Bank Loan: ಬ್ಯಾಂಕಿನಲ್ಲಿ ಸಾಲ ಪಡೆದ ವ್ಯಕ್ತಿ ಸತ್ತರೆ ಆತನ ಸಾಲಕ್ಕೆ ಹೊಣೆ ಯಾರು, ಕೆಲವು ಬ್ಯಾಂಕಿನವರು ಮೋಸ ಮಾಡುತ್ತಾರೆ ಎಚ್ಚರ ಇರಲಿ.

ಇತ್ತೀಚಿನ ದಿನಗಳಲ್ಲಿ ಹಲವು ಜನರು ಕೆಲವು ಅಗತ್ಯ ಅವಶ್ಯಕತೆಗಳ ಕಾರಣ ಬ್ಯಾಂಕಿನಿಂದ ಅಥವಾ ಬೇರೆ ಹಣಕಾಸು ಸಂಸ್ಥೆಗಳಿಂದ ಸಾಲವನ್ನ ಪಡೆದುಕೊಳ್ಳುತ್ತಾರೆ. ಕೆಲವರು ವಯಕ್ತಿಕ ಕೆಲಸಗಳ ಕಾರಣ Bank Loan ಪಡೆದುಕೊಂಡರೆ ಇನ್ನೂ ಕೆಲವರು ಗೃಹ ನಿರ್ಮಾಣ ಮಾಡಲು ಮತ್ತು ಇತರೆ ವ್ಯವಹಾರಕ್ಕಾಗಿ ಸಾಲವನ್ನ ಪಡೆದುಕೊಳ್ಳುತ್ತಾರೆ. ಬ್ಯಾಂಕ್ ಅಥವಾ ಒಂದು ಹಣಕಾಸು ಸಂಸ್ಥೆ ನಿಮಗೆ ಸಾಲವನ್ನ ನೀಡುವ ಮೊದಲು ಕೆಲವು ಅಗತ್ಯ ದಾಖಲೆಗಳಿಗೆ ಸಹಿ ಹಾಕಿಸಿಕೊಂಡು ನಂತರ ಸಾಲವನ್ನ ನೀಡುತ್ತದೆ. ಅದೇ ರೀತಿಯಲ್ಲಿ ಸಾಲಗಳ ಮರುಪಾವತಿಗೆ ಸಂಬಂಧಿಸಿದಂತೆ ಹಲವು ನಿಯಮಗಳು ಇದ್ದು ಅದನ್ನ ಜನರು ಸರಿಯಾಗಿ ತಿಳಿದುಕೊಳ್ಳುವುದು ಅತ್ಯವಶ್ಯಕ, ಇಲ್ಲವಾದರೆ ನಿಮಗೆ ಬ್ಯಾಂಕಿನವರು ಮೋಸ ಮಾಡುವ ಸಾಧ್ಯತೆ ಇರುತ್ತದೆ.

ಒಬ್ಬ ವ್ಯಕ್ತಿ ಬ್ಯಾಂಕಿನಲ್ಲಿ ಸಾಲವನ್ನ ಪಡೆದುಕೊಂಡಿದ್ದು, ಆತ ಆ ಸಾಲವನ್ನ ತೀರಿಸುವುದರ ಒಳಗಾಗಿಯೇ ಮರಣವನ್ನ ಹೊಂದಿದರೆ ಆ ಸಾಲಕ್ಕೆ ಹೊಣೆ ಯಾರು ಅನ್ನುವ ಪ್ರಶ್ನೆ ಹಲವರ ತಲೆಯಲ್ಲಿ ಇದೆ. ಸಾಲ ಪಡೆದುಕೊಂಡ ವ್ಯಕ್ತಿ ಸಾಲ ಮರುಪಾವತಿ ಮಾಡುವುದರ ಒಳಗೆ ಸತ್ತರೆ ಆತ ಯಾವ ರೀತಿಯ ಸಾಲವನ್ನ ಪಡೆದುಕೊಂಡಿದ್ದಾನೆ ಅನ್ನುವುದು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಒಬ್ಬ ವ್ಯಕ್ತಿ Personal Loan ಪಡೆದುಕೊಂಡಿದ್ದರೆ ಆ ಸಾಲ ಸುರಕ್ಷಿತವಲ್ಲದ ಸಾಲ ಆಗಿರುತ್ತದೆ ಮತ್ತು ಆತ ಸಾಲ ಮರುಪಾವತಿ ಮಾಡುವುದರ ಒಳಗೆ ಸತ್ತರೆ ಬ್ಯಾಂಕುಗಳು ಆತನ ಉತ್ತರಾಧಿಕಾರಿ ಅಥವಾ ಮನೆಯವರ ಬಳಿ ಸಾಲವನ್ನ ಮರುಪಾವತಿ ಮಾಡುವಂತೆ ಕೇಳುವಂತಿಲ್ಲ.

bank loan payment rules
Image Credit: www.dnaindia.com

ವಯಕ್ತಿಕ ಸಾಲ ಪಡೆದುಕೊಂಡ ವ್ಯಕ್ತಿ ಸತ್ತರೆ ಬ್ಯಾಂಕಿನವರು ಆಸ್ತಿ ಅಥವಾ ಇತರೆ ಯಾವುದೇ ವಸ್ತುಗಳನ್ನ ವಶಪಡಿಸಿಕೊಳ್ಳುವ ಹಾಗಿಲ್ಲ. ಅದೇ ರೀತಿಯಲ್ಲಿ ಬ್ಯಾಂಕಿನ ಇನ್ನೊಂದು ನಿಯಮದ ಪ್ರಕಾರ ಒಬ್ಬ ವ್ಯಕ್ತಿ Loan ಪಡೆದುಕೊಳ್ಳುವ ಸಮಯದಲ್ಲಿ ಆತನ ಜೊತೆ ಇನ್ನೊಬ್ಬ ವ್ಯಕ್ತಿ ಸಹಿ ಹಾಕಿದ್ದರೆ ಅಥಾವ ಸಹ ಸಹ-ಅರ್ಜಿದಾರಿದ್ದರೆ ಆ ಸಾಲವನ್ನ ಅವರಿಗೆ ವರ್ಗಾವಣೆ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಸಾಲ ಪಡೆಯುವ ಸಮಯದಲ್ಲಿ ಆತ ಸಾಲದ ಮೇಲೆ ವಿಮೆಯನ್ನ ಮಾಡಿದ್ದು ಸಲ ಮರುಪಾವತಿ ಆಗುವುದರ ಒಳಗೆ ಆತ ಸತ್ತರೆ ಬ್ಯಾಂಕಿನವರು ವಿಮೆಯ ಮೂಲಕ ಸಾಲವನ್ನ ಮರುಪಾವತಿ ಮಾಡಿಕೊಳ್ಳಬಹುದಾಗಿದೆ. ಈ ನಿಯಮ ವಯಕ್ತಿಕ ಸಾಲಕ್ಕೆ ಮಾತ್ರ ಸೀಮಿತವಾಗಿದ್ದು Home Loan ಪಡೆದುಕೊಂಡಿದ್ದರೆ ಈ ನಿಯಮ ಅನ್ವಯ ಆಗುವುದಿಲ್ಲ.

ಒಬ್ಬ ವ್ಯಕ್ತಿ Home Loan ಪಡೆದುಕೊಂಡಿದ್ದು, ಆತ ಸಾಲವನ್ನ ಮರುಪಾವತಿ ಮಾಡುವುದರ ಒಳಗೆ ಮರಣವನ್ನ ಹೊಂದಿದರೆ ಬ್ಯಾಂಕುಗಳು ಅವರ ಉತ್ತರಾಧಿಕಾರಿಗಳಿಂದ ಸಾಲವನ್ನ ಮರುಪಾವತಿ ಮಾಡಿಸಿಕೊಳ್ಳಬಹುದು ಅಥವಾ ಆಸ್ತಿಯನ್ನ ತಮ್ಮ ವಶಕ್ಕೆ ಪಡೆದುಕೊಳ್ಳಬಹುದಾಗಿದೆ. ನಿಗದಿತ ಸಮಯದ ಒಳಗೆ ಗೃಹ ಸಾಲವನ್ನ ಪಾವತಿ ಮಾಡದೆ ಇದ್ದರೆ ಬ್ಯಾಂಕುಗಳು ಸಾಲಗಳ ಆಸ್ತಿಯನ್ನ ಮಾರಾಟ ಮಾಡಿ ಸಾಲವನ್ನ ಪಾವತಿ ಮಾಡಿಕೊಳ್ಳುವ ಹಕ್ಕನ್ನ ಹೊಂದಿರುತ್ತದೆ. Loan Payment ಸಂಬಂಧಿಸಿದಂತೆ ಹಲವು ನಿಯಮಗಳು ಇದ್ದು ಅದನ್ನ ಜನರು ಸರಿಯಾಗಿ ತಿಳಿದುಕೊಂಡು ಬ್ಯಾಂಕಿನಲ್ಲಿ ವ್ಯವಹಾರ ಮಾಡುವುದು ಉತ್ತಮ.

Join Nadunudi News WhatsApp Group

Join Nadunudi News WhatsApp Group