N150: ಹೊಸ ಲುಕ್ ನಲ್ಲಿ ಬಂತು ಇನ್ನೊಂದು ಪಲ್ಸರ್ ಬೈಕ್, ಕಡಿಮೆ ಬೆಲೆ ಮತ್ತು 50 Km ಮೈಲೇಜ್.

ಕಡಿಮೆ ಬೆಲೆಗೆ ಇನ್ನೊಂದು ಬಜಾಜ್ ಪಲ್ಸರ್ ಬೈಕ್ ಲಾಂಚ್.

Bajaj Pulsar N150 Price In India: ಸದ್ಯ ಮಾರುಕಟ್ಟೆಯಲ್ಲಿ ಮೈಲೇಜ್ ವಿಷಯವಾಗಿ Bajaj ಟಾಪ್ ಸ್ಥಾನದಲ್ಲಿದೆ ಎನ್ನಬಹುದು. ಈಗಾಗಲೇ ಮಾರುಕಟ್ಟೆಯಲ್ಲಿ Bajaj ಕಂಪನಿ ಸಾಕಷ್ಟು ಮಾದರಿಯ ಬೈಕ್ ಗಳನ್ನೂ ಪರಿಚಯಿಸಿದೆ. ಇದೀಗ ಕಂಪನಿಯು ನೂತನ ಮಾದರಿಯನ್ನು ಪರಿಚಯಿಸಿದ್ದು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಬಜಾಜ್ ನ ಈ ನೂತನ ಮಾದರಿಯಲ್ಲಿ ಸಾಕಷ್ಟು ನವೀಕರಿಸಿದ ವಿನ್ಯಾಸವನ್ನು ನೋಡಬಹುದಾಗಿದೆ. ಬಲಿಷ್ಠ ಎಂಜಿನ್ ಅನ್ನು ಅಳವಡಿಸಿದ್ದು ಹೊಸ ಮಾದರಿಯು ಹೆಚ್ಚಿನ ಮೈಲೇಜ್ ಅನ್ನು ನೀಡಲಿದೆ. ಬಜಾಜ್ ನ ಹೊಸ ಮಾದರಿ Hero Extreme 160R, TVS Apache RTR 160 4V and Suzuki Gixxer ನ ಮಾದರಿಗಳಿಗೆ ಬಾರಿ ಪೈಪೋಟಿ ನೀಡಲಿದೆ. ಸದ್ಯ ಬಜಾಜ್ ನ ಹೊಸ ಮಾದರಿಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Bajaj Pulsar N150 Price In India
Image Credit: Gaadiwaadi

ಭಾರತೀಯ ಮಾರುಕಟ್ಟೆಗೆ ಬರಲಿದೆ Bajaj Pulsar N150
ದೇಶದ ಜನಪ್ರಿಯ ಬೈಕ್ ತಯಾರಕ ಕಂಪನಿಯಾದ Bajaj ಇದೀಗ ತಮ್ಮ Bajaj Pulsar N150 ಬೈಕ್ ಅನ್ನು ಗ್ರಾಹಕರಿಗೆ ಪರಿಚಯಿಸಿದೆ. ನೀವು ಈ ನೂತನ ಮಾದರಿಯ ಬೈಕ್ ಅನ್ನು ಮೂರು ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಅವುಗಳೆಂದರೆ Racing Red, Ebony Black and Metallic Pearl White ಆಗಿದೆ.

ಇನ್ನು ಕಂಪನಿಯು ತನ್ನ ಇನ್ನಿತರ ಮಾದರಿಗಿಂತ Pulsar N150 ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಿದೆ. ಬೈಕ್ ಸವಾರರ ಸುರಕ್ಷತೆಗಾಗಿ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಸಂಯೋಜನೆಯನ್ನು ಅಳವಡಿಸಲಾಗಿದೆ.

Bajaj Pulsar N150 Bike
Image Credit: Original Source

Bajaj Pulsar N150 ಎಂಜಿನ್ ಸಾಮರ್ಥ್ಯ
Bajaj Pulsar N150 ನಲ್ಲಿ 149.68 CC Engine ಹಾಗು 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ನ ಎಂಜಿನ್ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದ್ದು, ಗರಿಷ್ಠ 14.3 ಬಿಎಚ್‌ಪಿ ಮತ್ತು ಗರಿಷ್ಠ ಟಾರ್ಕ್ 13.5 ಎನ್‌ಎಂ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಬಜಾಜ್ ಪಲ್ಸರ್ N150 ಬೈಕ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದ ಮೊನೊ-ಶಾಕ್ ಹೊಂದಿದೆ.

Join Nadunudi News WhatsApp Group

Bajaj Pulsar N150 ಮೈಲೇಜ್ ಹಾಗೂ ಬೆಲೆ
ಈ ಬೈಕ್ ಸಿಂಗಲ್ ಚಾನೆಲ್ ABS ನೊಂದಿಗೆ ಬರುತ್ತದೆ. ಸಿಂಗಲ್-ಪಾಡ್ ಪ್ರೊಜೆಕ್ಟರ್ ಹೆಡ್‌ ಲ್ಯಾಂಪ್‌ ಗಳನ್ನು ಮತ್ತು ಎಲ್‌ ಇಡಿ ಡಿಆರ್‌ ಎಲ್‌ ಗಳನ್ನು ಎರಡೂ ಬದಿಗಳಲ್ಲಿ ಸ್ಥಾಪಿಸಲಾಗಿದೆ. ಕಂಪನಿಯು ಬಜಾಜ್ ಪಲ್ಸರ್ N150 ನಲ್ಲಿ ಸಿಂಗಲ್-ಪೀಸ್ ಗ್ರಾಬ್ ರೈಲ್‌ ನೊಂದಿಗೆ ಸಿಂಗಲ್-ಪೀಸ್ ಸೀಟ್‌ ಗಳನ್ನು ನೀಡಿದೆ. ಇನ್ನು ಪ್ರತಿ ಲೀಟರ್ ಗೆ 40 ರಿಂದ 50 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಬೈಕ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆಯನ್ನು 1.18 ಲಕ್ಷ ರೂ. ಆಗಿದೆ.

Join Nadunudi News WhatsApp Group