Anna Bhagya: ಅನ್ನ ಭಾಗ್ಯ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್, ಇಂತವರ ಖಾತೆಗೆ ಅನ್ನ ಭಾಗ್ಯ ಹಣ ಜಮಾ ಆಗುವುದಿಲ್ಲ.

ಈ ಮಹಿಳೆಯರ ಖಾತೆಗೆ ಜಮಾ ಆಗಲ್ಲ ಅನ್ನಭಾಗ್ಯ ಯೋಜನೆಯ ಹಣ

Anna Bhagya Latest Update: ಸದ್ಯ ರಾಜ್ಯ ಸರ್ಕಾರ ರಾಜ್ಯದ ಜನತೆಗಾಗಿ ವಿವಿಧ ಯೋಜನೆಗಳನ್ನು ಪರಿಚಯಿಸುತ್ತ ಜನರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ ಎನ್ನಬಹುದು. ಚುನಾವಣಾ ಸಮಯದಲ್ಲಿ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳ ಲಾಭವನ್ನು ಜನರು ಪಡೆಯುತ್ತಿದ್ದಾರೆ.

ಇನ್ನು ಐದು ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಅನ್ನ ಭಾಗ್ಯ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಕೋಟ್ಯಾಂತರ ಜನರು ಉಚಿತ ಪಡಿತರನ್ನು ಪಡೆಯುತ್ತಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ 5KG ಉಚಿತ ಪಡಿತರ ಜೊತೆಗೆ ಜನರು 5KG ಅಕ್ಕಿಯ ಬದಲಾಗಿ ಹಣವನ್ನು ಪಡೆಯುತ್ತಿದ್ದಾರೆ. ಅರ್ಹ ಖಾತೆಗೆ ನೇರವಾಗಿ DBT ಮೂಲಕ ಹೆಚ್ಚುವರಿ ಅಕ್ಕಿಯ ಹಣ ಜಮಾ ಆಗುತ್ತದೆ.

anna bhagya yojana money credit rules
Image Credit: Original Source

ಅನ್ನ ಭಾಗ್ಯ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್
ಸದ್ಯ ರಾಜ್ಯ ಸರ್ಕಾರ ಐದು ಉಚಿತ ಗ್ಯಾರಂಟಿ ಲಾಭವನ್ನು ಎಲ್ಲ ಅರ್ಹರು ಪಡೆಯಬೇಕೆನ್ನುವ ಉದ್ದೇಶದಿಂದ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಆದರೆ ಸರ್ಕಾರದ ಯೋಜನೆಯ ಲಾಭವನ್ನು ಕೆಲ ಅರ್ಹರು ಸರಿಯಾಗಿ ಪಡೆದುಕೊಳ್ಳುತ್ತಿಲ್ಲ. ಇನ್ನು ಅನರ್ಹರು ಕೂಡ ಉಚಿತ ಪಡಿತರ ಲಾಭವನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎನ್ನಬಹುದು. ಸದ್ಯ ರಾಜ್ಯ ಸರಕಾರ ಅನ್ನ ಭಾಗ್ಯ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಿದೆ. ಹೌದು, ಇಂತವರ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಮಾಡದೆ ಇರಲು ನಿರ್ಧರಿಸಿದೆ. ಇನ್ನುಮುಂದೆ ಅನ್ನ ಭಾಗ್ಯ ಯೋಜನೆಯ ಹಣ ಇಂತಹ ಕುಟುಂಬದವರು ಪಡೆಯಲು ಸಾಧ್ಯವಿಲ್ಲ.

ಇಂತವರ ಖಾತೆಗೆ ಅನ್ನ ಭಾಗ್ಯ ಹಣ ಜಮಾ ಆಗುವುದಿಲ್ಲ
ಕೆಲವು ತಾಂತ್ರಿಕ ದೋಷಗಳ ಕಾರಣ ಅದೆಷ್ಟೋ ಅರ್ಹರು ಅನ್ನ ಭಾಗ್ಯ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ ಕೆಲ BPL ಕಾರ್ಡ್ ದಾರರು ಕಳೆದ ಆರು ತಿಂಗಳುಗಳಿಂದ ಉಚಿತ ಪಡಿತರನ್ನು ಪಡೆಯುತ್ತಿಲ್ಲ ಎನ್ನುವ ಬಗ್ಗೆ ವರದಿಯಾಗಿದೆ. ಪಡಿತರನ್ನು ಪಡೆಯದೇ ಸರ್ಕಾರದ ಇನ್ನಿತರ ಯೋಜನೆಗಳ ಲಾಭವನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

anna bhagya yojana rules
Image Credit: Original Source

ಈ ಹಿನ್ನಲೆ ಇಂತಹ ಪಡಿತರದಾರರನ್ನು ಗುರುತಿಸಿ ಅಂತವರ ಪಡಿತರ ಚೀಟಿಯನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ. ಕಳೆದ ಆರು ತಿಂಗಳುಗಳಿಂದ ಯಾರು ಉಚಿತ ಪಡಿತರನ್ನು ಪಡೆಯುತ್ತಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದು ಮಾಡುವುದಂತೂ ಕಂಡಿತಾ. ಈ ರೀತಿ ರೇಷನ್ ಕಾರ್ಡ್ ರದ್ದಾದರೆ ಅಂತವರು ಅನ್ನ ಭಾಗ್ಯ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Join Nadunudi News WhatsApp Group

Join Nadunudi News WhatsApp Group