Ambani Reliance: ದೇಶದ ಎಲ್ಲಾ ಮಕ್ಕಳಿಗಾಗಿ ಹೊಸ ಉದ್ಯಮ ಆರಂಭಿಸಿದ ಮುಕೇಶ್ ಅಂಬಾನಿ, ಒಪ್ಪಂದಕ್ಕೆ ಸಹಿ.

ಮಕ್ಕಳ ಆಟಿಕೆಗಳ ವ್ಯವಹಾರ ಆರಂಭ ಮಾಡಿದ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ.

Mukesh Ambani Toys Business: ದೇಶಿಯ ಮಾರುಕಟ್ಟೆಯಲ್ಲಿ ಮಕ್ಕಳ ಆಟಿಕೆ (Children’s Toy) ತಯಾರಿಸಲು ಸಾಕಷ್ಟು ಪ್ರತಿಷ್ಠಿತ ಕಂಪನಿಗಳಿವೆ. ಇದೀಗ ಮುಕೇಶ್ ಅಂಬಾನಿ (Mukesh Ambani) ಅವರು ಹೊಸ ಉದ್ಯಮ ಪ್ರಾರಂಭಿಸುವ ಮೂಲಕ ದೇಶದ ಮಕ್ಕಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಅಂಬಾನಿ ರಿಲಯನ್ಸ್ (Ambani Reliance) ಕಂಪನಿ ಇದೀಗ ಹರಿಯಾಣ ಮೂಲದ ಮಕ್ಕಳ ಆಟಿಕೆ ತಯಾರಿಸುವ ಸ್ಥಳೀಯ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

Mukesh Ambani Toys Business
Image Source: RVCJ Media

ದೇಶದ ಎಲ್ಲಾ ಮಕ್ಕಳಿಗೆ ಗುಡ್ ನ್ಯೂಸ್ ಕೊಟ್ಟ ಮುಕೇಶ್ ಅಂಬಾನಿ
ಅಂಬಾನಿಯ ರಿಲಯನ್ಸ್ ಕಂಪನಿ ಇದೀಗ ಹೊಸ ಉದ್ಯಮವನ್ನು ಶುರು ಮಾಡಿದೆ. ‘ವಿನ್ಯಾಸದಿಂದ ಉತ್ಪಾದನೆ, ಉತ್ಪಾದನೆಯಿಂದ ಮಾರಾಟದ ವರೆಗೆ’ ಎಂದು ಹೊಸ ಯೋಜನೆಯನ್ನು ರೂಪಿಸುತ್ತಿದೆ. ಹರಿಯಾಣದ ಮಾಕ್ಕಳ ಆಟಿಕೆ ತಯಾರಿಸುವ ಸ್ಥಳೀಯ ಕಂಪನಿಯಾದ ಸೋನಿಪತ್ ನ ಸರ್ಕಲ್ ಇ- ರಿಟೇಲ್ (Circle E Retail) ಜೊತೆ ಅಂಬಾನಿ ರಿಲೇನ್ಸ್ ಜಂಟಿ ಉದ್ಯಮ ಒಪ್ಪಂದ ಮಾಡಿಕೊಂಡಿದೆ.

Mukesh Ambani Toys Business
Image Source: Mumbai Live

ಸೋನಿಪತ್ ನ ಸರ್ಕಲ್ ಇ- ರಿಟೇಲ್ ಜೊತೆ ಅಂಬಾನಿ ರಿಲಯನ್ಸ್ ಒಪ್ಪಂದ
ಇನ್ನು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ರಿಟೇಲ್ ಈಗಾಗಲೇ ಸಾಕಷ್ಟು ಪ್ರಸಿದ್ಧ ಆಟಿಕೆ ತಯಾರಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಬ್ರಿಟಿಷ್ ಬ್ರ್ಯಾಂಡ್‌ ಹ್ಯಾಮ್ಲೆಸ್ ಮತ್ತು ರೋವನ್ ಬ್ರ್ಯಾಂಡ್‌ ಗಳ ಜೊತೆ ಅಂಬಾನಿ ರಿಲಯನ್ಸ್ ರಿಟೇಲ್ ಒಪ್ಪಂದ ಮಾಡಿಕೊಂಡಿದೆ.

ಸೋನಿಪತ್ ನ ಸರ್ಕಲ್ ಇ- ರಿಟೇಲ್ ಆಟಿಕೆ ತಯಾರಿಕೆಯಲ್ಲಿ ಸಾಕಷ್ಟು ಹೆಸರು ಗಳಿಸಿದೆ. ಸಾಂಪ್ರದಾಯಿಕ ಅನುಭವ ಮತ್ತು ಆಧುನಿಕತೆಯ ವಿನ್ಯಾಸವನ್ನು ಒಳಗೊಂಡ ಪ್ರಸಿದ್ಧ ಕಂಪನಿಯಾಗಿದೆ.

Join Nadunudi News WhatsApp Group

Mukesh Ambani Toys Business
Image Source: The Economic Times

Join Nadunudi News WhatsApp Group