ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಕುಳಿತುಕೊಂಡು 1 ಕೋಟಿ ಸಂಪಾದನೆ ಮಾಡಿದ ಕೂಲಿ ಕಾರ್ಮಿಕ, ದೇಶವೇ ಶಾಕ್.

ದೇಶದಲ್ಲಿ ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಅದೆಷ್ಟೋ ಅನೇಕ ಪ್ರತಿಭೆಗಳು ಹೊರಬರುತ್ತಿವೆ, ರಾತ್ರೋ ರಾತ್ರಿ ಸಣ್ಣಪುಟ್ಟ ವೈರಲ್ ವಿಡಿಯೋಗಳ ಮೂಲಕ ಇಡೀ ಪ್ರಪಂಚವನ್ನೇ ತಲುಪುತ್ತಿದ್ದಾರೆ ಅದೆಷ್ಟೋ ಬಡ ಪ್ರತಿಭೆಗಳು. ಡಿಜಿಟಲ್ ಯುಗದಲ್ಲಿ ಪ್ರತಿಭೆ ಪ್ರದರ್ಶನ ಮಾಡಲು ಈಗ ಅದೆಷ್ಟೋ ಮಂದಿ ಸಾಮಾಜಿಕ ಜಾಲತಾಣವನ್ನೇ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ, ಇದೆ ಸಾಲಿನಲ್ಲಿ ಬರುತ್ತಾರೆ ಬಾಬಾ ಜಾಕ್ಸನ್ ಎಂದು ಸಕತ್ ಫೇಮಸ್ ಆಗಿರುವ ಈ ಭಾರತದ ಮೈಕಲ್ ಜಾಕ್ಸನ್. ಹೌದು ಒಮ್ಮೆ ನೀವು ಈತನ ವಿಡಿಯೋಗಳನ್ನು ನೋಡಿದರೆ ಸಾಕು ಅಬ್ಬಬ್ಬಾ ಎಂದು ಬಿಡುತ್ತೀರಾ ಹೌದು ಅಷ್ಟರ ಮಟ್ಟಿಗೆ ಸೆನ್ಸೇಷನ್ ಸ್ರಷ್ಟಿಸಿದ್ದಾರೆ ಈ ಪ್ರತಿಭೆ.

ಟಿಕ್ ಟಾಕ್ ಹಾಗು ಯೌಟ್ಯೂಬ್ ನಲ್ಲಿ ಹವಾ ಮಾಡಿರುವ ಈ ಡಾನ್ಸರ್ ಇದೀಗ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ, ಒಂದು ಮಟ್ಟಿಗೆ ಹೇಳುವುದಾದರೆ ಈತನ ಡ್ಯಾನ್ಸ್ ಅಷ್ಟೊಂದ್ ವೈರಲ್ ಆಗಿದೆ. ಮೈಯಲ್ಲಿ ಮೂಳೆಗಳೇ ಇಲ್ಲವೇ ಎನಿಸುತ್ತದೆ ಈತನ ಡ್ಯಾನ್ಸ್ ನೋಡಿದರೆ,ಹೌದು ಟಿಕ್ ಟಾಕ್ ನಲ್ಲಿಯೇ ಇಂಥ ಹೆಚ್ಚು ಸುದ್ದಿಯಲ್ಲಿದ್ದಾನೆ. ಅನಿವಾರ್ಯವಾದ ಲಾಕ್ ಡೌನ್ ದೇಶದ ಅದೆಷ್ಟೋ ಬಡ ಜನರನ್ನ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ, ಆದರೆ ನಾವು ಹೇಳುತ್ತಿರುವ ಈ ಹುಡುಗನಿಗೆ ಮಾತ್ರ ಈ ಲಾಕ್ ಡೌನ್ ದೊಡ್ಡ ಅದೃಷ್ಟವನ್ನ ತಂದುಕೊಟ್ಟಿದೆ ಎಂದು ಹೇಳಬಹುದು.

Baba jackson

ಸ್ನೇಹಿತರೆ ನಾವು ಹೇಳುತ್ತಿರುವ ಈ ಯುವಕನ ಹೆಸರು ಯುವರಾಜ್, ಈತ ರಾಜಸ್ಥಾನದ ಒಂದು ಕುಗ್ರಾಮದಲ್ಲಿ ಹುಟ್ಟಿದ ಹುಡುಗನಾಗಿದ್ದಾನೆ ಮತ್ತು ಈತನ ತಂದೆ ಒಬ್ಬ ಕೂಲಿ ಕಾರ್ಮಿಕ, ಇನ್ನು ಯುವರಾಜ್ ಕುಟುಂಬ ಎಷ್ಟು ಬಡ ಕುಟುಂಬ ಅಂದರೆ ಈಗಿನ ಕಾಲದಲ್ಲಿ ಕೂಡ ಈತನ ಮನೆಯಲ್ಲಿ ಒಂದು ಮೊಬೈಲ್ ಕೂಡ ಇಲ್ಲ. ಹೀಗೆ ಒಂದು ದಿನ ಮೊಬೈಲ್ ಖರೀದಿ ಮಾಡೋಣ ಎಂದು ಪಣತೊಟ್ಟ ಯುವರಾಜ್ ಮತ್ತು ಆತನ ತಂಗಿ ತಿಂಗಳುಗಳ ಕಾಲ ಕಷ್ಟಪಟ್ಟು ಹಣವನ್ನ ಸಂಪಾದನೆ ಮಾಡಿ ಕೊನೆಗೆ ಒಂದು ಮೊಬೈಲ್ ಖರೀದಿ ಮಾಡಿದರಿ ಮಾಡಿಯೇ ಬಿಟ್ಟರು.

ಜೀವನದಲ್ಲಿ ಮೊದಲ ಮೊಬೈಲ್ ನೋಡಿದ ಅವರಿಗೆ ಆ ಎಲ್ಲಿಲ್ಲದ ಸಂತಸ ಕೊಟ್ಟಿತ್ತು ಮತ್ತು ಬಿಡುವಿನ ಸಮಯದಲ್ಲಿ ಅಣ್ಣ ತಂಗಿ ಒಟ್ಟಿಗೆ ಕುಳಿತುಕೊಂಡು ಡಾನ್ಸ್, ತಮಾಷೆಯ ವಿಡಿಯೋ ಮತ್ತು ಸಿನಿಮಾಗಳನ್ನ ಮೊಬೈಲ್ ನಲ್ಲಿ ನೋಡುತ್ತಿದ್ದರು. ಇನ್ನು ಎಂದಿನಂತೆ ಮೊಬೈಲ್ ನಲ್ಲಿ ಹಾಡುಗಳನ್ನ ನೋಡುತ್ತಿದ್ದ ಯುವರಾಜ್ ಬಾಲಿವುಡ್ ನಟ ಟೈಗರ್ ಸ್ಟರ್ಪ್ ಅವರ ಮುನ್ನ ಮೈಕಲ್ ಅನ್ನುವ ಸಿನಿಮಾದ ಹಾಡು ನೋಡಿದ ಮತ್ತು ಅದರಲ್ಲಿ ಟೈಗರ್ ಸ್ಟರ್ಪ್ ಹಾಕಿದ ಡಾನ್ಸ್ ಸ್ಟೆಪ್ ಯುವರಾಜ್ ಗೆ ತುಂಬಾ ಇಷ್ಟ ಆಯಿತು ಮತ್ತು ನಾನು ಅದರಂತೆ ಡಾನ್ಸ್ ಮಾಡಬೇಕು ಅಂದುಕೊಂಡ ಹಾಗೆ ಅಭ್ಯಾಸವನ್ನ ಕೂಡ ಆರಂಭ ಮಾಡಿದ.

Join Nadunudi News WhatsApp Group

ಮೊದಮೊದಲು ಈತನ ಡಾನ್ಸ್ ನೋಡಿ ಜನರು ನಗಾಡುತ್ತಿದ್ದರು, ಆದರೆ ಒಬ್ಬರು ಮಾತ್ರ ಈತನ ಡಾನ್ಸ್ ಅನ್ನು ಪ್ರೋತ್ಸಹ ಮಾಡುತ್ತಿದ್ದರು ಮತ್ತು ಅವರು ಬೇರಾರು ಅಲ್ಲ ಅದೂ ಯುವರಾಜ್ ನ ತಂಗಿ. ಇನ್ನು ದಿನಬಿಡದೆ ಡಾನ್ಸ್ ಮಾಡುತ್ತಿದ್ದ ಯುವರಾಜ್ ಆರು ತಿಂಗಳ ನಂತರ ಅದರ ಲಯ ಕಂಡುಕೊಂಡ ಮತ್ತು ಮೈಕಲ್ ಜಾನ್ಸನ್ ರೀತಿ ಡಾನ್ಸ್ ಮಾಡುವುದನ್ನ ಕಲಿತುಕೊಂಡ ಯುವರಾಜ್, ಇನ್ನು ತನ್ನ ಡಾನ್ಸ್ ಅನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಮಾಡಿದ ಯುವರಾಜ್ ಗೆ ಪ್ರಶಂಸೆ ಸಿಕ್ಕಿತು ಮತ್ತು ಜನರು ಈತನನ್ನ ಬಾಬಾ ಜಾಕ್ಸನ್ ಎಂದು ಕರೆಯಲು ಆರಂಭ ಮಾಡಿದರು.

Baba jackson

ಇನ್ನು ಇದರ ನಡುವೆ ಲಾಕ್ ಡೌನ್ ಸಮಯದಲ್ಲಿ ಫ್ಲಿಪ್ ಕಾರ್ಟ್ ಕಂಪನಿ ಸ್ಟೇಯ್ ಹೋಂ ಅನ್ನುವ ಸ್ಪರ್ಧೆಯನ್ನ ಆಯೋಜನೆ ಮಾಡಿತ್ತು ಮತ್ತು ಈ ಸ್ಪರ್ಧೆಯಲ್ಲಿ ಜಯ ಗಳಿಸಿದವರಿಗೆ ಪ್ರತಿವಾರ ಹತ್ತು ಲಕ್ಷ ಮತ್ತು ಕೊನೆಯ ವಿಜೇತರಿಗೆ ಒಂದು ಕೋಟಿ ಬಹುಮಾನವನ್ನ ಘೋಷಣೆ ಮಾಡಲಿಗಿತ್ತು. ಇನ್ನು ಈ ಸ್ಪರ್ಧೆಯಲ್ಲಿ ಯಾರು ಮನೆಯಲ್ಲಿ ಚನ್ನಾಗಿ ಮನರಂಜನೆಯನ್ನ ಕೊಡುತ್ತಾರೋ ಅವರಿಗೆ ಒಂದು ಕೋಟಿ ಗೆಲ್ಲುವ ಅವಕಾಶ ಇದ್ದಿತ್ತು ಮತ್ತು ಇದರಲ್ಲಿ ಭಾಗವಹಿಸಿದ ಯುವರಾಜ್ ತನ್ನ ನೃತ್ಯದ ಮೂಲಕ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದರು ಹಾಗೆ ಒಂದು ಕೋಟಿ ಬಹುಮಾನವನ್ನ ಕೂಡ ಗೆದ್ದುಕೊಂಡರು.

ಇನ್ನು ಈಗ ಈತನ ನೃತ್ಯಕ್ಕೆ ಅಮಿತಾಪ್ ಬಚ್ಚನ್ ಮತ್ತು ಹೃತಿಕ್ ರೋಷನ್ ಕೂಡ ಫಿದಾ ಆಗಿದ್ದಾರೆ, ಯುವರಾಜ ನ ಛಲ ಮತ್ತು ತಂಗಿಯ ಪ್ರೋತ್ಸಹ ಇಂದು ಯುವರಾಜ್ ಒಂದು ಕೋಟಿ ಗೆಲ್ಲುವಂತೆ ಮಾಡಿದೆ, ಸ್ನೇಹಿತರೆ ಯುವರಾಜ್ ನೃತ್ಯ ನೀವು ಯೌಟ್ಯೂಬ್ ನಲ್ಲಿ ಕೂಡ ನೋಡಬಹುದಾಗಿದೆ, ಸ್ನೇಹಿತರೆ ಯುವರಾಜ್ ನೃತ್ಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group