Sanjay Leela Bhansali: ಸಂಜಯ್ ಲೀಲಾ ಬನ್ಸಾಲಿ ಅವರನ್ನು ಮದುವೆಯಾಗಲು ಬಯಸಿದ ನಟಿ ದೀಪಿಕಾ ಪಡುಕೋಣೆ.

Actress Deepika Padukone And Sanjay Leela Bhansali: ಬಾಲಿವುಡ್ (Bollywood) ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಇತ್ತೀಚಿಗೆ ಬಿಡುಗಡೆಯಾಗಿ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡು ಯಶಸ್ಸು ಕಂಡ ಸಿನಿಮಾವಾಗಿದೆ.

ಇದೀಗ ಪಠಾಣ್ (Pathan) ಸಿನಿಮಾ 1000 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ನಟಿ ದೀಪಿಕಾ ಪಡುಕೋಣೆ ಪಠಾಣ್ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.

Actress Deepika Padukone And Sanjay Leela Bhansali
Image Source: India Today

ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟ ರಣವೀರ್ ಸಿಂಗ್ ಅವರನ್ನು ಲವ್ ಮಾಡಿ ಮದುವೆಯಾಗಿದ್ದರು. ಈ ಜೋಡಿ ಈಗ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ ಹಲವು ಬಾಲಿವುಡ್ ನಲ್ಲಿ ಹೊಸ ಹೊಸ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ನಟಿ ದೀಪಿಕಾ ಪಡುಕೋಣೆ ಹಿಂದೆ ಒಂದು ಭಾರಿ ತನಗಿಂತ 23 ವರ್ಷ ದೊಡ್ಡವರಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರನ್ನು ಮದುವೆಯಾಗಲು ಬಯಸಿದ್ದರು.

Join Nadunudi News WhatsApp Group

Actress Deepika Padukone And Sanjay Leela Bhansali
Image Source: India Today

ಸಂಜಯ್ ಬನ್ಸಾಲಿ ಅವರನ್ನು ಮದುವೆಯಾಗುವ ಆಸೆ ಹೇಳಿಕೊಂಡ ನಟಿ ದೀಪಿಕಾ ಪಡುಕೋಣೆ
37 ವರ್ಷದ ನಟಿ ದೀಪಿಕಾ ಪಡುಕೋಣೆ ಅವರ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಸ್ವತಃ ದೀಪಿಕಾ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮುಂದೆ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಮದುವೆಯಾಗಲು ಬಯಸಿದ್ದರು ಎಂಬ ವಿಚಾರ ಬಹಿರಂಗಪಡಿಸಿದರು.

Actress Deepika Padukone And Sanjay Leela Bhansali
Image Source: India Today

ದೀಪಿಕಾ ಪಡುಕೋಣೆಯ ಈ ಆಸೆ ಕೇಳಿದ ಅಭಿಮಾನಿಗಳು ಅಚ್ಚರಿಗೊಂಡರು. ಆದರೆ ನಟಿ ದೀಪಿಕಾ ಪಡುಕೋಣೆ ನಟ ರಣವೀರ್ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ ಎನ್ನಬಹುದು.

Actress Deepika Padukone And Sanjay Leela Bhansali
Image Source: India Today

Join Nadunudi News WhatsApp Group