Ambani And Tata: ಒಂದಾದ ಅಂಬಾನಿ ಮತ್ತು ಟಾಟಾ, ಇನ್ಮುಂದೆ ಯಾರು ಕೂಡ ಪೆಟ್ರೋಲ್ ಖರೀದಿಸುವ ಅಗತ್ಯ ಇಲ್ಲ.

ವಾಹನ ಸವಾರರ ಇಂಧನದ ಖರ್ಚು ಉಳಿಸಲು ಕೇಂದ್ರ ಸರ್ಕಾರ ಹೊಸ ಯೋಜನೆ.

Ambani And Tata GH2 Scheme: ದೇಶಿಯ ಆಟೋ ವಲಯದಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳು ಆಗಿವೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ, ವಿಭಿನ್ನ ವಿನ್ಯಾಸದ ವಾಹನಗಳು ಮಾರುಕಟ್ಟೆಯನ್ನು ಪ್ರವೇಶಿಸಿದೆ. ಪ್ರಸ್ತುತ ದೇಶದಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆಯಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕೊಂಚ ಅಧಿಕವಾಗಿದೆ ಎನ್ನಬಹುದು.

ಈ ಕಾರಣಕ್ಕೆ ಜನರು ಎಲೆಕ್ಟ್ರಿಕ್, ಪೆಟ್ರೋಲ್, ಡೀಸೆಲ್, CNG ಚಾಲಿತ ವಾಹನಗಳಲ್ಲಿ ಯಾವ ಮಾದರಿಯ ವಾಹನವನ್ನು ಖರೀದಿಸಬೇಕೆನ್ನುವ ಗೊಂದಲದಲ್ಲಿದ್ದಾರೆ ಎನ್ನಬಹುದು. ಸದ್ಯ ಕೇಂದ್ರ ಸರ್ಕಾರ ಜನರ ಈ ಗೊಂದಲಕ್ಕೆ ಪರಿಹಾರವನ್ನು ಕಂಡು ಹಿಡಿದಿದೆ ಎನ್ನಬಹುದು. ಇದೀಗ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ಮುಂದಾಗಿದೆ.

Tata Group And Mukesh Ambani
Image Credit: Bizzbuzz

ಒಂದಾದ ಅಂಬಾನಿ ಮತ್ತು ಟಾಟಾ
ಸದ್ಯ ಕೇಂದ್ರ ಸರ್ಕಾರ GH2 ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಅಂಬಾನಿ, ಟಾಟಾ, ಇಂಡಿಯನ್ ಆಯಿಲ್ ನಂತಹ ದೊಡ್ಡ ಕಂಪನಿಗಳು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿವೆ. ಇನ್ನು ಹತ್ತು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಕಾರುಗಳು ಕಣ್ಮರೆಯಾಗಲಿವೆ ಎನ್ನಲಾಗುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಾರಿಗೆ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿವೆ.

ಅಂಬಾನಿ, ತಾಲಾ ಮತ್ತು ಇಂಡಿಯನ್ ಆಯಿಲ್‌ ನಂತಹ ದೊಡ್ಡ ಕಂಪನಿಗಳು ಸಾರಿಗೆ ವಲಯದಲ್ಲಿ ಹಸಿರು ಮತ್ತು ಬೂದು ಹೈಡ್ರೋಜನ್ (GH2) ಅನ್ನು ಬಳಸಲು ಸರ್ಕಾರದ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡ್ ಮಾಡಿವೆ. ದೇಶದಲ್ಲಿ ಕಚ್ಚಾ ತೈಲ ಬಳಕೆ ಮತ್ತು ಆಮದುಗಳನ್ನು ಕಡಿಮೆ ಮಾಡುವ ತನ್ನ ಕಾರ್ಯಕ್ರಮದ ಭಾಗವಾಗಿ, ಕೇಂದ್ರ ಸರ್ಕಾರವು ಗ್ರೀನ್ ಗ್ರೇ ಹೈಡ್ರೋಜನ್ ಯೋಜನೆಯನ್ನು ಮುಂದಕ್ಕೆ ತೆಗೆದುಕೊಳ್ಳುತ್ತಿದೆ.

Central Govt GH2 Scheme
Image Credit: Twitter

ಇನ್ಮುಂದೆ ಯಾರು ಕೂಡ ಪೆಟ್ರೋಲ್ ಖರೀದಿಸುವ ಅಗತ್ಯ ಇಲ್ಲ
ಕೇಂದ್ರ ಸರ್ಕಾರ GH2 ಯೋಜನೆಯನ್ನು ಜಾರಿಗೊಳಿಸಿದರೆ ಇದರಿಂದ ವಾಹನ ಸವಾರರಿಗೆ ಹೆಚ್ಚು ಅನುಕೂಲವಾಗಲಿದೆ. ವಾಹನ ಸವಾರರ ಇಂಧನದ ಖರ್ಚು ಸಾಕಷ್ಟು ಉಳಿಯಲಿದೆ. ಇತ್ತೀಚಿನ ದಿನದಲ್ಲಿ ವಾಹನವನ್ನು ಖರೀದಿಸದರು ಕೂಡ ಅದರ ನಿರ್ವಹಣೆ ಕಷ್ಟವಾಗುತ್ತಿದೆ ಎಂದರೆ ತಪ್ಪಾಗಲಾರದು.

Join Nadunudi News WhatsApp Group

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನರನ್ನು ಕಂಗಳು ಮಾಡಿದೆ ಎನ್ನಬಹುದು. ಹೈಡ್ರೋಜನ್ ಅನ್ನು ದೇಶೀಯವಾಗಿ ಉತ್ಪಾದಿಸಿದರೆ, ಅದು ಹೆಚ್ಚು ಅಗ್ಗವಾಗುತ್ತದೆ. ಈ ಮೂಲಕ ವಾಹನ ಸವಾರರು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಗೆ 100 ರೂ.ಗಿಂತ ಹೆಚ್ಚು ಪಾವತಿಸಬೇಕಾಗಿಲ್ಲ. ಪ್ರತಿ ಕಿ.ಮೀ.ಗೆ ರೂ. 20 ರಿಂದ ರೂ. 30 ಕ್ಕಿಂತ ಹೆಚ್ಚು ಮೈಲೇಜ್ ನೀಡುವ ಹೈಡ್ರೋಜನ್ ವಾಹನಗಳನ್ನು ಓಡಿಸಬಹುದು.

Ambani And Tata GH2 Scheme
Image Credit: Gqindia

Join Nadunudi News WhatsApp Group