Anna Bhagya Scheme: ಅನ್ನಭಾಗ್ಯ ಯೋಜನೆಯ ಬಿಗ್ ಅಪ್ಡೇಟ್, ಸರ್ಕಾರದ ಬಳಿ ಮನವಿ ಮಾಡಿಕೊಂಡ ಮಹಿಳೆಯರು, ಇಕ್ಕಟ್ಟಿನಲ್ಲಿ ಸರ್ಕಾರ

ಅನ್ನಭಾಗ್ಯ ಯೋಜನೆಯ ಕುರಿತಂಗೆ ಬೇಸರ ಹೊರಹಾಕಿದ ಮಹಿಳೆಯರು, ಸಂಕಷ್ಟದಲ್ಲಿ ಸರ್ಕಾರ

Anna Bhagya Scheme Latest Update: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷ 5 ಗ್ಯಾರೆಂಟಿ ಯೋಜನೆಯನ್ನು ಪ್ರಜೆಗಳ ಮುಂದಿಟ್ಟಿದ್ದು, ಅದರಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದೆ. ಅನ್ನಭಾಗ್ಯ ಯೋಜನೆ ಪ್ರಾರಂಭ ಆಗಿ ಹಲವು ತಿಂಗಳುಗಳು ಕಳೆದಿದ್ದು, ಈ ಯೋಜನೆಯಡಿ ಸರ್ಕಾರ 5 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದು, ರಾಜ್ಯದಲ್ಲಿ ಅಕ್ಕಿ ದಾಸ್ತಾನಿನ ಕೊರತೆ ಕಂಡುಬಂದು ಈಗ 5 ಕೆಜಿ ಅಕ್ಕಿಯ ಬದಲಾಗಿ ಬಡ ಕುಟುಂಬಗಳ ಯಜಮಾನರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಆದರೆ ಈ ಕುರಿತು ಮಹಿಳೆಯರು ನಮಗೆ ಹಣ ಬೇಡ ಅಕ್ಕಿ ಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Anna Bhagya Scheme Latest Update
Image Credit: The South First

ಹಣ ಬೇಡ ಅಕ್ಕಿ ಬೇಕು ಎಂದ ಜನತೆ

ಅನ್ನಭಾಗ್ಯ ಯೋಜನೆಯಡಿ ಈಗಾಗಲೇ ರಾಜ್ಯದ ಜನತೆ ಅಕ್ಕಿ ಬದಲಾಗಿ ಹಣ ಪಡೆಯುತ್ತಿದ್ದು, ಇನ್ನು ಮುಂದೆ ನಮಗೆ ಹಣ ಬೇಡ ಅಕ್ಕಿಯೆನ್ನೇ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಈ ಕುರಿತು ಸರ್ಕಾರ ಚಿಂತಿಸುತ್ತಿದೆ. ರಾಜ್ಯದಲ್ಲಿ ಮಳೆ ಕೊರತೆಯಿಂದ ಅಕ್ಕಿ ಬೆಳೆ ಕುಸಿದಿದ್ದು, ಅಕ್ಕಿಯ ಕೊರತೆ ತುಂಬ ಕಾಡುತ್ತಿದೆ. ಈ ನಡುವೆ ಎರಡು ಸರ್ವೆಗಳು ನಡೆದಿದ್ದು ಅಕ್ಕಿಗೆ ಡಿಮ್ಯಾಂಡ್ ಹೆಚ್ಚಿದೆ.

ಆಹಾರ ಇಲಾಖೆಯ ಅಧಿಕಾರಿ, ಸಿಬ್ಬಂದಿಯಿಂದ ಒಂದು ಸರ್ವೆ

ಸಿಎಂ ಕಚೇರಿಯ ಮೂಲಕ ಎನ್ ಜಿ ಒ ಮೂಲಕ ಮತ್ತೊಂದು ಸರ್ವೆ ನಡೆಸಲಾಗಿತ್ತು. ಈ ಎರಡು ಸರ್ವೆಯಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮಂದಿ ಹಣ ಬೇಡ ಅಕ್ಕಿ ಕೊಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ಕಿ ಕೊಡಲು ಸಾಧ್ಯವಿಲ್ಲದ ಕಾರಣ ಪ್ರತಿ ವ್ಯಕ್ತಿಗೆ 170 ರೂಪಾಯಿ ನೀಡುತ್ತಿದೆ. 6 ತಿಂಗಳಿಗೆ ಅಕ್ಕಿ ಬದಲು ಸರ್ಕಾರದಿಂದ ಜನರ ಖಾತೆಗೆ ₹3751 ಕೋಟಿ ಹಣ ವರ್ಗಾವಣೆ ಆಗಿದೆ.

Join Nadunudi News WhatsApp Group

Anna Bhagya Scheme Details
Image Credit: Hosa Kannada

ಅಕ್ಕಿಯನ್ನು ನೀಡುವ ಕುರಿತು ಸರಕಾರದ ಭರವಸೆ

ಈಗ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಹಣ ಬೇರೆ ಉದ್ದೇಶಗಳಿಗೆ ಬಳಕೆ ಆಗುತ್ತಿದ್ದು ಅಕ್ಕಿ ಖರೀದಿ ಮಾಡಲು ಸಾಧ್ಯ ಆಗುತ್ತಿಲ್ಲ, ಹಣದ ಬದಲು ಅಕ್ಕಿಯನ್ನೇ ನೀಡಿದರೆ ತುಂಬ ಸಹಾಯ ಆಗುವುದೆಂದು ಜನತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳುವುದೇನೆಂದರೆ ರಾಜ್ಯದಲ್ಲಿ ಶೇ 70 ರಿಂದ 80% ಜನ ಅಕ್ಕಿ ಬೇಕು ಅಂತ ಕೇಳುತ್ತಿದ್ದಾರೆ.

ಅಕ್ಕಿ ಕೊಡಬೇಕು ಅನ್ನೋ ಯೋಚನೆಯಿದೆ. ಆದಷ್ಟು ಬೇಗ ಅಕ್ಕಿಯನ್ನೆ ಕೊಡುವ ಕೆಲಸ ಮಾಡ್ತೀವಿ. ಆಂಧ್ರ ಪ್ರದೇಶ ತೆಲಂಗಾಣದಿಂದ ಸೇರಿದಂತೆ ಹಲವಡೆಯಿಂದ ಅಕ್ಕಿ ಖರೀದಿಗೆ ಮುಂದಾಗಿದ್ದೇವೆ. ಆದರೆ ಸಮರ್ಪಕವಾಗಿ ಬೆಲೆ ನಿಗದಿಯಾಗ್ತಿಲ್ಲ ಈ ಬಾರಿ ಉತ್ಪಾದನೆಯು ಕಡಿಮೆಯಾಗಿದೆ. ಆದಷ್ಟು ಬೇಗ ಅಕ್ಕಿ ಕೊಡುವ ಪ್ರಯತ್ನವನ್ನ ನಾವು ಮಾಡ್ತೀವಿ. ಅಲ್ಲಿಯವರೆಗೂ ನಾವು ಹೇಳಿದಂತೆ ಹಣ ಹಾಕ್ತಿವಿ ಎಂದು ತಿಳಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಅಕ್ಕಿಯನ್ನೇ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

Join Nadunudi News WhatsApp Group