Puneeth Rajkumar Male: ಹೊಸಪೇಟೆಯಲ್ಲಿ ಅಪ್ಪು ಮಾಲೆ ಹಾಕಿದ ಅಭಿಮಾನಿಗಳು, ಅಪ್ಪು ಪ್ರತಿಮೆಗೆ ವಿಶೇಷ ಪೂಜೆ.

Actor Puneeth Rajkumar Fans Hosapete: ಕರುನಾಡ ಯುವರತ್ನ ಪುನೀತ್ ರಾಜಕುಮಾರ್ (Puneeth Rajkumar)ಅವರ ಅಭಿಮಾನಿಗಳು ನಗರದಲ್ಲಿ ಭುಧವಾರ ಅಪ್ಪು ದೇವರ ಮಾಲೆ ಧರಿಸಿ  ವ್ರತಾಚರಣೆಗೆ ಚಾಲನೆ ನೀಡಿದರು.

ಒಂಬತ್ತು ಜನ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಪ್ರತಿಮೆ ಬಳಿ ವಿಶೇಷ ಪೂಜೆ ಸಲ್ಲಿಸಿ ಮಾಲೆ ಧರಿಸಿದರು.

puneeth rajkumar male in hosapete

ಮಾರ್ಚ್ 17 ರಂದು ಪುನೀತ್ ಪುತ್ತಳಿ ಸಮಾರಂಭ
ಅಪ್ಪು ದೇವರ ಮಾಲಾಧಾರಿಗಳು ಮಾರ್ಚ್ 18 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಅವರ ಸಮಾಧಿ ದರ್ಶನ ಮಾಡಲಿದ್ದಾರೆ. ಅಪ್ಪು ಅವರ ಜನ್ಮದಿನವನ್ನು ಸರ್ಕಾರ ಸ್ಪೂರ್ತಿ ದಿನ ಎಂದು ಆಚರಿಸುತ್ತದೆ.

ಈ ಹಿನ್ನಲೆ ವಿಜಯನಗರ ಜಿಲ್ಲೆಯ ಅಪ್ಪು ಅಭಿಮಾನಿಗಳು ಅಪ್ಪು ದೇವರ ಮಾಲಾಧಾರಣೆ ಮಾಡಿದರು. ಮಾರ್ಚ್ 17 ರಂದು ಪುನೀತ್ ರಾಜಕುಮಾರ್ ಹುಟ್ಟುಹಬ್ಬದಂದು ಪುನೀತ್ ಪುತ್ತಳಿ ಬಳಿ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.

Join Nadunudi News WhatsApp Group

puneth rajkumar fans hosapete
Image Credit: eedina

ಅಪ್ಪು ಮಾಲೆ ಧರಿಸಿದ ಅಭಿಮಾನಿಗಳು
ಅಪ್ಪು ದೇವರ ಡಾಲರ್ ಇರುವ ಮಾಲಾ ಧರಿಸುವುದು, ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಶರ್ಟ್ ಧರಿಸಿ ಅಪ್ಪು ದೇವರ ಫೋಟೋ ಇತ್ತು ಪೂಜೆ ಮಾಡುವುದು. ಬೆಳಗ್ಗೆ ಸೂರ್ಯ ಉದಯಿಸುವ ಮುನ್ನ ಹಾಗೂ ಸಂಜೆ ಸೂರ್ಯ ಮುಳುಗಿದ ಬಳಿಕ ಸ್ನಾನ ಮಾಡುವುದು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ರಾತ್ರಿ ಉಪಾಹಾರ ಸೇವಿಸುವುದು.

ಅಪ್ಪು ಮಾಲೆ ಧರಿಸಲು ದುಶ್ಚಟಗಳಿಂದ ದೂರ ಇರಬೇಕು
ಅಪ್ಪು ದೇವರ ಮಾಲೆ ಧರಿಸುವವರು ದುಶ್ಚಟಗಳಿಂದ ದೂರ ಇರಬೇಕು. ಮಾಲೆ ಹಾಕುವ ಅಭಿಮಾನಿಗಳು ಐದು ದಿನ ಮತ್ತು 11 ದಿವಸ ಒಂದು ದಿವಸ ಮಾಲೆ ಹಾಕಬಹುದು.

appu devara male in hosapete
Image Credit: abplive

ಮಾಲೆ ಹಾಕುವ ಅಪ್ಪು ಸ್ವಾಮಿಗಳು ಇಲ್ಲಿಂದ ಪುಣ್ಯಭೂಮಿಗೆ ತೆರಳುವಾಗ ಕೈಲಾದ ದಿನಸಿಗಳನ್ನು ಇರುಮುಡಿಯಾಗಿ ತೆಗೆದುಕೊಂಡು ಹೋಗತಕ್ಕದ್ದು. ಅಕ್ಕಿ, ಬೇಳೆ, ಎಣ್ಣೆ ದಿನಸಿಗಳನ್ನು ತೆಗೆದುಕೊಂಡು ಹೋಗಬಹುದು.

ಎಲ್ಲ ಮಾಲೆ ಧರಿಸುವ ಮಾಲಾಧಾರಿಗಳು ಅಪ್ಪು ದೇವರ ಪುಣ್ಯಭೂಮಿ ದರ್ಶನ ಪಡೆದು, ವಾಪಸ್‌ ಬಂದ ನಂತರ ಹಂಪಿಯ ಪುಣ್ಯ ನದಿಯಲ್ಲಿ ಸ್ನಾನ ಮಾಡಿ, ಶ್ರೀವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ, ಮಾಲೆಯನ್ನು ವಿಸರ್ಜನೆ ಮಾಡತಕ್ಕದ್ದು ಎಂದು ವಿಜಯನಗರ ಜಿಲ್ಲೆಯ ಡಾ. ಪುನೀತ್‌ ರಾಜಕುಮಾರ ಅಭಿಮಾನಿ ಬಳಗದವರು ತಿಳಿಸಿದ್ದಾರೆ.

Join Nadunudi News WhatsApp Group