Airtel Recharge Plan: ಜಿಯೋಗಿಂತ ಅಗ್ಗದ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್, 90 ದಿನ ಅನಿಯಮಿತ.

ಜಿಯೋಗಿಂತ ಅಗ್ಗದ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್

Airtel Recharge Plan For 90 Days: ಸದ್ಯ ದೇಶದಲ್ಲಿ ಜನಪ್ರಿಯ ಟೆಲಿಕಾಂ ನೆಟ್ವರ್ಕ್ ಆಗಿರುವ Jio ಮತ್ತು Airtel ತನ್ನ ರಿಚಾರ್ಜ್ ದರಗಳನ್ನು ಹೆಚ್ಚಿಸಿವೆ. ರಿಚಾರ್ಜ್ ದರಗಳು ಮೊದಲಿಗಿಂತ 20 % ಹೆಚ್ಚಾಗಿವೆ. ಈ ಕಾರಣಕ್ಕೆ ಬಳಕೆದಾರರು ಮಾಸಿಕ ರಿಚಾರ್ಜ್ ನ ಹೊರತಾಗಿ ತ್ರೈಮಾಸಿಕ ರಿಚಾರ್ಜ್ ಪ್ಲಾನ್ ಗಳನ್ನೂ ಹುಡುಕುತ್ತಿದ್ದಾರೆ.

ಮಾಸಿಕ ಮತ್ತು ವಾರ್ಷಿಕ ರಿಚಾರ್ಜ್ ಪ್ಲಾನ್ ಗಳಿಗಿಂತ ತ್ರೈಮಾಸಿಕ ರಿಚಾರ್ಜ್ ಪ್ಲಾನ್ ಗಳು ಬಳಕೆದಾರರ ಹಣವನ್ನು ಉಳಿಸುತ್ತದೆ ಎನ್ನಬಹುದು. ಸದ್ಯ Airtel ತನ್ನ ಬಳಕೆದಾರರಿಗಾಗಿ ಹೆಚ್ಚಿನ ಪ್ರಯೋಜನ ನೀಡುವ 90 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಹೌದು, ಏರ್ಟೆಲ್ ಬಳಕೆದಾರರು ಇನ್ನುಮುಂದೆ ಈ ಬೆಲೆಯಲ್ಲಿ ತ್ರೈಮಸಿಕ ಯೋಜನೆಯನ್ನು ಪಡೆಯಬಹುದು. ಏರ್ಟೆಲ್ ರಿಚಾರ್ಜ್ ಪ್ಲಾನ್ ನ ಬಗ್ಗೆ ಮಾಹಿತಿ ಇಲ್ಲಿದೆ.

Airtel Recharge Plan
Image Credit: Airtel

ಜಿಯೋಗಿಂತ ಅಗ್ಗದ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್
ಏರ್‌ ಟೆಲ್ ತನ್ನ ಗ್ರಾಹಕರಿಗೆ ರೂ. 929 ರ ಉತ್ತಮ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯನ್ನು ರೀಚಾರ್ಜ್ ಮಾಡಿದ ನಂತರ ನೀವು ಪ್ರತಿದಿನ 1.5GB ಡೇಟಾವನ್ನು 90 ದಿನಗಳ ಅನಿಯಮಿತ ಕರೆಗಳಿಗೆ ಮತ್ತು ಪ್ರತಿದಿನ 100 SMS ಅನ್ನು ಪಡೆಯುತ್ತೀರಿ. ಈ ಯೋಜನೆಯನ್ನು 929 ರೂ.ಗೆ ರೀಚಾರ್ಜ್ ಮಾಡಿದ ನಂತರ ನೀವು 90 ದಿನಗಳವರೆಗೆ ರೀಚಾರ್ಜ್ ಮಾಡುವ ಚಿಂತೆಯಿಂದ ಮುಕ್ತರಾಗುತ್ತೀರಿ. ಅಂದರೆ ಮೂರು ತಿಂಗಳ ಕಾಲ ರೂ. 929 ಯೋಜನೆಯು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇನ್ನು ಏರ್ಟೆಲ್ ಕಡಿಮೆ ಬೆಲೆಯಲ್ಲಿ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ಕೂಡ ಪರಿಚಯಿಸಿದೆ.

ಏರ್ ಟೆಲ್ 1999 ರೂ. ರಿಚಾರ್ಜ್ ಪ್ಲಾನ್ ಡಿಟೈಲ್ಸ್
ಏರ್‌ಟೆಲ್ ಟೆಲಿಕಾಂ 1999 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ವಾರ್ಷಿಕ ಯೋಜನೆಯಾಗಿದೆ. ಅಲ್ಲದೆ, ಈ ವಾರ್ಷಿಕ ರೀಚಾರ್ಜ್ ಯೋಜನೆಯ ಪೂರ್ಣ ಮಾನ್ಯತೆಯ ಅವಧಿಗೆ ಒಟ್ಟು 24 GB ಡೇಟಾ ಸೌಲಭ್ಯ ಲಭ್ಯವಿದೆ. ಇದರೊಂದಿಗೆ ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ಮತ್ತು ಅನಿಯಮಿತ ಧ್ವನಿ ಕರೆಗಳು ಸಹ ಲಭ್ಯವಿವೆ. ಅಲ್ಲದೆ, ಏರ್‌ ಟೆಲ್‌ ನ ಈ ಯೋಜನೆಯಲ್ಲಿ ಉಚಿತ ಹಲೋ ಟ್ಯೂನ್ ಮತ್ತು ವಿಂಕ್ ಮ್ಯೂಸಿಕ್ ಸೇವೆಗಳು ಸಹ ಲಭ್ಯವಿದೆ.

Airtel Recharge Plan For 90 Days
Image Credit: Mysmartprice

Join Nadunudi News WhatsApp Group

Join Nadunudi News WhatsApp Group