Bank Interest Rate Down: ಬ್ಯಾಂಕ್ ನಿಂದ ಸಾಲ ಪಡೆಯುವವರಿಗೆ ಹೊಸ ಸುದ್ದಿ, ಬಡ್ಡಿ ದರ ಇಳಿಕೆ.

Bank Of Baroda Bank Loan: ಇದೀಗ ಬ್ಯಾಂಕ್ ನಿಂದ ಸಾಲ ಪಡೆಯುವವರಿಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಇನ್ನುಮುಂದೆ ಬ್ಯಾಂಕ್ ನಲ್ಲಿ ಸಾಲ ಪಡೆಯುವ ವ್ಯಕ್ತಿಗಳಿಗೆ ನೆಮ್ಮದಿ ಸಿಗಲಿದೆ ಎನ್ನಬಹುದು.

ಸಾಲ ಮಾಡುವ ಯೋಚನೆಯಲ್ಲಿದ್ದವರಿಗೆ ಇದು ಒಳ್ಳೆಯ ಸುದ್ದಿ. ಬಡ್ಡಿದರಗಳು ತೀವ್ರವಾಗಿ ಇಳಿದಿದೆ. ಆರ್ ಬಿ ಐ ರೆಪೋ ದರ ಏರಿಕೆಯ ಹಿನ್ನಲೆಯಲ್ಲಿ ಎಲ್ಲ ಬ್ಯಾಂಕ್ ಗಳು ಸಾಲದ ದರವನ್ನು ಹೆಚ್ಚಿಸಿದೆ.

Bank Of Baroda Bank Loan down
Image Source: Istock

ಬ್ಯಾಂಕ್ ಆಫ್ ಬರೋಡ ಹೊಸ ನಿರ್ಧಾರ
ಆದರೆ ಇಲ್ಲೊಂದು ಬ್ಯಾಂಕ್ ರಿವರ್ಸ್ ಗೇರ್ ಹಾಕಿದೆ. ಸಾಲದ ದರವನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ. ಇದರೊಂದಿಗೆ ಸಾಲ ಮಾಡುವ ಯೋಚನೆಯಲ್ಲಿರುವವರಿಗೆ ಉತ್ತೇಜನ ಸಿಗಲಿದೆ ಎನ್ನಬಹುದು. ಬ್ಯಾಂಕ್ ಸಾಲದ ದರಗಳನ್ನು ಕಡಿಮೆ ಮಾಡುವ ನಿರ್ಧಾರವು ಗೃಹ ಸಾಲಗಳಿಗೆ ಮಾತ್ರ ಅನ್ವಹಿಸುತ್ತದೆ.

ಅಂದರೆ ಸ್ವಂತ ಮನೆಯನ್ನು ಹೊಂದುವ ಕನಸ್ಸನ್ನು ನನಸಾಗಿಸಲು ಬಯಸುವವರಿಗೆ ಇದು ಉತ್ತಮ ಸಮಯ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿ ಮುಂದುವರೆದಿರುವ ಬ್ಯಾಂಕ್ ಆಫ್ ಬರೋಡ (Bank Of Baroda) ಇತ್ತೀಚಿಗೆ ಈ ನಿರ್ಧಾರವನ್ನು ತೆಗೆದುಕೊಂಡಿದೆ.

Bank Of Baroda Bank Loan down
Image Source: India Today

ತನ್ನ ಬಡ್ಡಿ ದರವನ್ನು ಕಡಿತಗೊಳಿಸಿದ ಬ್ಯಾಂಕ್ ಆಫ್ ಬರೋಡ ಬ್ಯಾಂಕ್
ಬ್ಯಾಂಕ್ ಆಫ್ ಬರೋಡ ತನ್ನ ಬಡ್ಡಿ ದರವನ್ನು ಕಡಿತಗೊಳಿಸಿದೆ. ಬ್ಯಾಂಕ್ ಆಫ್ ಬರೋಡಾ ತನ್ನ ಗೃಹ ಸಾಲದ ದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇದರೊಂದಿಗೆ, ಗೃಹ ಸಾಲದ ಮೇಲಿನ ಬಡ್ಡಿ ದರವು 8.5 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ಜತೆಗೆ ಬ್ಯಾಂಕ್ ಮತ್ತೊಂದು ನಿರ್ಧಾರ ಕೈಗೊಂಡಿದೆ. ಇದು ಎಂಎಸ್‌ಎಂಇ ಸಾಲಗಳ ಮೇಲಿನ ದರಗಳನ್ನೂ ಕಡಿಮೆ ಮಾಡಿದೆ.

Join Nadunudi News WhatsApp Group

Bank Of Baroda Bank Loan downBank Of Baroda Bank Loan down
Image Source: India Today

ಬ್ಯಾಂಕ್ ನಿಂದ ಸಾಲ ಪಡೆಯಲು ಬಯಸುವವರು ನೇರವಾಗಿ ಬ್ಯಾಂಕ್ ಶಾಖೆಗೆ ತೆರಳಿ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯಬಹುದು. ಅಥವಾ ಆನ್ ಲೈನ್ ಮೂಲಕ ಅರ್ಜಿ ಹಾಕಬಹುದು. ಬ್ಯಾಂಕ್ ನ ಅಪ್ಲಿಕೇಶನ್ ಅಥವಾ ವೆಬ್ ಸೈಟ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಆಯ್ಕೆ ಕೂಡ ಇದೆ.

Bank Of Baroda Bank Loan down
Image Source: India Today

Join Nadunudi News WhatsApp Group