Anna Bhagya June: ಜೂನ್ ತಿಂಗಳ ಅನ್ನಭಾಗ್ಯ ಹಣ ಬಂದಿಲ್ವಾ…? ಈ ರೀತಿಯಲ್ಲಿ ಖಾತೆ ಚೆಕ್ ಮಾಡಿಕೊಳ್ಳಿ.

ಜೂನ್ ತಿಂಗಳ ಅನ್ನ ಭಾಗ್ಯ ಹಣ ಅರ್ಹ ಫಲಾನುಭವಿಗಳ ಖಾತೆಗೆ ಜಮಾ

Anna Bhagya Scheme Latest Update: ರಾಜ್ಯ ಸರ್ಕಾರ ಪರಿಚಯಿಸಿರುವ ಉಚಿತ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪುತ್ತಿದೆ. ಉಚಿತ ಗ್ಯಾರಂಟಿ ಯೋಜನಗಳು ಅನುಷ್ಠಾನಗೊಂಡು ವರ್ಷಗಳೇ ಕಳೆಯುತ್ತಿದ್ದರು ಕೂಡ ಸರ್ಕಾರ ಯೋಜನೆಗೆ ಸಂಬಂಧಿಸಿದಂತೆ ಆಗಾಗ ಹೊಸ ಹೊಸ ಅಪ್ಡೇಟ್ ನೀಡುತ್ತಿರುತ್ತದೆ.

ಇನ್ನು ಅರ್ಹರ ದಾಖಲೇಗಳ ಸಮಸ್ಯೆಯಿಂದಾಗಿ ಅಥವಾ ತಾಂತ್ರಿಕ ದೋಷದ ಕಾರಣ ಇನ್ನು ಕೂಡ ಯೋಜನೆಯ ಲಾಭ ಪಡೆಯದ ಅದೆಷ್ಟೋ ಫಲಾನುಭವಿಗಳಿದ್ದರೆ. ಎಲ್ಲ ಅರ್ಹರು ಯೋಜನೆಯ ಲಾಭವನ್ನು ನೀಡಲು ಸರಕಾರ ಅನೇಕ ಕ್ರಮ ಕೈಗೊಳ್ಳುತ್ತಲೇ ಇದೆ. ಇನ್ನು ಯೋಜನೆಯ ಲಾಭ ಯಾರಿಗೆ ಲಭ್ಯವಾಗುತ್ತಿದೆಯೋ ಅಂತವರಿಗೆ ಸರ್ಕಾರ ತಿಂಗಳವರು ಯೋಜನೆಯ ಲಾಭವನ್ನು ನೀಡುತ್ತಿರುತ್ತದೆ.

ಸದ್ಯ ರಾಜ್ಯ ಸರ್ಕಾರ ಜೂನ್ ತಿಂಗಳ ಅನ್ನ ಭಾಗ್ಯ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡಿದೆ. ಫಲಾನುಭವಿಗಳು ತಕ್ಷಣ ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದು.

Anna Bhagya Scheme Latest Updates
Image Credit: Powertvnews

ಜೂನ್ ತಿಂಗಳ ಅನ್ನಭಾಗ್ಯ ಹಣ ಬಂದಿಲ್ವಾ…?
ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯ 5KG ಅಕ್ಕಿ ಹಾಗೂ 5KG ಉಚಿತ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ. ಸದ್ಯ ರಾಜ್ಯ ಸರ್ಕಾರ ಜೂನ್ ತಿಂಗಳ ಅನ್ನ ಭಾಗ್ಯ ಹಣವನ್ನು ಕೂಡ ಜಮಾ ಮಾಡಿದೆ. ಈಗಾಗಲೇ ಸರ್ಕಾರ ಹಲವು ಬಾರಿ ಆಧಾರ್ ಹಾಗು ರೇಷನ್ ಕಾರ್ಡ್ ಲಿಂಕ್ ಬಗ್ಗೆ ಮಾಹಿತಿ ನೀಡಿದೆ, ಆದರೂ ಸಹ ಕೆಲವರು ಈ ಕೆಲಸವನ್ನು ಮಾಡಿಲ್ಲ. ಬ್ಯಾಂಕ್ ಖಾತೆಯ E-KYC ಬಹಳ ಮುಖ್ಯ ಆಗಿದ್ದು ಪ್ರತಿಯೊಬ್ಬರು ಈ ಕೆಲಸವನ್ನು ಮಾಡಿಕೊಳ್ಳಿ, ಇಲ್ಲ ಅಂತಾದರೆ ನಿಮಗೆ ಅನ್ನಭಾಗ್ಯ ಹಣ ಜಮಾ ಆಗುದಿಲ್ಲ.

ಅನ್ನಭಾಗ್ಯ ಹಣ ಜಮಾ ಆಗಲು ತಕ್ಷಣ ಈ ಕೆಲಸ ಮಾಡಿ
• ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಅನ್ನು ನವೀಕರಿಸಿ.

Join Nadunudi News WhatsApp Group

• ಪಡಿತರ ಚಿತೆ KYC ಅಪ್ಡೇಟ್ ಮಾಡಿಕೊಳ್ಳಬೇಕು.

• ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಯ  KYC ಅಪ್ಡೇಟ್ ಅಗತ್ಯ.

• ಪಡಿತರ ಚೀಟಿಯನ್ನು ನವೀಕರಿಸುವುದು ಅಗತ್ಯ.

Anna Bhagya Scheme Money Update
Image Credit: Lokavarthe

ಈ ರೀತಿಯಲ್ಲಿ ಖಾತೆ ಚೆಕ್ ಮಾಡಿಕೊಳ್ಳಿ
•ಕರ್ನಾಟಕ ಸರ್ಕಾರದ ಅಧಿಕೃತ Website https://www.karnataka.gov.in/ ಗೆ ಭೇಟಿ ನೀಡಿ.

•E -Services ಟ್ಯಾಬ್ ಮೇಲೆ ಕ್ಲಿಕ್ ಮಾಡಿ

•DBT Status ಲಿಂಕ್ ಅನ್ನು ಕ್ಲಿಕ್ ಮಾಡಿ

•ನೀವು ರೇಷನ್ ಕಾರ್ಡ್ ನಲ್ಲಿ ಯಾವ ಸಮಯದ ಸ್ಟೇಟಸ್ ತಿಳಿಯಲು ಬಯಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ.

•ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ನಂತರ Continue ಬಟನ್ ಕ್ಲಿಕ್ ಮಾಡಿ.

•ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಅನ್ನ ಭಾಗ್ಯ ಯೋಜನೆಯಡಿ ನಿಮಗೆ ಯಾವ ಯಾವ ಕಂತುಗಳ ಹಣ ಜಮಾ ಆಗಿದೆ ಎನ್ನುವುದು ಸ್ಕ್ರೀನ್ ಮೇಲೆ ತೋರುತ್ತದೆ. ಪೂರ್ಣ ಮಾಹಿತಿ ನಿಮಗೆ ಪರದೆಯ ಮೇಲೆ ಕಾಣಸಿಗುತ್ತದೆ.

Anna Bhagya Scheme New Update
Image Credit: News Next

Join Nadunudi News WhatsApp Group