Anna Bhagya: ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಬರಲಿಲ್ಲವೇ, ನಿಮ್ಮ ಮೊಬೈಲ್ ನಲ್ಲಿ ಪರಿಶೀಲಿಸಿಕೊಳ್ಳಿ.

ಅನ್ನ ಭಾಗ್ಯ ಯೋಜನೆಯ ಹಣ ಯಾರ ಖಾತೆಗೆ ಬರಲಿಲ್ಲವೋ ಅವರು ಆದಷ್ಟು ಬೇಗ ಈ ಕೆಲಸ ಮಾಡುದು ಉತ್ತಮ.

Anna Bhagya Scheme Update: ಕಾಂಗ್ರೆಸ್ ಸರ್ಕಾರದ ಅನ್ನ ಭಾಗ್ಯ ಯೋಜನೆಯ ಕುರಿತು ಸಾಕಷ್ಟು ಅಪ್ಡೇಟ್ ಗಳು ಈಗಾಗಲೇ ಹೊರ ಬಿದ್ದಿವೆ. ಸರ್ಕಾರ 10 ಕೆಜಿ ಅಕ್ಕಿಯಲ್ಲಿ 5 ಕೆಜಿ ಅಕ್ಕಿ ನೀಡಲು ಮುಂದಾಗಿದೆ. ಈ ಹಣವನ್ನು ನೇರವಾಗಿ ಪಡಿತರ ಚೀಟಿಯ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಕೆಲವರು ಇನ್ನು ಹಣ ಪಡೆದುಕೊಳ್ಳಲಿಲ್ಲ.

Anna Bhagya Scheme Money Credit updates
Image Credit: Hindustantimes

ಅನ್ನಭಾಗ್ಯ ಯೋಜನೆ
ಸರ್ಕಾರ ಅನ್ನಭಾಗ್ಯ ಯೋಜನೆಯ ಹಣ ಇನ್ನು ಸಾಕಷ್ಟು ಕುಟುಂಬದವರಿಗೆ ಜಮಾ ಆಗಲಿಲ್ಲ. ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಬದಲಾಗಿ ನೀಡುತ್ತಿರುವ ಹಣವನ್ನು ಬಂದಿದೆಯಾ ಎಂದು ತಿಳಿದುಕೊಳ್ಳಲು ಬ್ಯಾಂಕ್ ಗೆ ಹೋಗಿ ಬೇಸರದಿಂದ ವಾಪಾಸ್ ಆಗುತ್ತಿದ್ದಾರೆ. ಇದಕ್ಕೆ ಕಾರಣ ಅವರ ಬ್ಯಾಂಕ್ ಖಾತೆ ಸಕ್ರಿಯವಾಗಿಲ್ಲ ಎಂದರ್ಥ. ಹೀಗಾಗಿ ಇದನ್ನು ಚೆಕ್ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.

ಸರ್ಕಾರದ ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳುವವರು ಆದಷ್ಟು ಬೇಗ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಲು ಕೆವೈಸಿ ಮಾಡಿಸಿ ಎಂದು ಸರ್ಕಾರ ತಿಳಿಸಿದೆ. ಯಾರೆಲ್ಲ ಈ ಕೆಲಸ ಮಾಡಿಲ್ಲವೋ ಅವರಿಗೆ ಹಣ ಜಮಾ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಎಚ್ಚರಿಸಿದೆ.

Anna Bhagya Scheme Money Credit updates
Image Credit: Hosakannada

ಆನ್ ಲೈನ್ ಇ-ಕೆವೈಸಿ ಮಾಡಿಕೊಳ್ಳುವುದು ಹೇಗೆ
ಆನ್ ಲೈನ್ ನಲ್ಲಿ ಇ-ಕೆವೈಸಿ ಮಾಡಲು ಇಚ್ಛಿಸುವವರು ಅಗತ್ಯವಾಗಿ ಬೇಕಾದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ. ಬಳಿಕ ಅದನ್ನು ಯಸ್ ಬಿ ಐ ಶಾಖೆಗೆ ನೋಂದಾಯಿತ ಇಮೇಲ್ ಐಡಿಯಿಂದ ಆಮೇಲ್ ಮಾಡಿ. ಇದಾದ ನಂತರದಲ್ಲಿ ಬ್ಯಾಂಕ್ ನಿಮ್ಮ ಈಮೇಲ್ ಐಡಿಯನ್ನು ಸ್ವೀಕರಿಸಿ ಬಳಿಕ ಡಾಕ್ಯುಮೆಂಟ್ ಅನ್ನು ಪರಿಶೀಲಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಂತರದಲ್ಲಿ ಅಂದರೆ ಡಾಕ್ಯುಮೆಂಟ್ ಗಳನ್ನೂ ಪರಿಶೀಲಿಸಿದ ಬಳಿಕ ನಿಮ್ಮ ಖಾತೆಯ ಕೆವೈಸಿ ವಿವರ ನವೀಕರಣ ಆಗುತ್ತದೆ.

ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ
ಬ್ಯಾಂಕ್ ವಿಷಯವನ್ನು ಹೊರತುಪಡಿಸಿ ನಿಮ್ಮ ಖಾತೆಗೆ ಆಹಾರ ಇಲಾಖೆಯಿಂದ ಹಣ ವರ್ಗಾವಣೆ ಆಗಿದೆಯೇ ಅಥವಾ ಅದರಲ್ಲಿ ಏನಾದರೂ ಸಮಸ್ಯೆ ಉಂಟಾಗಿದೆಯೇ ಎಂದು ತಿಳಿದುಕೊಳ್ಳಲು ನೀವು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಲಾಗಿನ್ ಆಗಬೇಕಿದೆ. ಇದಕ್ಕಾಗಿ ನೀವು https://ahara.kar.nic.in/status2/ ಲಿಂಕ್ ಅನ್ನು ಬಳಕೆ ಮಾಡಿಕೊಳ್ಳಬೇಕು.

Join Nadunudi News WhatsApp Group

Anna Bhagya Scheme Money Credit updates
Image Credit: Oneindia

ನಂತರದಲ್ಲಿ ನೇರ ನಗದು ವರ್ಗಾವಣೆ ಎನ್ನುವ ಆಯ್ಕೆ ಕೊನೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ವರ್ಷ, ತಿಂಗಳು ಹಾಗು ಆರ್ ಸಿ ನಂಬರ್ ಅನ್ನು ಎಂಟ್ರಿ ಮಾಡಿ. ಬಳಿಕ ಅಲ್ಲೇ ಕಾಣಿಸಿಕೊಳ್ಳುವ ಕ್ಯಾಪ್ಚ್ಯಾ ಕೋಡ್ ಅನ್ನು ಎಂಟ್ರಿ ಮಾಡಿ ಗೋ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು. ಎಲ್ಲಾ ಮಾಹಿತಿ ತೆರೆದುಕೊಳ್ಳುತ್ತದೆ.

Join Nadunudi News WhatsApp Group