Anant Ambani Invitation Card: ಮಗನ ಮದುವೆಗೆ ಅಂಬಾನಿ ಮಾಡಿಸಿದ್ದು ದುಬಾರಿ ಆಮಂತ್ರಣ ಪತ್ರಿಕೆ, ಅಷ್ಟಕ್ಕೂ ಬೆಲೆ ಎಷ್ಟು ಗೊತ್ತಾ…?

ಅನಂತ್ ಅಂಬಾನಿ ಆಮಂತ್ರಣ ಪತ್ರಿಕೆಯ ಬೆಲೆ ಎಷ್ಟು ಗೊತ್ತಾ...?

Anant Ambani Invitation Card Cost: ಮುಕೇಶ್ ಅಂಬಾನಿ ಮಗನ ಮದುವೆ ಯಾವ ಮಟ್ಟದಲ್ಲಿ ನಡೆದಿದೆ ಎನ್ನುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಎಲ್ಲರು ಅಚ್ಚರಿಗೊಳ್ಳುವಂತೆ ಮುಕೇಶ್ ಅಂಬಾನಿ ತಮ್ಮ ಮಗನ ಮದುವೆಯನ್ನು ಬಹಳ ಅದ್ದೂರಿಯಾಗಿ ನೆರವೇರಿಸಿದರು. ವರ್ಷದ ಹಿಂದೆಯೇ ಅಂಬಾನಿ ತನ್ನ ಮಗನ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಜುಲೈ 12 ರಂದು ಅನಂತ್ ಹಾಗೂ ರಾಧಿಕಾ ಮದುವೆ ನೆರವೇರಿತ್ತು. ಸಾಕಷ್ಟು ಗಣ್ಯರ ಸಮ್ಮುಖದಲ್ಲಿ ಅನಂತ್ ಹಾಗೂ ರಾಧಿಕಾ ಹಸೆಮಣೆ ಏರಿದ್ದರು.

ಸಾವಿರಾರು ಕೋಟಿ ವೆಚ್ಚದಲ್ಲಿ ನೆರವೇರಿದ ಅನಂತ್ ಅಂಬಾನಿ ಮದುವೆ ಈಗಲೂ ಕೂಡ ಚರ್ಚೆ ಕಾರಣವಾಗಿದೆ. ಅದರಲ್ಲೂ ಅನಂತ್ ಅಂಬಾನಿ ಮದುವೆಯ Invitation Card ಎಲ್ಲರ ಗಮನ ಸೆಳೆದಿದೆ ಎನ್ನಬಹುದು. ಮದುವೆಯ ಆಮಂತ್ರಣ ಪತ್ರಿಕೆ ಈಗಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕು, ಈ ಅತ್ಯಾಕರ್ಷಕ ಆಮಂತ್ರಣ ಪತ್ರಿಕೆಯ ಬೆಲೆ ಎಷ್ಟಿರಬಹುದು ಎಂದು ಎಲ್ಲರು ಯೋಚಿಸುತ್ತಿದ್ದಾರೆ. ನಾವೀಗ ಈ ಲೇಖನದಲ್ಲಿ ಅನಂತ್ ಅಂಬಾನಿ ಮದುವೆಯ ಆಮಂತ್ರಣ ಪತ್ರಿಕೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

Anant Ambani Invitation Card Cost
Image Credit: Indiatimes

ಮಗನ ಮದುವೆಗೆ ಅಂಬಾನಿ ಮಾಡಿಸಿದ್ದು ದುಬಾರಿ ಆಮಂತ್ರಣ ಪತ್ರಿಕೆ
ಅನಂತ್ ಹಾಗೂ ರಾಧಿಕಾ ವಿವಾಹ ಸಮಾರಂಭಕ್ಕೆ ಗಣ್ಯರನ್ನು ಆಹ್ವಾನಿಸಲು ಅಂಬಾನಿ ಕುಟುಂಬ ವಿಶೇಷ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿತ್ತು. ಒಂದು ಬಾಕ್ಸ್ ನಲ್ಲಿ ಸಣ್ಣ ದೇವರ ಗುಡಿ ಹಾಗೂ ಹಿಂದೂ ದೇವರ ವಿಗ್ರಹಗಳಿರುವ ಚೌಕಟ್ಟನ್ನು ಜೊತೆಗೆ ವಿಶೇಷವಾಗಿ ತಯಾರಿಸಿರುವ ನಾಲ್ಕೈದು ಪುಟಗಳಿರುವ ಆಮಂತ್ರಣ ಪತ್ರಿಕೆಯನ್ನು ಸಿದ್ದಪಡಿಸಲಾಗಿತ್ತು.

ಈ ವಿಶೇಷ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದ್ದು, ಆಮಂತ್ರಣ ಪತ್ರಿಕೆಯನ್ನು ಕಂಡು ಎಲ್ಲರು ಆಶ್ಚರ್ಯಗೊಂಡಿದ್ದರು. ಆಮಂತ್ರಣ ಪತ್ರದಲ್ಲಿ ಬೆಳ್ಳಿಯ ಲೇಪಿತ ಸಣ್ಣ ದೇವಾಲಯ, ವಿವಿಧ ಫೋಟೋಗಳು ಮತ್ತು ಹಿಂದೂ ದೇವರುಗಳ ವಿಗ್ರಹಗಳನ್ನು ತೋರಿಸುತ್ತದೆ. ಆಮಂತ್ರಣ ಪತ್ರದ ಒಳಗಿರುವ ಪೆಟ್ಟಿಗೆಯನ್ನು ತೆರೆಯುತ್ತಿದ್ದಂತೆಯೇ ಹಿಂದಿ ಮಂತ್ರಘೋಷಗಳು ಕೇಳಿಸುತ್ತದೆ. ನಂತರ ಮೂರು ದಿನಗಳ ಮದುವೆ ಕಾರ್ಯಕ್ರಮದ ಎಲ್ಲ ಸಂಪೂರ್ಣ ವಿವರಗಳಿತ್ತು.

Anant Ambani Wedding
Image Credit: Original Source

ಅಷ್ಟಕ್ಕೂ ಆಮಂತ್ರಣ ಪತ್ರಿಕೆಯ ಬೆಲೆ ಎಷ್ಟು ಗೊತ್ತಾ…?
ಮದುವೆಯ ಸಮಯದಲ್ಲಿ ಅನಂತ್ ಅಂಬಾನಿ ಮದುವೆಯ ಇನ್ವಿಟೇಷನ್ ಎಲ್ಲರ ಗಮನ ಸೆಳೆದಿತ್ತು ಎನ್ನಬಹುದು. ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಅನಂತ್ ಅಂಬಾನಿ ಮದುವೆಯ ಆಮಂತ್ರಣ ಪತ್ರಿಕೆಯ ಬೆಲೆ ಸುಮಾರು 6 ರಿಂದ 7 ಲಕ್ಷ ರೂ. ಎನ್ನಲಾಗುತ್ತಿದೆ. ಒಂದು ಅದ್ದೂರಿ ಮದುವೆಯನ್ನೇ ಮಾಡಬಹುದಾದ ಹಣವನ್ನು ಅಂಬಾನಿ ಕೇವಲ ಮದುವೆ ಆಮಂತ್ರಣ ಪತ್ರಿಕೆಗೆ ಖರ್ಚು ಮಾಡಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ ಎನ್ನಬಹುದು. ಇನ್ನು ಅಂಬಾನಿ ತಮ್ಮ ಮಗನ ಮದುವೆಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದು, ಮದುವೆ ಮುಗಿದರು ಕೂಡ ಮದುವೆಯ ಬಗ್ಗೆ ಒಂದೊಂದೇ ಸುದ್ದಿಗಳು ವೈರಲ್ ಆಗುತ್ತಿವೆ.

Join Nadunudi News WhatsApp Group

Anant Ambani Invitation Card
Image Credit: mashable

Join Nadunudi News WhatsApp Group