೆರಳಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಅಮೂಲ್ಯ ಅವರ ಪತಿ ಜಗದೀಶ್ ಚಂದ್ರ ಅವರು ತಮ್ಮ ಇನ್ಸ್ಟಾಗ್ರಾಮ್ (Jagadeesh Chandra Instagram)ಅಲ್ಲಿ ಹಂಚಿಕೊಂಡಿದ್ದಾರೆ.

Actress Amulya And Jagadeesh Visit Adichunchanagiri
Image Source: Vijay Karnataka

ಆಧಿಚುಂಚನಗಿರಿಗೆ ತೆರಳಿದ ಅಮೂಲ್ಯ- ಜಗದೀಶ್
ತಮ್ಮ ಅವಳಿ ಮಕ್ಕಳ ಹುಟ್ಟುಹಬ್ಬದ ಸಲುವಾಗಿ ಅಮೂಲ್ಯ ಹಾಗು ಜಗದೀಶ್ ಅವರು ಕುಟುಂಬದವರ ಜೊತೆಗೆ ಶ್ರೀ ಆಧಿಚುಂಚನಗಿರಿ ಮಠಕ್ಕೆ ತೆರಳಿದ್ದಾರೆ. ಅಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ. ಇನ್ನು ಅಲ್ಲಿನ ಕೆಲವು ಫೋಟೋಗಳನ್ನು ಜಗದೀಶ್ ಚಂದ್ರ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Actress Amulya And Jagadeesh Visit Adichunchanagiri
Image Source: India Today

ಇನ್ಸ್ಟಾಗ್ರಾಮ್ ಅಲ್ಲಿ ಫೋಟೋ ಹಂಚಿಕೊಂಡ ಜಗದೀಶ್
ಇಂದು ಅಥರ್ವ್ ಹಾಗೂ ಆಧವ್ ಗೆ ಒಂದು ವರ್ಷ ತುಂಬಿದ್ದು, ಇಬ್ಬರು ಮಕ್ಕಳಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಆಶೀರ್ವಾದ ಮಾಡಿದ್ದಾರೆ. ಇಂದು ನಮ್ಮ ಮಕ್ಕಳಾದ ಆಧವ್ ಮತ್ತು ಅಥರ್ವ್ ಮೊದಲ ವರ್ಷದ ಜನ್ಮದಿನದ ಅಂಗವಾಗಿ ನಾಗಮಂಗಲದಲ್ಲಿರುವ ಶ್ರೀ ಆದಿಚುಂಚನಗಿರಿ ಮಠಕ್ಕೆ ತೆರಳಿ, ಶ್ರೀ ಕಾಲಭೈರವೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆಯಲಾಗಿದೆ.

Actress Amulya And Jagadeesh Visit Adichunchanagiri
Image Source: News18 Kannada

ಪರಮಪೂಜ್ಯ ಡಾ. ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಗಯಿತು.

Join Nadunudi News WhatsApp Group

ಬಳಿಕ ಮಠದ ಶಾಲಾ ಮಕ್ಕಳಿಗೆ ಸಿಹಿ ಹಂಚಿ, ಮಕ್ಕಳ ಜನ್ಮದಿನವನ್ನು ಆಚರಿಸಲಾಯಿತು ಎಂದು ಜಗದೀಶ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

Actress Amulya And Jagadeesh Visit Adichunchanagiri
Image Source: News18 Kannada

Join Nadunudi News WhatsApp Group