Bajaj Qute: ಚಿಕ್ಕ ಕುಟುಂಬಕ್ಕೆ ಬಜಾಜ್ ನ ಚಿಕ್ಕ ಕಾರ್ ಲಾಂಚ್, ಬೆಲೆ ಕೇವಲ 4 ಲಕ್ಷ ರೂ ಮಾತ್ರ.

ಚಿಕ್ಕ ಕುಟುಂಬಕ್ಕೆ ಬಜಾಜ್ ನ ಚಿಕ್ಕ ಕಾರ್ ಲಾಂಚ್

Bajaj Qute RE60 Car:  ಸಾಮಾನ್ಯವಾಗಿ ಕಾರುಗಳ ಬಗ್ಗೆ ಎಲ್ಲರಿಗೂ ಇಷ್ಟ ಇದ್ದೆ ಇರುತ್ತದೆ. ಜೀವನದಲ್ಲಿ ಒಮ್ಮೆಯಾದರೂ ತಮಗೆ ಇಷ್ಟವಾಗುವ ಕಾರನ್ನ ಖರೀದಿ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳ ಕಾರಣ ಜನರು ಕಾರುಗಳನ್ನ ಮತ್ತು ವಾಹನಗಳನ್ನ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಸದ್ಯ ದೇಶದಲ್ಲಿ Electric Car ಜೊತೆಗೆ CNG Car ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಆಗುತ್ತಿರುವುದನ್ನ ನಾವು ಗಮನಿಸಬಹುದು. ಹೌದು ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಜನರು CNG ಕಾರುಗಳನ್ನ ಜನರು ಹೆಚ್ಚುಹೆಚ್ಚು ಖರೀದಿ ಮಾಡಲು ಬಯಸುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಈ ನೂತನ CNG ಕಾರ್ ಎಂಟ್ರಿ ಕೊಟ್ಟಿದ್ದು, ಕಾರ್ ನ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನವನು ಓದಿ.

Bajaj Qute RE60 Car Price
Image Credit: Facebook

ಚಿಕ್ಕ ಕುಟುಂಬಕ್ಕೆ ಬಜಾಜ್ ನ ಚಿಕ್ಕ ಕಾರ್ ಲಾಂಚ್
ಹಲವು ಕಂಪನಿಗಳು ಹಲವು ಬಗೆಯ CNG ಕಾರ್ ಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿದ್ದು ಒಂದರ ಮೇಲೊಂದರಂತೆ ಕಾರುಗಳು ಹೆಚ್ಚುಹೆಚ್ಚು ಮಾರಾಟ ಆಗುತ್ತಿದೆ. ಸದ್ಯ ಈಗ CNG ಕಾರುಗಳ ಪ್ರಿಯರಿಗೆ ಇನ್ನೊಂದು ಸಿಹಿಸುದ್ದಿ ಬಂದಿದೆ. ಪ್ರತಿಷ್ಠಿತ ವಾಹನ ತಯಾಕರ ಕಂಪನಿ ಅನಿಸಿಕೊಂಡಿರುವ Bajaj ಈಗ ಹೊಸ ಮಾದರಿಯ Bajaj Car ಮಾರುಕಟ್ಟೆಗೆ ಪರಿಚಯ ಮಾಡಿದ್ದು ಇದು ಜನರ ಮೆಚ್ಚುಗೆಗೆ ಕಾರಣವಾಗಿದೆ. ಅತೀ ಕಡಿಮೆ ಬೆಲೆಯ ಅತೀ ಹೆಚ್ಚು ಮೈಲೇಜ್ ಕೊಡುವ ಕಾರನ್ನ ಈಗ ಬಜಾಜ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಈ ಕಾರಿಗೆ ಜನರು ಫಿದಾ ಆಗಿದ್ದಾರೆ.

ಬೆಲೆ ಕೇವಲ 4 ಲಕ್ಷ ರೂ. ಮಾತ್ರ
ದೇಶದ ಜನಪ್ರಿಯ ಕಂಪೆನಿಗಳಲ್ಲಿ ಒಂದಾದ BAJAJ ತನ್ನ Bajaj Qute RE60 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.  ಬಜಾಜ್ ಕ್ಯೂಟ್ ಆರ್‌ಇ60 ವಾಹನವು 216 ಸಿಸಿ ಲಿಕ್ವಿಡ್ ಸಿಎನ್‌ಜಿ ಎಂಜಿನ್‌ ನೊಂದಿಗೆ 10.83 ಅಶ್ವಶಕ್ತಿಯೊಂದಿಗೆ 16 ನ್ಯೂಟನ್ ಮೀಟರ್ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಐದು-ವೇಗದ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ. ಬಜಾಜ್ ನ ಈ ಕಾರನ್ನು ಕೇವಲ 4 ಲಕ್ಷ ರೂ.ಗೆ ಖರೀದಿಸಲು ನಿಮಗೀಗ ಒಂದೊಳ್ಳೆ ಆಫರ್ ಬಂದಿದೆ.

Bajaj Qute RE60 Car
Image Credit: Auto360hindi

ಈ ವಾಹನದ ಅದ್ಭುತ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಕಂಪನಿಯು ಈ ವಾಹನದಲ್ಲಿ 20 ಲೀಟರ್ಗಳಷ್ಟು ದೊಡ್ಡ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಒದಗಿಸಿದೆ. ಇದರೊಂದಿಗೆ, ನೀವು ಹಾರ್ಡ್ ಟಾಪ್ ರೂಫ್ ಡೋರ್, ಸ್ಟೀರಿಂಗ್ ಮಿಶ್ರಲೋಹದ ಚಕ್ರಗಳು ಮತ್ತು 2 * 2 ಕಾನ್ಫಿಗರೇಶನ್ ಜೊತೆಗೆ ಪ್ರತಿ ಋತುವಿನಲ್ಲಿ ಹವಾಮಾನ ನವೀಕರಣಗಳನ್ನು ಪಡೆಯುತ್ತೀರಿ. ಬಜಾಜ್‌ನ ಈ ಕಾರನ್ನು ಕೇವಲ 4 ಲಕ್ಷಕ್ಕೆ ಖರೀದಿಸಬಹುದು. ಭಾರತೀಯ ಮಾರುಕಟ್ಟೆಯಲ್ಲಿ Bajaj Qute RE60 ನ  ಆರಂಭಿಕ ಬೆಲೆ ರೂ. 3.61 ಲಕ್ಷ ಆಗಿದೆ. ನೀವು ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ Bajaj Qute RE60 ಕಾರನ್ನು ಖರೀದಿಸಬಹುದಾಗಿದೆ.

Join Nadunudi News WhatsApp Group

Bajaj Qute RE60 Car Mileage
Image Credit: Facebook

Join Nadunudi News WhatsApp Group