iPhone In Android: ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಐಫೋನ್ ಆಗಿ ಬದಲಿಸುವುದು ಹೇಗೆ…? ಇಲ್ಲಿದೆ ಟ್ರಿಕ್

ಆಂಡ್ರಾಯ್ಡ್ ಫೋನ್ ಅನ್ನು ಐಫೋನ್ ಆಗಿ ಬದಲಿಸಲು ಈ ರೀತಿ ಮಾಡಿ..?

Android Phone Can Be Converted Into iPhone: ದೇಶದ ದುಬಾರಿ ಬ್ರಾಂಡ್ ಆಗಿ iPhone ಗುರುತಿಸಿಕೊಂಡಿದೆ. ಈ ದುಬಾರಿ ಐಫೋನ್ ಖರೀದಿಯ ಅಸೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಆದರೆ ಬಜೆಟ್ ನ ಕೊರತೆಯಿಂದಾಗಿ ಅದೆಷ್ಟೋ ಜನರ ಐಫೋನ್ ಖರೀದಿಯ ಕನಸು ಹಾಗೆಯೇ ಉಳಿದಿದೆ ಎನ್ನಬಹುದು.

ಇನ್ನು ನಿಮ್ಮ ಐಫೋನ್ ಖರೀದಿಸುವ ಆಸೆಯನ್ನು ನೀವು ಕ್ಷಣಾರ್ಧದಲ್ಲಿ ನನಸು ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಹೊಸ ಐಫೋನ್ ಖರೀದಿಸಬೇಕೆಂದಿಲ್ಲ. ಬದಲಾಗಿ ನಿಮ್ಮ ಬಳಿ ಇರುವ ಆಂಡ್ರಾಯ್ಡ್ ಫೋನ್ ಅನ್ನು ನೀವು ಐಫೋನ್ ಆಗಿ ಬದಲಿಸಿಕೊಳ್ಳಬಹುದು.

Android Phone Can Be Converted Into iPhone
Image Credit: uswitch

ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಐಫೋನ್ ಆಗಿ ಬದಲಿಸಿಕೊಳ್ಳಬಹುದು
ನಿಮ್ಮ Android ಫೋನ್ ಅನ್ನು ಐಫೋನ್‌ ನಂತೆ ಮಾಡಲು ನೀವು ಬಯಸಿದರೆ, ಈ ಟ್ರಿಕ್ ಅನ್ನು ಬಳಸಿ. ಈ ಟ್ರಿಕ್ ಮೂಲಕ, ನಿಮ್ಮ Android ಫೋನ್‌ ನಲ್ಲಿ ನೀವು iPhone ಅನುಭವವನ್ನು ಪಡೆಯಬಹುದು. ನಿಮ್ಮ ಫೋನ್‌ ನ ಹೋಮ್ ಸ್ಕ್ರೀನ್, ಅಪ್ಲಿಕೇಶನ್ ಐಕಾನ್‌ ಗಳು, ವಿಜೆಟ್‌ ಗಳು ಮತ್ತು iPhone ತರಹದ ಲಾಕ್ ಸ್ಕ್ರೀನ್ ಅನ್ನು ಸಹ ನೀವು ಬದಲಾಯಿಸಬಹುದು. ಈ ಮೂಲಕ ನೀವು ಐಫೋನ್ ಅನ್ನು ಬಳಸಬಹುದು

ಆಂಡ್ರಾಯ್ಡ್ ಫೋನ್ ಅನ್ನು ಐಫೋನ್ ಆಗಿ ಬದಲಿಸಲು ಏನು ಮಾಡಬೇಕು..?
•ನಿಮ್ಮ Android ಫೋನ್‌ ನಲ್ಲಿ Google Play Store ಗೆ ಹೋಗಿ ಮತ್ತು iPhone 15 Launcher ಎಂದು ಟೈಪ್ ಮಾಡಿ ಮತ್ತು ಹುಡುಕಿ.

•ನಂತರ ಅಪ್ಲಿಕೇಶನ್ ಅನ್ನು Install ಮಾಡಿ ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ ಮತ್ತು ಅನುಮತಿಯನ್ನು ನೀಡಿ.

Join Nadunudi News WhatsApp Group

•ಈಗ ನೀವು ನಿಮ್ಮ ಆಯ್ಕೆಯ ಪ್ರಕಾರ ಅಪ್ಲಿಕೇಶನ್ ಅನ್ನು ಕಸ್ಟಮೈಸ್ ಮಾಡಬಹುದು.

•ನಿಮ್ಮ ಫೋನ್‌ ನ ಹೋಮ್ ಸ್ಕ್ರೀನ್ ಲೇಔಟ್, ಅಪ್ಲಿಕೇಶನ್ ಐಕಾನ್‌ ಗಳು, ವಿಜೆಟ್‌ ಗಳು ಮತ್ತು ಲಾಕ್ ಸ್ಕ್ರೀನ್ ಅನ್ನು ಐಫೋನ್ ನಂತೆ ಬದಲಿಸಿಕೊಳ್ಳಬಹುದು.

Join Nadunudi News WhatsApp Group