New Scheme: ಪೋಸ್ಟ್ ಆಫೀಸ್ ನಲ್ಲಿ 36 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ ಭರ್ಜರಿ 6 ಲಕ್ಷ ರೂ, ಹೊಸ ಯೋಜನೆ

ಈ ಯೋಜನೆಯಲ್ಲಿ 36 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ ಭರ್ಜರಿ 6 ಲಕ್ಷ ರೂ

Bal Jeevan Bhima Yojana: ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಹಣವನ್ನು ಉಳಿತಾಯ ಮಾಡಲು ಬಯಸುತ್ತಾರೆ. ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ನೀವು ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ನಿಮಗೆ ಪೋಸ್ಟ್ ಆಫೀಸ್ (Post Office) ಇದೀಗ ಹೊಸ ಯೋಜನೆಯನ್ನು ಪರಿಚಯಿಸಿದೆ.  ಈ ಪೋಸ್ಟ್ ಆಫೀಸ್ ನ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ನೀವು ಸಾಕಷ್ಟು ಲಾಭವನ್ನು ಪಡೆಯಬಹುದು. ಇದೀಗ ನಾವು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

Bal Jeevan Bhima Yojana
Image Credit: News 18

Bal Jeevan Bhima Yojana
ಸದ್ಯ ಪೋಸ್ಟ್ ಆಫೀಸ್ ನಲ್ಲಿ ಮಕ್ಕಳಿಗಾಗಿ Bal Jeevan Bhima ಜೀವ ವಿಮಾ ಯೋಜನೆಯು ಪರಿಚಯವಾಗಿದೆ. ಅಂಚೆ ಇಲಾಖೆಯು ಈ ಯೋಜನೆಯನ್ನು ವಿಶೇಷವಾಗಿ ಮಕ್ಕಳಿಗಾಗಿ ರೂಪಿಸಿದೆ. ಈ ಯೋಜನೆಯು ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ನಡೆಸಲ್ಪಡುತ್ತದೆ. ಈ ಯೋಜನೆಯ ಅಡಿಯಲ್ಲಿ, ಮೆಚ್ಯೂರಿಟಿಯಲ್ಲಿ ಲಕ್ಷದ ವರೆಗಿನ ಮೊತ್ತದ ವಿಮಾ ಮೊತ್ತವನ್ನು ಪಡೆಯುವ ಅವಕಾಶವಿದೆ. ಇದೀಗ ನಾವು Bal Jeevan Bhima ಯೋಜನೆಯ ಹೂಡಿಕೆಯ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.

ಈ ಯೋಜನೆಯಲ್ಲಿ 36 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ ಭರ್ಜರಿ 6 ಲಕ್ಷ ರೂ
ಪೋಸ್ಟ್ ಆಫೀಸ್ ಮಕ್ಕಳ ಜೀವ ವಿಮೆಯನ್ನು ಮಕ್ಕಳ ಪೋಷಕರು ಖರೀದಿಸಬಹುದು. Bal Jeevan Bhima ಯೋಜನೆಯನ್ನು 5 ವರ್ಷದಿಂದ 20 ವರ್ಷ ವಯಸ್ಸಿನ ಮಕ್ಕಳಿಗೆ ಖರೀದಿಸಬಹುದು. ತಮ್ಮ ಮಕ್ಕಳಿಗೆ ಈ ವಿಮಾ ಯೋಜನೆಯನ್ನು ಖರೀದಿಸಲು ಬಯಸುವ ಪೋಷಕರು, ಅವರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. ಈ ಯೋಜನೆಯ ಲಾಭವನ್ನು ಗರಿಷ್ಠ ಎರಡು ಮಕ್ಕಳಿಗೆ ನೀಡಬಹುದು.

Post Office Bal Jeevan Bhima Yojana
Image Credit: News 18

ಮಕ್ಕಳ ಜೀವ ವಿಮಾ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ನೀವು ರೂ, 6 ರಿಂದ ರೂ. 18 ರವರೆಗಿನ ದೈನಂದಿನ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದು. ಈ ಯೋಜನೆಯು ಇಬ್ಬರು ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ. ಎರಡು ಮಕ್ಕಳಿಗೆ ದಿನಕ್ಕೆ 36 ರೂ. ಉಳಿತಾಯ ಮಾಡಿದರೆ ಮುಕ್ತಾಯದ ಸಮಯದಲ್ಲಿ 6 ಲಕ್ಷದವರೆಗೆ ಲಾಭ ಗಳಿಸಬಹುದಾಗಿದೆ.

Bal Jeevan Bhima Yojana Profit
Image Credit: News 18

Join Nadunudi News WhatsApp Group

Join Nadunudi News WhatsApp Group