Bank Of Baroda Job Notification: ಇದೀಗ ನೀವು ನಿಮ್ಮ ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸಿ ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗವನ್ನು ಹುಡುಕುತಿದ್ದರೆ ಈ ಮಾಹಿತಿ ನಿಮಗೆ ಬಹಳ ಉಪಯುಕ್ತವಾಗುತ್ತದೆ. ಇದೀಗ ಬ್ಯಾಂಕ್ ಆಫ್ ಬರೋಡ 2700 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಘೋಷಣೆ ಮಾಡಿದೆ. ಇದು ನಿಮಗೆ ಭವಿಷ್ಯದ ಕನಸನ್ನು ನನಸು ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್ ನೇಮಕಾತಿ
ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್ ನೇಮಕಾತಿ, ಇದು Apprenticeship Act 1961 ರ ಅಡಿಯಲ್ಲಿ ನೆಡೆಯುತ್ತದೆ. ಇದರಲ್ಲಿ ಆಯ್ಕೆ ಯಾದವರು ಬ್ಯಾಂಕ್ ನ ಶಾಖೆಯಲ್ಲಿ 12 ತಿಂಗಳು ಗಳ ಕಾಲ ಕೆಲಸವನ್ನು ಕಲಿಯುತ್ತಾರೆ. ಇದು ಶಾಶ್ವತವಾದ ಉದ್ಯೋಗ ಅಲ್ಲ, ಆದರೆ ಪ್ರತಿ ತಿಂಗಳಿ 15 ಸಾವಿರ ಸಂಬಳವನ್ನು ನೀಡುತ್ತಾರೆ. ದೇಶಾಧ್ಯಂತ 2700 ಹುದ್ದೆಗಳಿಗೆ ಅರ್ಜಿ ಆವ್ಹಾನ ಮಾಡಿದೆ. ಅದರಲ್ಲಿ ಗುಜರಾತ್-400, ಉತ್ತರ ಪ್ರದೇಶಕ್ಕೆ-307, ಮಹಾರಾಷ್ಟ್ರಕ್ಕೆ-297, ಕರ್ನಾಟಕಕ್ಕೆ-440. ಈ ತರಬೇತಿಯಲ್ಲಿ ಬ್ಯಾಂಕ್ ನ ಮೂಲಭೂತ ಕೆಲಸಗಳಾದ ಖಾತೆ ತೆರೆಯುದು, ಲೋನ್ ಪ್ರಕ್ರಿಯೆ, ಕಸ್ಟಮರ್ ಸರ್ವಿಸ್ ಬಗ್ಗೆ ತಿಳಿಸಲಾಗುತ್ತದೆ.
ಉದ್ಯೋಗದ ಅರ್ಹತೆ
* ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರು ವಿಷಯದಲ್ಲಿ ಪದವಿಯನ್ನು ಪಡೆದುಕೊಂಡಿರಬೇಕು.
* 20-28 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. (ನವೆಂಬರ್ 1 2025 ರ ಆದರದ ಮೇಲೆ)
* ಭಾರತೀಯ ನಾಗರಿಕರಿಗೆ ಮಾತ್ರ ಅವಕಾಶ
* ಈಗಾಗಲೇ ತರಬೇತಿ ಅನುಭವವನ್ನು ಪಡೆದಿರಬಾರದು
ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಮೊದಲು NATS (https://nats.education.gov.in/) ಅಥವಾ NAPS (https://www.apprenticeshipindia.gov.in/) ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು Bank of Baroda Apprentice ಹುಡುಕಿ ಅರ್ಜಿ ಸಲ್ಲಿಸಿ, ನಂತರ [email protected] ಇಮೈಲ್ ಮೂಲಕ ಬರುವ Application cum Examination Form ಅನ್ನು ಭರ್ತಿ ಮಾಡಿ. ಈ ಪ್ರಕ್ರಿಯೆ ಸರಳ ಆದರೆ ನೋಂದಣಿ ಮಾಹಿತಿಯನ್ನ ಸರಿಯಾಗಿ ನಮೂದಿಸಿ, ಯಾವುದೇ ಸಮಸ್ಯೆ ಇದ್ದರೆ, ಅಧಿಕೃತ ಹೆಲ್ಪ್ ಲೈನ್ ಗೆ ಸಂಪರ್ಕ ಮಾಡಿ.
ಆಯ್ಕೆ ಪ್ರಕ್ರಿಯೆ
ಆನ್ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. 60 ನಿಮಿಷಗಳು ಮತ್ತು 100 ಅಂಕಗಳು. ಇದರಲ್ಲಿ ಸಾಮಾನ್ಯ / ಹಣಕಾಸು ಜಾಗ್ರತಿ (25), ಪರಿಮಾಣಾತ್ಮಕ & ತಾರ್ಕಿಕ ಚಿಂತನೆ (25), ಕಂಪ್ಯೂಟರ್ ಜ್ಞಾನ (25), ಇಂಗ್ಲಿಷ್ (25) ಹಾಗೆ ಇದರಲ್ಲಿ ನೆಗೆಟಿವ್ ಮಾರ್ಕ್ ಇರುವುದಿಲ್ಲ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

