Ayushman Deatils: ಆಯುಷ್ಮನ್ ಕಾರ್ಡ್ ಮೂಲಕ ಯಾವ ಯಾವ ಖಾಯಿಲೆಗೆ ಉಚಿತ ಚಿಕ್ಸಿತೆ ಪಡೆಯಬಹುದು…? ಯಾರಿಗೆ ಸಿಗಲಿದೆ ಕಾರ್ಡ್…?

ಇಂತಹ ಖಾಯಿಲೆಗಳಿಗೆ ಅಯುಷ್ಮಾನ್ ಕಾರ್ಡ್ ಮೂಲಕ ಉಚಿತ ಚಿಕ್ಸಿತೆ ಪಡೆದುಕೊಳ್ಳಬಹುದು.

Ayushman Bharat Free Treatment Deatils: ಬಡತನ ರೇಖೆಗಿಂತ ಕೆಳಗೆ ಇರುವ ಜನರು ಎಲ್ಲಾ ರೀತಿಯ ಆರೋಗ್ಯ ಸವಲತ್ತುಗಳನ್ನ ಪಡೆದುಕೊಳ್ಳಬೇಕು ಅನ್ನುವ ಉದ್ದೇಶದಿಂದ ಕೇಂದ್ರದ ಮೋದಿ ಸರ್ಕಾರ ಈಗಾಗಲೇ ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯನ್ನ ಜಾರಿಗೆ ತಂದಿದೆ. ಈ ಆಯುಷ್ಮನ್ ಭಾರತ್ ಯೋಜನೆಯ ಅಡಿಯಲ್ಲಿ ಸಾಕಷ್ಟು ಬಡಜನರು ಆರೋಗ್ಯ ಸವಲತ್ತುಗಳನ್ನ ಪಡೆದುಕೊಳ್ಳುತ್ತಿದ್ದಾರೆ.

Pradhan Mantri Arogya Yojana
Image Credit: Opindia

Ayushman Bharat
ಸರ್ಕಾರವು ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿಯನ್ನು ಹೊಂದಿದೆ. ದೇಶದ ಜನರು ಆಯುಷ್ಮನ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವ ಮೂಲಕ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅವಕಾಶವಿರುತ್ತದೆ. ಆದರೆ ಈ ಆಯುಷ್ಮನ್ ಭಾರತ್ ಯೋಜನೆಯ ಲಾಭ ಪಡೆಯಲು ಕೆಲವರು ಮಾತ್ರ ಅರ್ಹರಾಗಿರುತ್ತಾರೆ. ಇದೀಗ ನಾವು ಆಯುಷ್ಮಾನ್ ಕಾರ್ಡ್ ನ ಮೂಲಕ ಯಾವ ಯಾವ ಖಾಯಿಲೆಗಳಿಗೆ ಉಚಿತ ಚಿಕೆತ್ಸೆ ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

BPL ಹಾಗೂ APL ಕಾರ್ಡ್ ಹೊಂದಿರುವವರು ಆಯುಷ್ಮನ್ ಭಾರತ್ ಯೋಜನೆಯ ಲಾಭ ಪಡೆಯಬಹುದು
Ayushman Bharat ಯೋಜನೆಯ ಮೂಲಕ BPL Ration Card ಹೊಂದಿರುವವರು ಮತ್ತು ರಾಷ್ಟ್ರೀಯ ಭೀಮಾ ಯೋಜನೆಯಲ್ಲಿ ನೋಂದಾಯಿತರಾಗಿರುವ ಫಲಾನುಭವಿಗಳು ವಾರ್ಷಿಕ ಕುಟುಂಬಕ್ಕೆ ತಲಾ 5,00,000 ರೂ. ವರೆಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

Ayushman Bharat Free Treatment
Image Credit: Gomedii

APL ಕಾರ್ಡ್ ದಾರರು ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದವರು ಪಾವತಿ ಆಧಾರದ ಮೇಲೆ ಸರ್ಕಾರೀ ಪ್ಯಾಕೇಜ್ ದರದ ಶೇ. 30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಪ್ರತಿ ಕುಟುಂಬಕ್ಕೆ 1,50,000 ರೂ. ವರೆಗೆ ಪಡೆಯಬಹುದಾಗಿದೆ. ಭೂಮಿಯನ್ನು ಹೊಂದಿಲ್ಲದವರು, ಮನೆ ಇಲ್ಲದವರು, ದಿನಗೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ಅಥವಾ ಪಂಗಡದಿಂದ ಬಂದವರು ಆಯುಷ್ಮಾನ್ ಯೋಜನೆಯಡಿ ಪ್ರಯೋಜನವನ್ನು ಪಡೆಯಬಹುದು.

ಆಯುಷ್ಮನ್ ಕಾರ್ಡ್ ಮೂಲಕ ಯಾವ ಖಾಯಿಲೆಗೆ ಉಚಿತ ಚಿಕ್ಸಿತೆ ಪಡೆಯಬಹುದು…?
•ಕರೋನ
•ಕಾನ್ಸರ್
•ಮೂತ್ರಪಿಂಡ
•ಹೃದಯ
•ಡೆಂಗ್ಯೂ
•ಚಿಕನ್ ಗುನ್ಯಾ
•ಮಲೇರಿಯಾ
•ಡಯಾಲಿಸಿಸ್
•ಮೊಣಕಾಲು ಮತ್ತು ಸೊಂಟದ ಕಸಿ
•ಕಣ್ಣಿನ ಪೊರೆ

Join Nadunudi News WhatsApp Group

Ayushman Bharat Latest Update
Image Credit: India News

ಯೋಜನೆಯ ಲಾಭ ಪಡೆಯಲು ಯಾರು ಅರ್ಹರು..?
ಚಿಕ್ಕ ಮನೆಗಳಲ್ಲಿ ವಾಸಿಸುವ ಜನರು, ನಿವೇಶನ ರಹಿತರು, ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದವರು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರು, ತೃತೀಯಲಿಂಗಿಗಳು, ಬಡತನ ರೇಖೆಗಿಂತ ಕೆಳಗಿರುವವರು ಆಯುಷ್ಮಾನ್ ಭಾರತ್ ಯೋಜನೆಯ ಲಾಭವನ್ನು ಪಡೆಯಬಹುದು. ಇನ್ನು mera.pmjay.gov.in ಅಧಿಕೃತ ವೆಬ್ಸ್ ಸೈಟ್ ಗೆ ಲಾಗಿನ್ ಆಗುವ ಮೂಲಕ ಅಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group