Rakshitha Birthday: ತನ್ನದೇ ಸ್ಟೈಲ್ ರಕ್ಷಿತಾಗೆ ಹುಟ್ಟು ಹಬ್ಬದ ವಿಶ್ ಮಾಡಿದ ಡಿ ಬಾಸ್, ವೈರಲ್ ಆಯಿತು ದರ್ಶನ್ ಮಾಡಿದ ವಿಶ್.

ನೀನು ಬಯಸಿದ್ದು ನಿನಗೆ ಸಿಗಲಿ ಎಂದು ರಕ್ಷಿತಾಗೆ ಬರ್ತ್ಡೇ ವಿಶ್ ಮಾಡಿದ ನಟ ದರ್ಶನ್.

Darshan Wish Rakshitha Birthday: ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ರಕ್ಷಿತಾ (Rakshitha) ನಿನ್ನೆ ತಮ್ಮ ಹುಟ್ಟು ಹಬ್ಬವನ್ನು (Birthday)  ಆಚರಿಸಿಕೊಂಡಿದ್ದರು. ನಟಿ ರಕ್ಷಿತಾ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡುವ ಮೂಲಕ ಅದೆಷ್ಟೋ ಕನ್ನಡಿಗರ ಮನ ಗೆದ್ದಿದ್ದಾರೆ.

ನಟಿ ರಕ್ಷಿತಾ ಅವರಿಗೆ ಕುಟುಂಬದವರರು, ಆಪ್ತರು, ಅಭಿಮಾನಿಗಳು ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ನ ಸ್ಟಾರ್ ನಟ ನಟಿಯರು ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan)  ಅವರು ರಕ್ಷಿತಾ ಅವರಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

Actor Darshan wished actress Rakshita on her birthday
Image Credit: timesofindia.indiatimes

ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ
ನಟಿ ರಕ್ಷಿತಾ ಫೇಮ್ ಅವರು ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಅಪ್ಪು ಚಿತ್ರದಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು. ಕನ್ನಡದಲ್ಲಿ ನಟಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಕ್ಷಿತಾ ಅವರು ಕನ್ನಡ ಚಿತ್ರರಂಗದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಖ್ಯಾತಿ ಪಡೆದ ನಟಿ ಆಗಿದ್ದಾರೆ. ನಟಿ ರಕ್ಷಿತಾ ಕನ್ನಡದ ಜೊತೆಗೆ ತೆಲಗು, ತಮಿಳು ಚಿತ್ರಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದರು.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಪ್ರೇಮ್ (Prem) ಅವರನ್ನು ರಕ್ಷಿತಾ ಅವರು ವಿವಾಹವಾಗಿದ್ದರು. ತಮ್ಮ ವಿವಾಹದ ನಂತರ ನಟಿ ಚಿತ್ರರಂಗದಿಂದ ದೂರ ಉಳಿದಿದ್ದರು. ಚಿತ್ರರಂಗದಲ್ಲಿ ನಟಿ ರಕ್ಷಿತಾ ಕೇವಲ 5 ವರ್ಷಗಳು ಮಾತ್ರ ಸಕ್ರಿಯರಾಗಿದ್ದರು. ಆದರೂ ಸಹ ಅನೇಕ ಹಿಟ್ ಚಿತ್ರಗಳನ್ನು ಕನ್ನಡದಲ್ಲಿ ನಟಿ ಮಾಡಿದ್ದಾರೆ.

Actor Darshan wished actress Rakshita on her birthday and said, May you get what you wish for.
Imge Credit: hindustantimes

ಇನ್ನು ರಕ್ಷಿತಾ ಹಾಗೂ ದರ್ಶನ್ ಕಾಂಬಿನೇಷನ್ ನಲ್ಲಿ ಅನೇಕ ಸಿನಿಮಾಗಳು ಮೂಡಿಬಂದಿದೆ. ಈ ಇಬ್ಬರು ಬಹಳ ಒಳ್ಳೆಯ ಸ್ನೇಹಿತರಾಗಿದ್ದಾರೆ. ಈ ಹಿಂದೆ ದರ್ಶನ್ ಅವರ ಹುಟ್ಟುಹಬ್ಬಕ್ಕೂ ಕೂಡ ನಟಿ ರಕ್ಷಿತಾ ಅವರು ಪ್ರೀತಿಯ ಶುಭಾಶಯಗಳನ್ನು ತಿಳಿಸಿದ್ದರು. ಅದೇ ರೀತಿ ಇದೀಗ ದರ್ಶನ್ ಅವರು ಕೂಡ ತಮ್ಮ ಸಹ ನಟಿಗೆ ಪ್ರೀತಿಯ ಶುಭಾಶಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

Join Nadunudi News WhatsApp Group

ನಟಿ ರಕ್ಷಿತಾಗೆ ವಿಭಿನ್ನವಾಗಿ ವಿಶ್ ಮಾಡಿದ ಡಿ ಬಾಸ್
ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಅವರು ನಟಿ ರಕ್ಷಿತಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಬಹಳ ವಿಶೇಷವಾಗಿ ತಿಳಿಸಿದ್ದಾರೆ. ಇಬ್ಬರು ಜೊತೆಯಾಗಿ ತೆಗೆಸಿದ ಫೋಟೋ ಶೇರ್ ಮಾಡಿಕೊಂಡು ದರ್ಶನ್ ಅವರು ವಿಶ್ ಮಾಡಿದ್ದಾರೆ.

“ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ, ನಿನ್ನ ಹೃದಯ ಬಯಸಿದ್ದು ನಿನಗೆ ಪಲಿಸಲಿ ಎಂದು ಆಶಿಸುತ್ತಾ, ನೂರಾರು ವರುಷ ನೀನು ನಗು ನಗುತ ಇರು ಎಂದು ಹಾರೈಸುವೆ ರಕ್ಷಿತಾ ಪ್ರೇಮ್” ಎಂದು ದರ್ಶನ್ ಅವರು ರಕ್ಷಿತಾ ಅವರಿಗೆ ವಿಶ್ ಮಾಡಿದ್ದಾರೆ.

 

View this post on Instagram

 

A post shared by Rakshitha ???? (@rakshitha__official)

Join Nadunudi News WhatsApp Group