Anna Bhagya: ಮಾರ್ಚ್ ತಿಂಗಳ ಪಡಿತರ ಜೊತೆಗೆ ಖಾತೆಗೆ ಹಣ ಜಮಾ, ಈ ರೀತಿ ಖಾತೆ ಚೆಕ್ ಮಾಡಿ

ಅನ್ನ ಭಾಗ್ಯ ಹಣ ಖಾತೆಗೆ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಪರಿಶೀಲಿಸಿಕೊಳ್ಳಿ

Anna Bhagya Yojana Latest Update: ಪ್ರಸ್ತುತ ರಾಜ್ಯದಲ್ಲಿ ಜನರು ಅನ್ನ ಭಾಗ್ಯ ಯೋಜನೆಯ ಮೂಲಕ ಉಚಿತ ಪಡಿತರನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಈ ಯೋಜನೆಯಡಿ ಲಕ್ಷಾಂತರ ಫಲಾನುಭವಿಗಳು ಲಾಭವನ್ನು ಪಡೆಯುತ್ತಿದ್ದಾರೆ.

ಈ ಯೋಜನೆಯು ರಾಜ್ಯದ ಜನತೆಗೆ ಸಾಕಷ್ಟು ಸಹಕಾರಿಯಾಗಿದೆ ಎನ್ನಬಹುದು. ಇನ್ನು ರಾಜ್ಯ ಸರ್ಕಾರ ಘೋಷಿಸಿರುವಂತೆ ಅನ್ನ ಭಾಗ್ಯ ಯೋಜನೆಯಡಿ ಹೆಚ್ಚಿವರಿ ಅಕ್ಕಿಯ ಹಣ ಅರ್ಹರ ಖಾತೆಗೆ ಜಮಾ ಆಗುತ್ತಿದೆ. ಇದೀಗ ರಾಜ್ಯ ಸರ್ಕಾರದಿಂದ ಮಾರ್ಚ್ ತಿಂಗಳ ಪಡಿತರ ಹಾಗೂ ಹಣದ ವಿಚಾರವಾಗಿ ಬಿಗ್ ಅಪ್ಡೇಟ್ ಹೊರಬಿದ್ದಿದೆ.

Anna Bhagya Yojana Latest Update
Image Credit: The south first

ಮಾರ್ಚ್ ತಿಂಗಳ ಪಡಿತರ ಜೊತೆಗೆ ಖಾತೆಗೆ ಹಣ ಜಮಾ
ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಮಾಸಿಕ ತಲಾ 170 ರೂಪಾಯಿ ಗಳನ್ನೂ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಮಾಸಿಕವಾಗಿ ಸರ್ಕಾರ DBT ಮೂಲಕ ಜಮಾ ಮಾಡುತ್ತಿದೆ. ಸದ್ಯ ಮಾರ್ಚ್ ತಿಂಗಳ ಹಣದ ಬಿಡುಗಡೆಗೆ ಸರ್ಕಾರ ಸಿದ್ಧತೆ ಮಾಡುತ್ತಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಮಾರ್ಚ್ ತಿಂಗಳಿಗೆ ಅನ್ವಯವಾಗುವಂತೆ ಪಡಿತರನ್ನು ಬಿಡುಗಡೆ ಮಾಡಲಾಗಿದೆ. ಪಡಿತರ ವಿತರಣೆಯ ಜೊತೆಗೆ ಅರ್ಹರ ಹೆಚ್ಚುವರಿ ಅಕ್ಕಿಯ ಹಣವನ್ನು ಕೂಡ ಸರ್ಕಾರ ಜಮಾ ಮಾಡಿದೆ. ಇನ್ನು ನೀವು ಮಾರ್ಚ್ ತಿಂಗಳ ಅಕ್ಕಿಯ ಹಣ ನಿಮ್ಮ ಖಾತೆಗೆ ಬಂಡಿಯೇ ಎಂದು ತಿಳಿಯಲು ಈ ಕೆಳಗಿನ ಹಂತವನ್ನು ಅನುಸರಿಸಬಹುದು.

Anna Bhagya Yojana Money Status
Image Credit: Good Returns

ಅನ್ನ ಭಾಗ್ಯ ಹಣ ಖಾತೆಗೆ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಪರಿಶೀಲಿಸಿಕೊಳ್ಳಿ
•ಕರ್ನಾಟಕ ಸರ್ಕಾರದ ಅಧಿಕೃತ Website https://www.karnataka.gov.in/ ಗೆ ಭೇಟಿ ನೀಡಿ.

Join Nadunudi News WhatsApp Group

•E -Services ಟ್ಯಾಬ್ ಮೇಲೆ ಕ್ಲಿಕ್ ಮಾಡಿ

•DBT Status ಲಿಂಕ್ ಅನ್ನು ಕ್ಲಿಕ್ ಮಾಡಿ

•ನೀವು ರೇಷನ್ ಕಾರ್ಡ್ ನಲ್ಲಿ ಯಾವ ಸಮಯದ ಸ್ಟೇಟಸ್ ತಿಳಿಯಲು ಬಯಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ.

•ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ನಂತರ Continue ಬಟನ್ ಕ್ಲಿಕ್ ಮಾಡಿ.

•ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಅನ್ನ ಭಾಗ್ಯ ಯೋಜನೆಯಡಿ ನಿಮಗೆ ಯಾವ ಯಾವ ಕಂತುಗಳ ಹಣ ಜಮಾ ಆಗಿದೆ ಎನ್ನುವುದು ಸ್ಕ್ರೀನ್ ಮೇಲೆ ತೋರುತ್ತದೆ.

Join Nadunudi News WhatsApp Group