Meena And Dhanush: ಧನುಷ್ ಜೊತೆಗಿನ ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಮೀನಾ.

Actress Meena And Dhanush Second Marriage: ತಮಿಳಿನ ಸ್ಟಾರ್ ನಟ ಧನುಷ್ (Dhanush) ಅವರ ಎರಡನೆಯ ಮದುವೆಯ ವಿಚಾರಗಳು ಸಾಕಷ್ಟು ವೈರಲ್ ಆಗಿದ್ದವು. ಕಾಲಿವುಡ್ ನ ಸ್ಟಾರ್ ನಟ ಮಾಲಿವುಡ್ ನಟಿಯ ಕೈ ಹಿಡಿಯುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು.

ಇನ್ನು ಬಹುಭಾಷಾ ನಟಿ ಮೀನಾ (meena) ಅವರನ್ನು ನಟ ಧನುಷ್ ಎರಡನೇ ವಿವಾಹ ಆಗಲಿದ್ದಾರೆ ಎನ್ನುವ ವಂದತಿ ಹರಡಿತ್ತು. ಇದೀಗ ನಟಿ ಮೀನಾ ತಮ್ಮ ಎರಡನೆಯ ಮದುವೆಯ (Second Marriage) ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Meena and Dhanush are not getting married, actress Meena said this is a fake news
Image Credit: bhoomitoday

ನಟಿ ಮೀನಾ ಜೊತೆ ಎರಡನೇ ಮದುವೆ ಆಗ್ತಾರಾ ಧನುಷ್
ತಮಿಳಿನ ಸ್ಟಾರ್ ನಟ ಧನುಷ್ ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದು ಇದೀಗ ಎರಡನೇ ಮದುವೆಗೆ ಸಜ್ಜಗಿದ್ದಾರೆ ಎನ್ನುವ ವರದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಡಿದ್ದವು.

ಬೈಲ್ವನ್ ರಂಗನಾಥ್ ಅವರು ಇತ್ತೀಚಿನ ಸಂದರ್ಶನದಲ್ಲಿ ಮಾತನಾಡುವಾಗ ಈ ವಿಷಯವನ್ನು ಹೇಳಿಕೊಂಡಿದ್ದರು. ಈ ಕಾರಣದಿಂದಾಗಿ ನಟಿ ಮೀನಾ ಹಾಗೂ ಧನುಷ್ ಅವರ ಎರಡನೆಯ ಮದುವೆ ವಿಚಾರಗಳು ಕಾಲಿವುಡ್ ಅಂಗಳದಲ್ಲಿ ಹರಿದಾಡಿದ್ದವು. ಇದೀಗ ಈ ಎಲ್ಲಾ ವೈರಲ್ ಸುದ್ದಿಗಳಿಗೆ ನಟಿ ಮೀನಾ ಪ್ರತಿಕ್ರಿಯಿಸಿದ್ದಾರೆ.

I am in the memory of my husband, said actress Meena who expressed her frustration that someone is spreading false news about me
Image Credit: bollywoodlife

ಧನುಷ್ ಜೊತೆಗಿನ ಎರಡನೇ ಮದುವೆಯ ಬಗ್ಗೆ ನಟಿ ಮೀನಾ ಸ್ಪಷ್ಟನೆ
ಬಹುಭಾಷಾ ನಟಿ ಮೀನಾ ಕೆಲವು ತಿಂಗಳುಗಳ ಹಿಂದೆ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಈ ಹಿಂದೆ ನಟಿ ಮೀನಾ ಅವರ ಎರಡನೇ ಮದುವೇ ವಿಚಾರಗಳು ಸಾಕಷ್ಟು ಸುದ್ದಿಯಾಗಿದ್ದವು. ಈ ಹಿಂದೆಯೂ ಕೂಡ ತಮ್ಮ ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದೀಗ ನಟಿ ಧನುಷ್ ಜೊತೆಗಿನ ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Join Nadunudi News WhatsApp Group

Actress Meena has confirmed to the media that the news of her marriage with Dhanush is false
Image Credit: screenima

“ನನ್ನ ಪತಿ ನನ್ನೊಂದಿಗೆ ಇಲ್ಲ ಎಂಬುದನ್ನು ನಾನು ಈಗಲೂ ನಂಬೋಕೆ ಆಗುತ್ತಿಲ್ಲ. ಹೀಗಿರುವಾಗ ಹೇಗೆ ಜನ ಈ ರೀತಿ ಸುಳ್ಳು ಸುದ್ದಿಗಳನ್ನು ಸ್ರಷ್ಟಿಸುತ್ತಾರೋ. ನಾನು ಧನುಷ್ ಅವರನ್ನು ಮದುವೆ ಆಗುತ್ತಿಲ್ಲ. ಇದರಲ್ಲಿ ಸತ್ಯವಿಲ್ಲ. ನನಗೆ ಸಿನಿಮಾದಲ್ಲಿ ಒಳ್ಳೆ ಪಾತ್ರ ಮಾಡಬೇಕು. ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದಷ್ಟೇ ನನ್ನಾಸೆ” ಎಂದಿದ್ದಾರೆ ನಟಿ ಮೀನಾ.

Join Nadunudi News WhatsApp Group