Bajaj Freedom 125: ಒಮ್ಮೆ ಟ್ಯಾಂಕ್ ಫುಲ್ ಮಾಡಿದರೆ 330 Km ಮೈಲೇಜ್, ಬಜಾಜ್ CNG ಬೈಕಿಗೆ ಜನರು ಫಿದಾ

ಭರ್ಜರಿ 330km ಮೈಲೇಜ್ ನೀಡುತ್ತದೆ CNG ಬೈಕ್

Bajaj Freedom 125 Booking: ಸದ್ಯ ದೇಶದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿದ್ದಂತೆ ಗ್ರಾಹಕರ ಪೆಟ್ರೋಲ್ ಖರ್ಚನ್ನು ಉಳಿಸಲು Bajaj ಕಂಪನಿಯು ತನ್ನ CNG ಆವೃತ್ತಿಯನ್ನು ವಿಶ್ವದಲ್ಲೇ ಮೊದಲ ಬಾರಿಗೆ ಲಾಂಚ್ ಮಾಡಿದೆ. ಇನ್ನು ಮಾರುಕಟ್ಟೆಯಲ್ಲಿ Bajaj Freedom 125 CNG Bike ನ ವೈಶಿಷ್ಟ್ಯ, ಮೈಲೇಜ್, ಬೆಲೆ ಎಲ್ಲದರ ಬಗ್ಗೆ ಕಂಪನಿಯು ಸಂಪೂರ್ಣ ಮಾಹಿತಿಯನ್ನು ರಿವೀಲ್ ಮಾಡಿದೆ. ಸದ್ಯ ಇಡೀ ವಿಶ್ವದ ಗಮನ Bajaj CNG Bike ನತ್ತ ಇದೆ ಎನ್ನಬಹುದು.

Bajaj Freedom 125 Booking
Image Credit: Carandbike

Bajaj Freedom 125 Booking
ಜುಲೈ 18 ರಿಂದ Bajaj Freedom 125 ಬುಕಿಂಗ್ ಆರಂಭವಾಗಿದೆ. ಬಜಾಜ್ ಈಗಾಗಲೇ ಈ CNG ಬೈಕ್‌ ಗಾಗಿ 6000 ಬುಕಿಂಗ್‌ ಗಳನ್ನು ಸ್ವೀಕರಿಸಿದೆ. ಈ ಬೈಕ್ ಗಾಗಿ 1000 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಬುಕ್ ಮಾಡಬಹುದು. ಎಕ್ಸ್ ಶೋರೂಮ್ ಪ್ರಕಾರ ಈ ಹೊಸ Bajaj Freedom 125  CNG ಬೈಕ್ ಬೆಲೆ 95,000 ದಿಂದ ಆರಂಭಿಕವಾಗಿ ಟಾಪ್ ಎಂಡ್ ರೂಪಾಂತರದ ಬೆಲೆ 1.10 ಲಕ್ಷದವರೆಗೆ ಆಗಿದೆ.

ಭರ್ಜರಿ 330km ಮೈಲೇಜ್ ನೀಡುತ್ತದೆ CNG ಬೈಕ್
ಎಲ್ಲಾ ಹೊಸ ಬಜಾಜ್ ಫ್ರೀಡಂ 125 ಮೋಟಾರ್‌ ಸೈಕಲ್ 125 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 5-ಸ್ಪೀಡ್ ಗೇರ್‌ ಬಾಕ್ಸ್‌ ಗೆ 9.4 PS ಗರಿಷ್ಠ ಶಕ್ತಿಯನ್ನು ಮತ್ತು 9.7 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ತಲಾ 2 ಲೀಟರ್/ಕೆಜಿ ಸಾಮರ್ಥ್ಯದ ಪೆಟ್ರೋಲ್ ಮತ್ತು CNG ಇಂಧನ ಟ್ಯಾಂಕ್ ಹೊಂದಿದೆ. ಈ ಬೈಕ್ CNG ಮೋಡ್‌ ನಲ್ಲಿ 200 ಕಿಮೀ ಮತ್ತು ಪೆಟ್ರೋಲ್ ಮೋಡ್‌ ನಲ್ಲಿ 130 ಕಿಮೀ ಮೈಲೇಜ್ ನೀಡುತ್ತದೆ. ಒಟ್ಟಿಗೆ 330 ಕಿಮೀ ಮೈಲೇಜ್ ನೀಡುತ್ತದೆ.

Bajaj Freedom 125 Price In India
Image Credit: Bikewale

Join Nadunudi News WhatsApp Group

Join Nadunudi News WhatsApp Group