Airtel Recharge Price: ಏರ್ಟೆಲ್ ಸಿಮ್ ಬಳಸುವವರಿಗೆ ಬೇಸರದ ಸುದ್ದಿ, ಇನ್ಮುಂದೆ ಕೊಡಬೇಕು ಹೆಚ್ಚು ಹಣ

ಜಿಯೋ ಬೆನ್ನಲ್ಲೇ ಏರ್ಟೆಲ್ ಯೋಜನೆಗಳ ದರ ಹೆಚ್ಚಳ...!

Airtel Recharge Price Hike: ಸದ್ಯ ಭಾರತೀಯ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಮೇಲಿಂದ ಮೇಲೆ ಶಾಕ್ ನೀಡುತ್ತಿದೆ. ಹೌದು, ದೇಶದಲ್ಲಿ 5G ಸೇವೆಯನ್ನು ನೀಡುತ್ತಿರುವ Jio ಮತ್ತು Airtel ಸದ್ಯ ತನ್ನ ಬಳಕೆದಾರರಿಗೆ ಬೇಸರದ ಸುದ್ದಿಯನ್ನು ನೀಡಿದೆ. ಇನ್ನು ಸರ್ಕಾರೀ ಸ್ವಾಮ್ಯದ ಟೆಲಿಕಾಂ ನೆಟ್ವರ್ಕ್ ಕಂಪನಿಯಾದ BSNL ಗೆ ಹೋಲಿಸಿದರೆ ಐಟೆಲ್ ಮತ್ತು ಜಿಯೋ ರಿಚಾರ್ಜ್ ಪ್ಲಾನ್ ಗಳ ದರ ಹೆಚ್ಚಿದೆ.

ಅದರಲ್ಲೂ ಜಿಯೋ ರಿಚಾರ್ಜ್ ಪ್ಲಾನ್ ಗಳಿಂಗಿಂತ ಏರ್ಟೆಲ್ ನ ಕೆಲ ಪ್ಲಾನ್ ಗಳ ದರ ಹೆಚ್ಚಿದೆ. ಹೀಗುರುವಾಗ ದೇಶದ ಈ ಎರಡು ಜನಪ್ರಿಯ ಟೆಲಿಕಾಂ ನೆಟ್ವರ್ಕ್ ಗಳು ಇದೀಗ ಮತ್ತೆ ತನ್ನ ರಿಚಾರ್ಜ್ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ಮೂಲಕ ಬಳಕೆದಾರರಿಗೆ ಶಾಕ್ ನೀಡಿದೆ ಎನ್ನಬಹುದು.

Airtel Recharge Price Hike
Image Credit: Times Now

ಏರ್ಟೆಲ್ ಗ್ರಾಹಕರಿಗೂ ಬಿಗ್ ಶಾಕ್
ರಿಲಯನ್ಸ್ ಜಿಯೋ ಗುರುವಾರ (June 27) ತನ್ನ ಪ್ರಿಪೇಯ್ಡ್ ಯೋಜನೆಗಳ ಮೇಲೆ 20% ಸುಂಕ ಹೆಚ್ಚಳವನ್ನು ಘೋಷಿಸಿತು. ಎರಡೂವರೆ ವರ್ಷಗಳ ಬಳಿಕ ಇದು ಮೊದಲ ಬೆಲೆ ಏರಿಕೆಯಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಹರಾಜಿನಲ್ಲಿ 1800 MHz ಬ್ಯಾಂಡ್‌ ನಲ್ಲಿ 973 ಕೋಟಿ ರೂ.ಗೆ 14.4 MHz ಸ್ಪೆಕ್ಟ್ರಮ್ ಅನ್ನು Jio ಸ್ವಾಧೀನಪಡಿಸಿಕೊಂಡ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. ಒಟ್ಟಾರೆಯಾಗಿ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ದೊಡ್ಡ ಆಘಾತವಾಗಿ ಸುಂಕದ ದರವು 20% ರಷ್ಟು ಹೆಚ್ಚಾಗಲಿದೆ. ಇನ್ನು ಜಿಯೋ ತನ್ನ ಯೋಜನೆಗಳ ದರವನ್ನು ಹೆಚ್ಚಿಸಿದ ಒಂದು ದಿನದ ಬಳಿಕ ಇದೀಗ Airtel ಕೂಡ ರಿಚಾರ್ಜ್ ದರವನ್ನು ಹೆಚ್ಚಿಸಿದೆ. ಏರ್ಟೆಲ್ ಗ್ರಾಹಕರು ಕೂಡ ಇನ್ನುಮುಂದೆ ಹೆಚ್ಚು ಹಣವನ್ನು ನೀಡಿ ರಿಚಾರ್ಜ್ ಮಾಡಿಸಿಕೊಳಬೇಕಾಗಿದೆ.

ಜಿಯೋ ಬೆನ್ನಲ್ಲೇ ಏರ್ಟೆಲ್ ಯೋಜನೆಗಳ ದರ ಹೆಚ್ಚಳ…!
ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳ ಮೇಲೆ 20% ಸುಂಕ ಹೆಚ್ಚಳವನ್ನು ಘೋಷಿಸಿದ ಬೆನ್ನಲ್ಲೇ Airtel ಕೂಡ ತನ್ನ ಯೋಜನೆಗಳ ದರವನ್ನು ಹೆಚ್ಚಿಸಿದೆ. ಜಿಯೋ ಟೆಲಿಕಾಂ ಜೂನ್ 27 ರಂದು ಯೋಜನೆಗಳ ದರವನ್ನು ಹೆಚ್ಚಿಸಿದರೆ ಏರ್ಟೆಲ್ ಜೂನ್ 28 ರಂದು ಇಯೋಜನೆಗಳ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಸದ್ಯ ಜಿಯೋ ಯೋಜನೆಗಳ ದರದ ಹೆಚ್ಚಳದ ಬೆನ್ನಲ್ಲೇ ಏರ್ಟೆಲ್ 10 -21% ರಷ್ಟು ಹೆಚ್ಚಿಸಿದೆ. ಏರ್ಟೆಲ್ ನ ಹೊಸ ದರವು ಜುಲೈ 3 ರಿಂದ ಅನ್ವಯವಾಗಲಿದೆ. ಭಾರತದಲ್ಲಿ ಟೆಲಿಕಾಂ ಕಂಪನಿಗಳಿಗೆ ಆರ್ಥಿಕವಾಗಿ ಆರೋಗ್ಯಕರ ವ್ಯಾಪಾರ ಮಾದರಿಯನ್ನು ಸಕ್ರಿಯಗೊಳಿಸಲು ಮೊಬೈಲ್ ಸರಾಸರಿ ಆದಾಯ 300 ಗಿಂತ ಹೆಚ್ಚಾಗಿರಬೇಕು ಎಂದು ಭಾರ್ತಿ ಏರ್ಟೆಲ್ ಹೇಳಿದೆ.

Airtel Recharge Price Hike News
Image Credit: ABP live

Join Nadunudi News WhatsApp Group

Join Nadunudi News WhatsApp Group