Anna Bhagya Scheme: ಜುಲೈ 20 ರ ಒಳಗೆ ಈ ಕೆಲಸ ಮಾಡದೆ ಇದ್ದರೆ ಅನ್ನಭಾಗ್ಯ ಯೋಜನೆಯ ಹಣ ಸಿಗಲ್ಲ, ಸರ್ಕಾರದ ಆದೇಶ.

ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಈ ಕೆಲಸ ಗಳನ್ನೂ ಮಾಡುವುದು ಉತ್ತಮ.

Anna Bhagya Scheme Latest Update: ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚಿಗೆ ಸಾಕಷ್ಟು ಅಪ್ಡೇಟ್ ಗಳು ಹೊರ ಬಿದ್ದಿದೆ. ಸರ್ಕಾರ ಅನ್ನಭಾಗ್ಯ ಯೋಜನೆಯ ಸಲುವಾಗಿ ಸಾಕಷ್ಟು ಮಾಹಿತಿಗಳನ್ನು ನೀಡುತ್ತಿದೆ. ಜನರಿಗೆ 5 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿಗೆ ಸರಿದೂಗುವ ಹಣ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಮಾಸಿಕ ತಲಾ 170 ರೂಪಾಯಿ ನೀಡಲಾಗುತ್ತದೆ. ಆದರೆ ಈ ಹಣ ಎಲ್ಲ ಕುಟುಂಬದವರಿಗೂ ಸಿಗುವುದಿಲ್ಲ. ಅನ್ನಭಾಗ್ಯ ಯೋಜನೆಗೆ ಏನಾದರೂ ನ್ಯೂನ್ಯತೆಗಳಿದ್ದಲ್ಲಿ ಜನರು ಇದರಿಂದ ಅನರ್ಹರಾಗಬೇಕಾಗುತ್ತದೆ.

anna bhagya scheme latest updates
Image Credit: Thesouthfirst

ಅನ್ನಭಾಗ್ಯ ಯೋಜನೆ ಲಾಭ ಪಡೆಯಲು ಇರಬೇಕಾದ ಅರ್ಹತೆಗಳು
ಇನ್ನು ಬಿಪಿಎಲ್ ಹಾಗು ಅಂತ್ಯೋದಯ ಪಡಿತರ ಚೀಟಿಯಲ್ಲಿ ಯಾವುದೇ ತಪ್ಪಾದ ಮಾಹಿತಿ ಇರಬಾರದು. ಇನ್ನು ಪಡಿತರ ಚೀಟಿಯ ಸದಸ್ಯರ ಹೆಸರಿನಲ್ಲಿ ಬ್ಯಾಂಕ್ ಖಾತೆ ಇರಬೇಕಾಗುತ್ತದೆ. ಅನ್ನಭಾಗ್ಯದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲು ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಲಿಂಕ್ ಬ್ಯಾಂಕ್ ಖಾತೆ ವಿವರ ಅನ್ನಭಾಗ್ಯ ಯೋಜನೆಯಡಿ ಹಣ ಪಡೆಯಲು ಮುಖ್ಯವಾಗಿದೆ.

ಜುಲೈ 20 ರೊಳಗೆ ಈ ಕೆಲಸ ಮಾಡಿ
ಇನ್ನು ಮನೆಯ ಮುಖ್ಯಸ್ಥರು ಇಲ್ಲದೆ ಇದ್ದ ಸಮಯದಲ್ಲಿ ಮನೆಯ ಯಾವುದಾದರು ಸದಸ್ಯರ ಬ್ಯಾಂಕ್ ಖಾತೆ ಆಧಾರ್ ಗೆ ಲಿಂಕ್ ಆಗಿದ್ದರು ಅನ್ನಭಾಗ್ಯ ಯೋಜನೆಯ ಲಾಭವನ್ನು ಪಡೆಯಬಹುದು. ಪ್ರಸ್ತುತ ಸಾಕಷ್ಟು ಜನರ ಅಕೌಂಟ್ ಗೆ ಆಧಾರ್ ಲಿಂಕ್ ಆಗದೆ ಇರುವ ಕಾರಣ ಜುಲೈ ನಲ್ಲಿ ಕೆಲವರು ಈ ಯೋಜನೆಯಿಂದ ವಂಚಿತರಾಗಬೇಕಾಗುತ್ತದೆ.

anna bhagya scheme latest updates
Image Credit: Thehindubusinessline

ಇನ್ನು ನಿಮ್ಮ ಬ್ಯಾಂಕ್ ಖಾತೆಗೆ ಅಕೌಂಟ್ ಲಿಂಕ್ ಆಗದೆ ಇದ್ದರೆ ಈ ಕೂಡಲೇ ಲಿಂಕ್ ಮಾಡುವುದು ಉತ್ತಮ. ಜುಲೈ 20 ರೊಳಗೆ ನೀವು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಈ ಕೆಲಸ ಗಳನ್ನೂ ಮಾಡುವುದು ಉತ್ತಮವಾಗಿದೆ. ಒಂದು ವೇಳೆ ನೀವು ಸರ್ಕಾರ ಹೇಳಿದ ನಿಯಮಗಳನ್ನು ಅನುಸರಿಸದೆ ಇದ್ದರೆ ನೀವು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿರಗಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group