Ayushman Update: ಕೇಂದ್ರ ಸರ್ಕಾರದ ಇನ್ನೊಂದು ಘೋಷಣೆ, ಪ್ರತಿಯೊಬ್ಬರಿಗೂ ಸಿಗಲಿದೆ 10 ಲಕ್ಷ ರೂ

ಆಯುಷ್ಮಾನ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಇನ್ನೊಂದು ಗುಡ್ ನ್ಯೂಸ್, ಮಹತ್ವದ ಬದಲಾವಣೆ

Ayushman Bharat Health Scheme Benefits: ದೇಶದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಸ್ಕೀಮ್ (Ayushman Bharat Scheme) ಇದು ಉತ್ತಮ ಯೋಜನೆ ಆಗಿದ್ದು, ಈ ಯೋಜನೆಯಡಿ ಬಡ ಜನರು ಉಚಿತ ಚಿಕಿತ್ಯೆಯನ್ನು ಪಡೆಯಬಹುದಾಗಿದೆ. ಹಾಗೆಯೆ ಈಗ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ ಕೇಂದ್ರ ಸರ್ಕಾರವು ವಿಮಾ ರಕ್ಷಣೆಯನ್ನ 10 ಲಕ್ಷ ರೂ.ಗೆ ದ್ವಿಗುಣಗೊಳಿಸುವ ಪ್ರಸ್ತಾವನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ರೋಗಿಗಳು ಕ್ಯಾನ್ಸರ್ ಮತ್ತು ಅಂಗಾಂಗ ಕಸಿಯಂತಹ ದುಬಾರಿ ಚಿಕಿತ್ಸೆಗಳಲ್ಲಿ ಹೆಚ್ಚಿನ ಸಹಾಯವನ್ನ ಪಡೆಯಬಹುದು ಎನ್ನಲಾಗಿದೆ.

Pradhan Mantri Ayushman Bharat Yojana
Image Credit: Business-standard

ಐದು ಲಕ್ಷ ರೂ.ಗಿಂತ ಹೆಚ್ಚಿನ ವೆಚ್ಚದ ಚಿಕಿತ್ಯೆಯನ್ನು ಉಚಿತವಾಗಿ ಪಡೆಯಬಹುದು

ಕೇಂದ್ರ ಆರೋಗ್ಯ ಸಚಿವಾಲಯವು ಕಿಸಾನ್ ಸಮ್ಮಾನ್ ನಿಧಿ ಪಡೆದವರು, ಕಟ್ಟಡ ಕಾರ್ಮಿಕರು, ಕಲ್ಲಿದ್ದಲು ಗಣಿಗಾರಿಕೆಯೇತರ ಕಾರ್ಮಿಕರು ಮತ್ತು ಆಶಾ ಕಾರ್ಯಕರ್ತೆಯರನ್ನ ಸೇರಿಸುವ ಮೂಲಕ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ABPM-JAY) ಫಲಾನುಭವಿಗಳ ಸಂಖ್ಯೆಯನ್ನ 100 ಕೋಟಿಗೆ ಹೆಚ್ಚಿಸಲು ಯೋಜಿಸಿದೆ .

“ಕಸಿ ಮತ್ತು ಹೆಚ್ಚಿನ ವೆಚ್ಚದ ಕ್ಯಾನ್ಸರ್ ಚಿಕಿತ್ಸೆಗಳು ಇತ್ಯಾದಿಗಳಂತಹ ಐದು ಲಕ್ಷ ರೂ.ಗಿಂತ ಹೆಚ್ಚಿನ ವೆಚ್ಚದ ಅಗತ್ಯವಿರುವ ಗಂಭೀರ ಕಾಯಿಲೆಗಳನ್ನ ಸಹ AB-PMJAY ಅಡಿಯಲ್ಲಿ ಒಳಗೊಂಡಿದೆ ಎಂದು ಖಚಿತಪಡಿಸಿಕೊಳ್ಳಲು ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ” ಎಂದು ಮೂಲಗಳು ತಿಳಿಸಿವೆ. ಇದಕ್ಕಾಗಿ 2024-25 ನೇ ಹಣಕಾಸು ವರ್ಷದಿಂದಲೇ ಪ್ರತಿ ಕುಟುಂಬಕ್ಕೆ ವಿಮಾ ಮೊತ್ತವನ್ನ 10 ಲಕ್ಷ ರೂ.ಗೆ ಹೆಚ್ಚಿಸುವ ಪ್ರಸ್ತಾವನೆಯನ್ನ ಅಂತಿಮಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಫೆಬ್ರವರಿ 1ರ ಮಧ್ಯಂತರ ಬಜೆಟ್ ಭಾಷಣದಲ್ಲಿ ಇದನ್ನು ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.

Ayushman Bharat Health Scheme Benefits
Image Credit: Yourstory

ಈ ಯೋಜನೆಯಡಿ ಕೋಟ್ಯಾಂತರ ಜನರು ಚಿಕಿತ್ಯೆ ಪಡೆದಿದ್ದಾರೆ

Join Nadunudi News WhatsApp Group

ಈ ಯೋಜನೆಯನ್ನ 2018ರಲ್ಲಿ ಜಾರಿಗೊಳಿಸಲಾಯಿತು ಮತ್ತು ಇದುವರೆಗೆ 6.2 ಕೋಟಿ ರೋಗಿಗಳು ಇದನ್ನ ಪಡೆದುಕೊಂಡಿದ್ದಾರೆ ಮತ್ತು 79,157 ಕೋಟಿ ರೂ.ಗೂ ಹೆಚ್ಚು ಚಿಕಿತ್ಸೆ ಪಡೆದಿದ್ದಾರೆ. ಪ್ರತಿ ಕುಟುಂಬಕ್ಕೆ ವಿಮಾ ರಕ್ಷಣೆಯ ಮೊತ್ತವನ್ನ 10 ಲಕ್ಷ ರೂ.ಗೆ ಮತ್ತು ಫಲಾನುಭವಿಗಳ ಸಂಖ್ಯೆಯನ್ನ 100 ಕೋಟಿಗೆ ಹೆಚ್ಚಿಸಿದರೆ, ಸರ್ಕಾರವು ಪ್ರತಿ ವರ್ಷ ಹೆಚ್ಚುವರಿ 12,076 ಕೋಟಿ ರೂ.ಗಳನ್ನ ಪ್ರೀಮಿಯಂ ಆಗಿ ಪಾವತಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Join Nadunudi News WhatsApp Group