Debit Card Insurance: ATM ಕಾರ್ಡ್ ಬಳಸುವವರಿಗೆ ಗುಡ್ ನ್ಯೂಸ್, ಬ್ಯಾಂಕಿನಿಂದ ಎಲ್ಲರಿಗೂ ಸಿಗಲಿದೆ 10 ಲಕ್ಷ

ATM ಕಾರ್ಡ್ ಇದ್ದವರಿಗೆ ಸಿಗಲಿದೆ 10 ಲಕ್ಷ ವಿಮೆ

ATM Card Insurance Details: ಏಟಿಎಂ ಕಾರ್ಡ್ (ATM Card) ಸಾಮಾನ್ಯವಾಗಿ ಎಲ್ಲರೂ ಕೂಡ ಬಳಕೆ ಮಾಡುತ್ತಾರೆ. ಬ್ಯಾಂಕ್ ಖಾತೆ (Bank Account) ಹೊಂದಿರುವವರು ಸಾಮಾನ್ಯವಾಗಿ Debit Card ಹೊಂದಿರುತ್ತಾರೆ. ಬ್ಯಾಂಕಿನಲ್ಲಿಸರದಿ ಸಾಲಿನಲ್ಲಿ ನಿಲ್ಲುವ ಬದಲು ಏಟಿಎಂ ನಲ್ಲಿ ಹಣವನ್ನ ಪಡೆಯಬಹುದು ಅನ್ನುವ ಕಾರಣಕ್ಕೆ ಜನರು ಏಟಿಎಂ ಕಾರ್ಡ್ ಅನ್ನು ಈಗ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಏಟಿಎಂ ಕಾರ್ಡ್ ಬಳಸುವವರಿಗೆ ಹಲವು ಯೋಜನೆಗಳು ಇದ್ದು ಈ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ.

ಹೌದು, ದೇಶದಲ್ಲಿ ಅನೇಕ ವಿಧದ ಡೆಬಿಟ್ ಕಾರ್ಡುಗಳು (Debit Card) ಇದ್ದು ಕೆಲವು ಡೆಬಿಟ್ ಕಾರ್ಡುಗಳಿಗೆ ಹಲವು ಯೋಜನೆಗಳು ಇರುತ್ತದೆ ಎಂದು ಹೇಳಬಹುದು. ಕೆಲವು ಏಟಿಎಂ ಕಾರ್ಡುಗಳಿಗೆ ಸುಮಾರು 10 ಲಕ್ಷ ರೂಪಾಯಿಯ ತನಕ ವಿಮಾ ಸವಲತ್ತು ಇದ್ದು ಅದನ್ನ ಜನರು ತಿಳಿದುಕೊಳ್ಳದೆ ಕೆಲವು ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ನಾವೀಗ ಈ ಲೇಖನದಲ್ಲಿ ATM ಕಾರ್ಡ್ ಗಳಿಗೆ ಸಿಗುವ ವಿಮಾ ಸೌಲಭ್ಯದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ATM Card Insurance Details
Image Credit: Lokmat

ATM ಕಾರ್ಡ್ ಇದ್ದವರಿಗೆ ಸಿಗಲಿದೆ 10 ಲಕ್ಷ ವಿಮೆ
ಎಸ್‌ಬಿಐ ಗೋಲ್ಡ್ ಮಾಸ್ಟರ್‌ಕಾರ್ಡ್ ಅಥವಾ ವೀಸಾ ಕಾರ್ಡ್ ಹೊಂದಿರುವವರಿಗೆ 4 ಲಕ್ಷ ವಾಯು ಸಾವು (ವಿಮಾನ ಅಪಘಾತಗಳಲ್ಲಿ ಸಾವಿನ ಸಂದರ್ಭದಲ್ಲಿ) ಮತ್ತು 2 ಲಕ್ಷ ರೂ. ನಾನ್ ಏರ್ ಇನ್ಶೂರೆನ್ಸ್ ಕವರ್ ಸಿಗಲಿದೆ. ಪ್ರೀಮಿಯಂ ಕಾರ್ಡ್ ಹೊಂದಿರುವವರಿಗೆ 10 ಲಕ್ಷ ವಿಮಾನ ಅಪಘಾತ, ರೂ. 5 ಲಕ್ಷ ವಾಯು ರಹಿತ ರಕ್ಷಣೆ ಲಭ್ಯವಿದೆ. ಸಾಮಾನ್ಯ ಮಾಸ್ಟರ್ ಕಾರ್ಡ್ ನಲ್ಲಿ 50 ಸಾವಿರ ರೂ. ಪ್ಲಾಟಿನಂ ಮಾಸ್ಟರ್‌ ಕಾರ್ಡ್‌ ನಲ್ಲಿ 50,000 ರೂ. ವೀಸಾ ಕಾರ್ಡ್‌ ಗೆ 5 ಲಕ್ಷವರೆಗೆ ವಿಮಾ ರಕ್ಷಣೆಯನ್ನು ಒದಗಿಸಲಾಗುವುದು. ಅಲ್ಲದೆ 1 ರಿಂದ 2 ಲಕ್ಷದವರೆಗೆ ವಿಮೆ ಲಭ್ಯವಿದೆ.

ಅಪಘಾತ ವಿಮೆಯನ್ನು ಪಡೆಯಲು ಈ ನಿಯಮಗಳು ಅನ್ವಯ
•ಅಪಘಾತದ ದಿನಾಂಕದಿಂದ 90 ದಿನಗಳ ಮೊದಲು ಎಟಿಎಂ ಕಾರ್ಡ್‌ ನೊಂದಿಗೆ ಯಾವುದೇ ವ್ಯವಹಾರವನ್ನು ಮಾಡಿದರೆ ಮಾತ್ರ ವಿಮೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.

•ಅಪಘಾತದ ಸಂದರ್ಭದಲ್ಲಿ, ಆಸ್ಪತ್ರೆಯ ಬಿಲ್, ಮಾನ್ಯ ಪ್ರಮಾಣಪತ್ರ ಮತ್ತು ಪೊಲೀಸ್ ಎಫ್‌ಐಆರ್ ಕ್ಲೈಮ್ ಮಾಡಲು ಅಗತ್ಯವಿದೆ.

Join Nadunudi News WhatsApp Group

•ಏಟಿಎಂ ವಿಮಾ ಪಾಲಿಸಿ ಹೊಂದಿರುವವರ ಆಕಸ್ಮಿಕ ಮರಣದ ಸಂದರ್ಭದಲ್ಲಿ, ನಾಮಿನಿಯು ಮರಣ ಪ್ರಮಾಣಪತ್ರವನ್ನು ಒದಗಿಸಬೇಕು.

ATM Card Insurance
Image Credit: lokmat

•ಕ್ಲೈಮ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ಗಳ ಮೂಲಕ ಅನ್ವಯಿಸಬಹುದು. ಆಫ್‌ ಲೈನ್ ಮೋಡ್ ಮೂಲಕ ಅರ್ಜಿದಾರರು ಬ್ಯಾಂ ಕ್‌ಗೆ ಹೋಗಿ ಫಾರ್ಮ್ ಅನ್ನು ಭರ್ತಿ ಮಾಡಬೇಕು.

•ಹಕ್ಕು ಸಲ್ಲಿಸಿದ ನಂತರ, ಬ್ಯಾಂಕ್ ಅಧಿಕಾರಿಯನ್ನು ನೇಮಿಸುತ್ತದೆ. ಅಧಿಕಾರಿಗಳು ನಂತರ ತನಿಖೆ ನಡೆಸಲಿದ್ದಾರೆ. ಪರಿಶೀಲನೆ ಬಳಿಕ ಅಂತಿಮ ವರದಿ ಸಿದ್ಧಪಡಿಸಲಾಗುವುದು.

•ಕ್ಲೈಮ್ ಮೊತ್ತವನ್ನು 10 ದಿನಗಳಲ್ಲಿ ಒದಗಿಸಲಾಗುತ್ತದೆ. ಅಪಘಾತದ 60 ದಿನಗಳೊಳಗೆ ನೀವು ಕ್ಲೈಮ್ ಮಾಡಿದರೆ, ನೀವು ವಿಮಾ ಮೊತ್ತವನ್ನು ಪಡೆಯಬಹುದು ಇಲ್ಲವಾದ್ರೆ ಕ್ಲೈಮ್ ಅನ್ನು ತಿರಸ್ಕರಿಸಬಹುದು.

ATM Card Insurance Latest Update
Image Credit: ABP Live

Join Nadunudi News WhatsApp Group