Ayushman Bharat: ಇಂತವರಿಗೆ ಸಿಗಲ್ಲ ಅಯುಷ್ಮಾನ್ ಭಾರತ್ ಯೋಜನೆಯ ಹಣ, ಕೇಂದ್ರ ಸರ್ಕಾರದ ನಿಯಮ ತಿಳಿದುಕೊಳ್ಳಿ.

ಆಯುಷ್ಮಾನ್ ಭಾರತ್ ಯೋಜನೆ ಲಾಭವನ್ನ ಇಂತಹ ಜನರು ಪಡೆದುಕೊಳ್ಳಲು ಸಾಧ್ಯವಿಲ್ಲ.

Ayushman Bharat Yojana Rules: ಬಡತನ ರೇಖೆಗಿಂತ ಕೆಳಗೆ ಇರುವ ಜನರು ಎಲ್ಲಾ ರೀತಿಯ ಆರೋಗ್ಯ ಸವಲತ್ತುಗಳನ್ನ ಪಡೆದುಕೊಳ್ಳಬೇಕು ಅನ್ನುವ ಉದ್ದೇಶದಿಂದ ಕೇಂದ್ರದ ಮೋದಿ ಸರ್ಕಾರ ಈಗಾಗಲೇ ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯನ್ನ ಜಾರಿಗೆ ತಂದಿದೆ. ದೇಶದ ಬಡ ನಾಗರೀಕರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಪರಿಚಯಿಸಿದ್ದು ಅದರಲ್ಲಿ ಆಯುಷ್ಮನ್ ಭಾರತ್ ಯೋಜನೆ ಕೂಡ ಒಂದಾಗಿದೆ.

Ayushman Bharat Yojana benifits
Image Credit: Gstsuvidhakendra

ಆಯುಷ್ಮನ್ ಭಾರತ್ ಯೋಜನೆ
ಈ ಆಯುಷ್ಮನ್ ಭಾರತ್ ಯೋಜನೆಯ ಅಡಿಯಲ್ಲಿ ಸಾಕಷ್ಟು ಬಡಜನರು ಆರೋಗ್ಯ ಸವಲತ್ತುಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರವು ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿಯನ್ನು ಹೊಂದಿದೆ.

ದೇಶದ ಜನರು ಆಯುಷ್ಮನ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವ ಮೂಲಕ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅವಕಾಶವಿರುತ್ತದೆ. ಆದರೆ ಈ ಆಯುಷ್ಮನ್ ಭಾರತ್ ಯೋಜನೆಯ ಲಾಭ ಪಡೆಯಲು ಕೆಲವರು ಮಾತ್ರ ಅರ್ಹರಾಗಿರುತ್ತಾರೆ.

ಆಯುಷ್ಮನ್ ಭಾರತ್ ಯೋಜನೆಯ ಲಾಭ ಯಾರಿಗೆ ಸಿಗಲಿದೆ
ಆಯುಷ್ಮನ್ ಕಾರ್ಡ್ ನ ಮೂಲಕ ಆಯ್ಕೆ ಮಾಡಲಾದ ಆಸ್ಪತ್ರೆಗಳಲ್ಲಿ ಜನರು 5 ಲಕ್ಷವರೆಗೂ ಉಚಿತ ಚಿಕಿತ್ಸೆಯನ್ನು ಪಡೆಯುವ ಅವಕಾಶವಿರುತ್ತದೆ. ಹೆಚ್ಚಿನ ಜನರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

eligibility of Ayushman Bharat scheme
Image credit: Jagran

ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವವರು ಮತ್ತು ರಾಷ್ಟ್ರೀಯ ಭೀಮಾ ಯೋಜನೆಯಲ್ಲಿ ನೋಂದಾಯಿತರಾಗಿರುವ ಫಲಾನುಭವಿಗಳು ವಾರ್ಷಿಕ ಕುಟುಂಬಕ್ಕೆ ತಲಾ 5,00,000 ರೂ. ವರೆಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

Join Nadunudi News WhatsApp Group

ಎಪಿಎಲ್ ಕಾರ್ಡ್ ದಾರರು ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದವರು ಪಾವತಿ ಆಧಾರದ ಮೇಲೆ ಸರ್ಕಾರೀ ಪ್ಯಾಕೇಜ್ ದರದ ಶೇ. 30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಪ್ರತಿ ಕುಟುಂಬಕ್ಕೆ 1,50,000 ರೂ. ವರೆಗೆ ಪಡೆಯಬಹುದಾಗಿದೆ. ಆಯುಷ್ಮನ್ ಭಾರತ್ ಯೋಜನೆಯಲ್ಲಿ ಚಿಕಿತ್ಸೆಯನ್ನು ನಾಲ್ಕು ಹಂತದಲ್ಲಿ ವಿಭಜಿಸಲಾಗುತ್ತದೆ. ಆನ್ಲೈನ್ ನ ಮೂಲಕ ಆಯುಷ್ಮಾನ್ ಯೋಜನೆಯ ಅರ್ಹತೆಯ ಬಗ್ಗೆ ವಿವರವನ್ನು ತಿಳಿದುಕೊಳ್ಳಬಹುದು.

ಆಯುಷ್ಮನ್ ಭಾರತ್ ಯೋಜನೆಯ ಅರ್ಹತೆ ಪರಿಶೀಲಿಸಿಕೊಳ್ಳುವ ವಿಧಾನ
*ಆಯುಷ್ಮನ್ ಭಾರತ್ ಯೋಜನೆಯ ಅರ್ಹತೆ ಪರಿಶೀಲಿಸಿಕೊಳ್ಳಲು ನೀವು ಮೊದಲು www.mera.pmjay.gov.in ಪಿಎಂ ಜನ ಆರೋಗ್ಯ ಯೋಜನೆಯ ಅಧಿಕ್ರತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

* ನಂತರ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಕ್ಯಾಪ್ಚ್ಯಾ ಕೋಡ್ ಹಾಕಿದಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

Ayushman Bharat Yojana benifits
Image Credit: BBC

*OTP ನಮೂದಿಸಿದ ನಂತರ ನೀವು ನಿಮ್ಮ ಜಿಲ್ಲೆ ಹಾಗೂ ಊರು, ನಿಮ್ಮ ಹೆಸರು ಹಾಗೂ ನಿಮ್ಮ ತಂದೆಯ ಹೆಸರನ್ನು ನಮೂದಿಸಬೇಕು.

*ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೀವು ಆಯುಷ್ಮನ್ ಯೋಜನೆಗೆ ಅರ್ಹರಾಗಿದ್ದೀರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.

Join Nadunudi News WhatsApp Group