Radhika Pandit: ರಾಧಿಕಾ ಪಂಡಿತ್ ಬಳಿ ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್, ಅಭಿಮಾನಿಗಳ ಆಸೆ ಈಡೇರಿಸಬೇಕಿದೆ ರಾಧಿಕಾ.

ಯಶ್ ಜೊತೆಗೆ ಇರುವ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ನಟಿ ರಾಧಿಕಾ ಪಂಡಿತ್, ವಿಶೇಷ ಬೇಡಿಕೆಯಿಟ್ಟ ಅಭಿಮಾನಿಗಳು.

Radhika Pandit New Post: ಕನ್ನಡದ ಸ್ಟಾರ್ ನಟ ನಟಿಯರಾದ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಜೋಡಿ ಪ್ರೀತಿಸಿ ಮದುವೆಯಾಗಿದ್ದಾರೆ. ಈಗಾಗಲೇ ಈ ಜೋಡಿ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಮೊನ್ನೆ ಅಷ್ಟೇ ನಟ ಅಭಿಷೇಕ್ ಹಾಗು ಅವಿವಾ ಮದುವೆ ಬಹಳ ಅದ್ದೂರಿಯಾಗಿ ನಡೆದಿದೆ. ಸಾಕಷ್ಟು ಗಣ್ಯರು, ಸೆಲಬ್ರೆಟಿಸ್ ಗಳು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಅದೇ ರೀತಿ ಯಶ್ ಮತ್ತು ರಾಧಿಕಾ ಪಂಡಿತ್ ಅಭಿಷೇಕ್ ಮದುವೆ ಸಮಾರಂಭದಲ್ಲಿ ಬಾಗಿಯಾಗಿದ್ದರು. ಈ ಕುರಿತಾಗಿ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಷೇಕ್ ಮದುವೆಯಲ್ಲಿ ಯಶ್ ಮತ್ತು ರಾಧಿಕಾ ಜೋಡಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

Radhika Pandit shared a photo with Yash
Image Credit: instagram

ಯಶ್ ಜೊತೆ ಇರುವ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
ನಟಿ ರಾಧಿಕಾ ಪಂಡಿತ್ ಯಶ್ ಜೊತೆ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಮದುವೆ ಸಮಾರಂಭಕ್ಕಾಗಿ ರೆಡಿಯಾಗಿ ತೆಗಿಸಿದ ಫೋಟೋ ಇದಾಗಿದ್ದು ರಾಧಿಕಾ ಈ ಫೋಟೋ ಹಂಚಿಕೊಂಡು ಲೈಫ್ ಇಸ್ ಬ್ಯೂಟಿಫುಲ್ ಅಂತ ಅಡಿಬರಹ ಬರೆದಿದ್ದಾರೆ.

Radhika Pandit shared a photo with Yash
Image Credit: instagram

ಯಶ್ ರಾಧಿಕಾಗೆ ವಿಶೇಷ ಬೇಡಿಕೆಯಿಟ್ಟ ಅಭಿಮಾನಿಗಳು
ರಾಧಿಕಾ ಪಂಡಿತ್ ಹಾಗು ಯಶ್ ಫೋಟೋ ನೋಡುತ್ತಿದ್ದಂತೆ ಅಭಿಮಾನಿಗಳು ನೀವು ಮತ್ತೆ ಜೊತೆಯಾಗಿ ನಟಿಸಿ ಎಂದು ಬೇಡಿಕೆಯಿಟ್ಟಿದ್ದಾರೆ. ಈ ವಿಶೇಷ ಬೇಡಿಕೆಯನ್ನು ಅಭಿಮಾನಿಗಳು ಫೋಟೋಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ರಾಧಿಕಾ ಪಂಡಿತ್  ತಮ್ಮ ಸಾಂಸಾರಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ನಟಿ ತಮ್ಮ ಮದುವೆಯ ಬಳಿಕ ಚಿತ್ರರಂಗದಿಂದ ದೂರ ಇದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಲೇ ಇರುತ್ತಾರೆ.

Join Nadunudi News WhatsApp Group

Join Nadunudi News WhatsApp Group