Whatsapp:ಈ ರೀತಿಯಾಗಿ ಸರಳವಾಗಿ ವಾಟ್ಸಾಪ್ ಮೂಲಕವೇ ಆಧಾರ್ ಹಾಗು ಪಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು

ಮಾನವನ ಈ ಜೀವನ ಎನ್ನುವ ಹರಿವಿನಲ್ಲಿ ಮನುಷ್ಯ ತನ್ನನ್ನ ತಾನು ಅಭಿವೃದ್ಧಿ ಪಡಿಸಿಕೊಳ್ಳುತ್ತಾ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಾನೆ ಎಂದು ಹೇಳಿದರೆ ಖಂಡಿತವಾಗಿಯೂ ಕೂಡ ತಪ್ಪಾಗಲಾರದು. ಹೌದು ಬಹಳ ಹಿಂದೆ ಒಂದು ಗಾದೆ ಇತ್ತು. ಆಡು ಮುಟ್ಟದ ಸೊಪ್ಪಿಲ್ಲ ಅಂತ. ಹೌದುವ ಆದರೆ ಇದೀಗ ಅದನ್ನು ಮೊಬೈಲ್ ಬಳಸದ ಜನರಿಲ್ಲ ಎಂದು ಬದಲಾಯಿಸುವ ಕಾಲ ಬಂದಿದೆ ಎನ್ನಬಹುದು. ಹೌದು ಈ ಮನವ ಎಂಬ ಪ್ರಾಣಿ ಅಸಾಮಾನ್ಯವಾದ ಬುದ್ದಿಮತ್ತೆಯಲ್ಲಿ ಉಳಿದೆಲ್ಲ ಜೀವರಾಶಿಗಳಿಗಿಂತ ಭಿನ್ನವಾಗಿದ್ದಾನೆ ಎನ್ನಬಹುದು. ಅದಕ್ಕೆ ಒಳ್ಳೆಯ ನಿದರ್ಶನವೆಂದರೆ 21 ನೇ ಶತಮಾನದ ಗಣನೀಯ ಆವಿಷ್ಕಾರ ಎಂದೇ ಹೇಳಬಹುದಾದ ಜಂಗಮವಾಣಿ.

ಮೊದ ಮೊದಲು ನಾವು ಶ್ರೀಮಂತರ ಅಥವಾ ಅನುಕೂಲವಂತರ ಕೈಯಲ್ಲಿ ಮಾತ್ರ ನೋಡಬಹುದಾಗಿದ್ದ ಈ Smartphone ಸದ್ಯ ಈಗ ಜನಸಾಮಾನ್ಯರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗುವಂತಾಗಿದೆ. ಹೌದು ಕಾಲ ಬದಲಾದಂತೆ ತಂತ್ರಜ್ಞಾನದಲ್ಲಿಯೂ ಅಭೂತಪೂರ್ವ ಬೆಳವಣಿಗೆಗಳಾಗಿದ್ದು ಬೆರಳ ತುದಿಯಲ್ಲಿ ಜಗತ್ತು ಎಂಬಂತೆ ನಾವು ಕುಳಿತಲ್ಲಿಯೇ ಜಗತ್ತಿನ ಆಗುಹೋಗುಗಳನ್ನು ತಿಳಿಯುವಂತಾಗಿದೆ.

ಹೌದು ಈ ಮೊದಲು ಸಮಯ ಕಳೆಯಲು ದೂರದರ್ಶನ ರೇಡಿಯೋ ಕತೆ ಕಾದಂಬರಿಗಳಿಗೆ ಮೊರೆ ಹೋಗುತ್ತಿದ್ದ ಯುವಪೀಳಿಗೆ ಈಗ ಊಟ ತಿಂಡಿಯನ್ನು ಬೇಕಾದರೂ ಬಿಡಬಲ್ಲರು ಆದರೆ ಮೊಬೈಲ್ ಇಲ್ಲದೇ 10 ನಿಮಿಷ ಕೂಡಾ ಇರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲು ಯುವಕರಂತು ಟೆಕ್ಸ್ಟ್ ಮಾಡುವುದರಲ್ಲಿಯೇ ಸದಾ ನಿರತರಾಗಿತ್ತಾರೆ.ಸದ್ಯ ಮೊಬೈಲ್ ನಲ್ಲಿರುವ ವಾಟ್ಸ್​ಆ್ಯಪ್ ಎಂಬ ಮೆಸೀಜಿಂಗ್ ಅಪ್ಲಿಕೇಶನ್ ಇಂದು ವಿಶ್ವದಾದ್ಯಂತ ಕೋಟ್ಯಾಂತರ ಜನರು ಬಳಕೆ ಮಾಡುತ್ತಿದ್ದಾರೆ.

ಅಷ್ಟರ ಮಟ್ಟಿಗೆ ಇದು ಪ್ರಸಿದ್ಧಿ ಪಡೆದಿದೆ. ಸದ್ಯ Whatsapp  ಪ್ರತಿ ಬಾರಿ ಹೊಸ ಹೊಸ ಅವಿಶ್ಕಾರ ತರುತ್ತಿದ್ದು ಇದೀಗ ಆಧಾರ್ ಹೊಂದಿರುವವರು ಮೀಸಲಾದ ಡಿಜಿಲಾಕರ್ ವೆಬ್‌ಸೈಟ್ ಹಾಗೂ ಅಪ್ಲಿಕೇಶನ್‌ಗೆ ಆಕ್ಸಸ್‌ ಹೊಂದಿದ್ದರೆ ಅದರ ಸೇವೆಯನ್ನು ವಾಟ್ಸಾಪ್‌ನಲ್ಲಿಯೂ ಪಡೆಯಲು ಸಾಧ್ಯವಾಗಲಿದೆ. ಹೌದು MyGov Helpdesk WhatsApp ಚಾಟ್‌ಬಾಟ್ ಅನ್ನು ಬಳಸಿಕೊಂಡು ಜನರು ತಮ್ಮ ದಾಖಲೆಗಳನ್ನು ಡಿಜಿಲಾಕರ್‌ನಿಂದ ಸುಲಭವಾಗಿ ಡೌನ್‌ಲೋಡ್ ಮಾಡಬಹುದಾಗಿದ್ದು ಅಂದರೆ ಪ್ಯಾನ್ ಆಧಾರ್ ಕಾರ್ಡ್‌ನಂತಹ ದಾಖಲೆಗಳನ್ನು ಕೂಡಾ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿರುವುದು ವಿಶೇಷವಾಗಿದೆ.

how to download adhaar and pan card with whatsapp
Image Credit: ICT Catalogue

ಹೌದು MyGov ಹೆಲ್ಪ್‌ಡೆಸ್ಕ್ ಚಾಟ್‌ಬಾಟ್ ಅನ್ನು ಬಳಸಿಕೊಂಡು ಸರಳ ಹಂತಗಳಲ್ಲಿ ನಾವು ಯಾವುದೇ ಅಧಿಕೃತ ದಾಖಲೆಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದಾಗಿದ್ದು ಆಧಾರ್ ಕಾರ್ಡ್ ಪ್ಯಾನ್ ಡ್ರೈವಿಂಗ್ ಲೈಸೆನ್ಸ್ ಮಾರ್ಕ್ ಶೀಟ್‌ಗಳು ಹಾಗೂ ಇತರ ದಾಖಲೆಗಳು ಡೌನ್‌ಲೋಡ್ ಮಾಡಲು ಸಾಧ್ಯವಾಗಲಿದೆ.

Join Nadunudi News WhatsApp Group

ಹೌದು ಡಿಜಿಲಾಕರ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಬಳಕೆ ಮಾಡದವುರ ವಾಟ್ಸಾಪ್ ಚಾಟ್‌ಬಾಟ್ ಸೇವೆಯು ಸಹಾಯ ಮಾಡಬಹುದಾಗಿದ್ದು ನಿಮ್ಮ ಆಧಾರ್ ಕಾರ್ಡ್‌ನಿಂದ ನಿಮ್ಮ ಪ್ಯಾನ್ ಹಾವೂ ನಿಮ್ಮ ಮಾರ್ಕ್ ಶೀಟ್‌ಗಳು ಸಹ ನಿಮಗೆ ವಾಟ್ಸಾಪ್‌ನಲ್ಲೇ ಲಭ್ಯವಾಗಲಿದೆ. ಹೌದು ಹಾಗಾದರೆ ನೀವು ದಾಖಲೆಗಳನ್ನು ಹೇಗೆ ಡೌನ್‌ಲೋಡ್ ಮಾಡುವುದು ಎಂಬುದನ್ನು ತಿಳಿಯುವ ಆಸಕ್ತಿ ಇದ್ದರೆ ಮುಂದೆ ಓದಿ.

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ MyGov HelpDesk ಸಹಾಯವಾಣಿ +91-9013151515 ಅನ್ನು ಸೇವ್ ಮಾಡಿಕೊಳ್ಳಬೇಕು. ಬಳಿಕ ವಾಟ್ಸಾಪ್ ಅಪ್ಲಿಕೇಶನ್ ತೆರೆದು ರಿಫ್ರೆಶ್ ಮಾಡಿಕೊಳ್ಳಬೇಕಿದ್ದು
MyGov HelpDesk ಸರ್ಚ್ ಮಾಡಿ ತೆರೆದು ನಮಸ್ತೆ ಅಥವಾ ಹಾಯ್ ಎಂದು ಕಳುಹಿಸಬೇಕು. ನಂತರ CO-WIN Services or the Digilocker Services ಎಂಬ ಆಯ್ಕೆಯನ್ನು ನೀಡಲಾಗುತ್ತಿದ್ದು Digilocker Services ಎಂದು ಒತ್ತಿ ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ ಎಂದು ಕೇಳಲಾಗುತ್ತದೆ.

ನಂತರ ನೀವು Yes ಅಥವಾ NO ಆಯ್ಕೆ ಕ್ಲಿಕ್ ಮಾಡಿ. ಡಿಜಿಲಾಕರ್ ಖಾತೆಯನ್ನು ಹೊಂದಿಲ್ಲದಿದ್ದರೆ ಖಾತೆ ತೆರೆಯಬೇಕಾಗುತ್ತದೆ. ಬಳಿಕ ಚಾಟ್‌ಬಾಟ್ ಈಗ ನಿಮ್ಮ ಡಿಜಿಲಾಕರ್ ಖಾತೆಯನ್ನು ಲಿಂಕ್ ಮಾಡಲು ಮತ್ತು ದೃಢೀಕರಿಸಲು ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ಕೇಳುವುದು. ಆಗ ನೀವು ಆಧಾರ್ ಸಂಖ್ಯೆ ಕಳುಹಿಸಿ. ಇನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಬರಲಿದ್ದು ಅದನ್ನು ಚಾಟ್‌ಬಾಟ್‌ಗೆ ನೀಡಿ.

ಬಳಿಕ ನಿಮ್ಮ Digilocker  ಖಾತೆಯೊಂದಿಗೆ ಲಿಂಕ್ ಮಾಡಲಾದ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ಚಾಟ್‌ಬಾಟ್ ನಿಮಗೆ ತೋರಿಸಲಾಗುತ್ತದೆ. ತದನಂತರ ಡಾಕ್ಯೂಮೆಂಟ್ ಸಂಖ್ಯೆಯನ್ನು ಟೈಪ್ ಮಾಡಿ ಕಳುಹಿಸಬೇಕಿದ್ದು ನಿಮಗೆ PDF ಫಾರ್ಮ್ಯಾಟ್‌ನಲ್ಲಿ ಡಾಕ್ಯೂಮೆಂಟ್ ಲಭ್ಯವಾಗಲಿದೆ.
ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ತಿಳಿಸಿ.

Join Nadunudi News WhatsApp Group