Aniruddha Jatkar Latest: ಧರಣಿಗೆ ಕುಳಿತ ನಟ ಅನಿರುದ್ಧ, ಆರೋಗ್ಯ ಸಿಬ್ಬಂದಿ ಕೋವಿಡ್ ಕಾಲದ ದೇವರು.

Actor Aniruddha Jatkar About Health Worker: ಕನ್ನಡದ ಖ್ಯಾತ ನಟ ಅನಿರುದ್ಧ ಜಟ್ಕರ್ (Aniruddha Jatkar)ಇದೀಗ ಸುದ್ದಿಯಲ್ಲಿದ್ದಾರೆ. ನಟ ಅನಿರುದ್ಧ ಜಟ್ಕರ್ ಸಿನಿಮಾ ಮಾತ್ರವಲ್ಲದೆ ಧಾರಾವಾಹಿಯಲ್ಲಿ ನಟಿಸಿ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ನಟ ಅನಿರುದ್ಧ ಅವರು ಕಿರುತೆರೆಯಲ್ಲೂ ಸಕ್ರಿಯರಾಗಿರುವ ನಟ ಎನ್ನಬಹುದು. ನಟ ಅನಿರುದ್ಧ ಅವರು ಇದೀಗ ಮುಷ್ಕರ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿದೆ.

Actor Aniruddha sat on a sit-in over the issue of health care
Image Credit: instagram

ಒಳಗುತ್ತಿಗೆ ನೌಕರರ ಮುಷ್ಕರಕ್ಕೆ ಜೊತೆಯಾದ ನಟ ಅನಿರುದ್ಧ ಜಟ್ಕರ್
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಳಗುತ್ತಿದೆ ನೌಕರರು ಹಲವು ದಿನಗಳಿಂದ ಧರಣಿಗೆ ಕೂತಿದ್ದಾರೆ. ಒಳಗುತ್ತಿಗೆಯ ನೌಕರರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಮತ್ತು ಕನಿಷ್ಠ ವೇತನ ಜಾರಿಗೊಳಿಸಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಮುಷ್ಕರ ನಡೆಸಿದ್ದಾರೆ. ಈ ಧರಣಿಗೆ ಬೆಂಬಲಿಸಿ ನಟ ಅನಿರುದ್ಧ ಜಟ್ಕರ್ ಕೂಡ ಜೊತೆಯಾಗಿದ್ದಾರೆ.

Actor Anirudh Jatkar stood with the strike of health department employees
Image Credit: instagram

ಒಳಗುತ್ತಿದೆ ನೌಕರರ ಬೆನ್ನಿಗೆ ನಿಂತ ನಟ ಅನಿರುದ್ಧ ಜಟ್ಕರ್
ಈ ಹಿಂದೆ ಪೌರ ಕಾರ್ಮಿಕರ ಪರವಾಗಿಯೂ ನಟ ಅನಿರುದ್ಧ ಮಾತನಾಡಿದ್ದರು. ಅವರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

 

View this post on Instagram

 

A post shared by Aniruddha Jatkar (@aniruddhajatkar)

ಇದೀಗ ಆರೋಗ್ಯ ಇಲಾಖೆಯ ಒಳಗುತ್ತಿಗೆಯ ನೌಕರರ ಬೆನ್ನಿಗೆ ನಿಂತಿದ್ದಾರೆ. ಹೋರಾಟ ಸ್ಥಳಕ್ಕೆ ಆಗಮಿಸಿದ ಅವರು, ಹಲವು ಗಂಟೆಗಳ ಕಾಲ ಅವರೊಂದಿಗೆ ಧರಣಿಗೂ ಕೂತಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುವಂತೆ ನಟ ಅನಿರುದ್ಧ ಜಟ್ಕರ್ ಒತ್ತಾಯಿಸಿದ್ದಾರೆ.

Join Nadunudi News WhatsApp Group

Health workers were gods to us in the time of Covid. Today those gods have come to the streets. Appeared on the street. They are asking for their fair demand. The government should immediately respond to their pain. He said that justice should be done. Aniruddha said
Image Credit: instagram

ಆರೋಗ್ಯ ಸಿಬ್ಬಂದಿ ಬಗ್ಗೆ ಮಾತನಾಡಿದ ನಟ ಅನಿರುದ್ಧ
ಈ ಕುರಿತು ನಟ ಅನಿರುದ್ಧ ಜಟ್ಕರ್ ಮಾದ್ಯಮಗಳೊಂದಿದೆ ಮಾತನಾಡಿದ್ದಾರೆ. ಆರೋಗ್ಯ ಸಿಬ್ಬಂದಿ ನಮಗೆ ಕೋವಿಡ್ ಕಾಲದ ದೇವರು ಆಗಿದ್ದರು. ಇಂದು ಆ ದೇವರುಗಳು ಬೀದಿಗೆ ಬಂದಿದ್ದಾರೆ. ಬೀದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ನ್ಯಾಯಯುತ ಬೇಡಿಕೆ ಕೇಳುತ್ತಿದ್ದಾರೆ. ಕೂಡಲೇ ಸರಕಾರ ಅವರ ನೋವಿಗೆ ಸ್ಪಂದಿಸಬೇಕು. ನ್ಯಾಯ ಸಿಗಬೇಕು ಎಂದು ಅವರು ಹೇಳಿದ್ದಾರೆ.

Join Nadunudi News WhatsApp Group