Health Insurance: ಕೇಂದ್ರದಿಂದ BPL ಕಾರ್ಡ್ ಇದ್ದವರಿಗೆ 5 ಲಕ್ಷ ಮತ್ತು APL ಕಾರ್ಡ್ ಇದ್ದವರಿಗೆ 2 ಲಕ್ಷ ರೂ, ಇಂದೇ ಅರ್ಜಿ ಸಲ್ಲಿಸಿ

ಕೇಂದ್ರದ ಈ ಯೋಜನೆಯ ಅಡಿಯಲ್ಲಿ BPL ಕಾರ್ಡ್ ಇದ್ದವರಿಗೆ 5 ಲಕ್ಷ ಮತ್ತು APL ಕಾರ್ಡ್ ಇದ್ದವರಿಗೆ 2 ಲಕ್ಷ ರೂ ಸಿಗಲಿದೆ

Ayushman Bharat Health Card 2024: ಸದ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಿಗಾಗಿ ವಿವಿಧ ಆರೋಗ್ಯ ಯೋಜನೆಯನ್ನು ಪರಿಚಯಿಸಿವೆ. ಜನಸಾಮಾನ್ಯರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಅವರಿಗೆ ಆರ್ಥಿಕ ತೊಂದರೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರದ ಆರೋಗ್ಯ ಯೋಜನೆಯಡಿ ಉಚಿತ ಚಿಕಿತ್ಸೆಯನ್ನು ನೀಡಲು ಮುಂದಾಗಿದೆ.

ಇದಕ್ಕಾಗಿಯೇ Ayushman Bharat- Pradhan Mantri Jana Arogya Yojana ಹಾಗೂ ಮುಖ್ಯಮಂತ್ರಿ Arogya Karnataka ಯೋಜನೆಗಳನ್ನು ಪರಿಚಯಿಸಲಾಗಿದೆ. ಈ ಯೋಜನೆಯಡಿ BPL ಹಾಗೂ APL ಕಾರ್ಡ್ ದಾರರು ಉಚಿತ ಚಿಕಿತ್ಸೆಯ ಲಾಭವನ್ನು ಪಡೆಯಬಹುದು.

benefits of ayushman card
Image Credit: Original Source

BPL ಕಾರ್ಡ್ ದಾರರಿಗೆ 5 ಲಕ್ಷ, APL ಕಾರ್ಡ್ ದಾರರಿಗೆ 2 ಲಕ್ಷ
ಜನರ ಆರೋಗ್ಯ ಸುರಕ್ಷತೆಗಾಗಿಗೇ ಈಗಾಗಲೇ ಆಯುಷ್ಮನ್ ಭಾರತ್ ಜನ ಅರೋಗ್ಯ ಯೋಜನೆ ಹಾಗೂ ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ BPL ಕಾರ್ಡ್ ದಾರರಿಗೆ 5 ಲಕ್ಷ, APL ಕಾರ್ಡ್ ದಾರರಿಗೆ 2 ಲಕ್ಷ ರೋ. ಸೌಲಭ್ಯವನ್ನು ನೀಡಲಾಗುತ್ತದೆ. ಆರೋಗ್ಯ ಯೋಜನೆಗಳ ಕಾರ್ಗ್ ಗಳನ್ನೂ ಪಡೆದುಕೊಳ್ಳುವ ಮೂಲಕ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಆಯುಷ್ಮಾನ್ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತ ಚಿಕಿತ್ಸೆ ಲಭ್ಯವಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರು 5 ಲಕ್ಷ ರೂ. ವರೆಗೆ ಚಿಕಿತ್ಸೆ ಪಡೆಯಬಹುದು ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಅಥವಾ ಕಾರ್ಡ್ ಇಲ್ಲದವರು 1.5 ರಿಂದ 2 ಲಕ್ಷ ರೂ. ವರೆಗೆ ಚಿಕಿತ್ಸೆ ಪಡೆಯಬಹುದು. ನೀವು ಮನೆಯಲ್ಲಿಯೇ ಕುಳಿತು Ayushman Bharat Health Card ಅನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು.

total benefits of ayushman card
Image Credit: Original Source

ಆಯುಷ್ಮಾನ್ ಕಾರ್ಡ್ ಗಾಗಿ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಿ
•ನೀವು abdm.gov.in/ ಗೆ ಭೇಟಿ ನೀಡುವ ಮೂಲಕ ಆಯುಷ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

•ವೆಬ್‌ಸೈಟ್ ತೆರೆದ ತಕ್ಷಣ, ABHA ಕಾರ್ಡ್ ಮೇಲೆ ಕ್ಲಿಕ್ ಮಾಡಿ. ನಿಮ್ಮ Aadhaar Card ಸಂಖ್ಯೆಯನ್ನು ನಮೂದಿಸಿದ ನಂತರ OTP ಸಂಖ್ಯೆಯನ್ನು ಕೇಳುತ್ತದೆ.

•ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಸಂಖ್ಯೆಯನ್ನು ಸಲ್ಲಿಸಿದ ನಂತರ, ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರಗಳನ್ನು ನಮೂದಿಸಿ.

•ಅಗತ್ಯ ದಾಖಲೆಗಳನ್ನು ಸಹ ಸಲ್ಲಿಸಿ. ನೀವು ಸಲ್ಲಿಸಿದ ಅರ್ಜಿಯನ್ನು ಒಮ್ಮೆ ಸಂಪೂರ್ಣವಾಗಿ ಓದಿ ಮತ್ತು ಎಲ್ಲಾ ದಾಖಲೆಗಳು ಮತ್ತು ಮಾಹಿತಿಯು ಸರಿಯಾಗಿದೆಯೇ ಎಂದು ಪರಿಶೀಲಿಸಿ.

•ಎಲ್ಲವೂ ಸರಿಯಾಗಿದ್ದರೆ ಅರ್ಜಿಯನ್ನು Submit ಮಾಡಿ. ನಂತರ ನೀವು ಸಲ್ಲಿಸಿದ ಅರ್ಜಿ ಮತ್ತು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ, ಸಂಬಂಧಿಸಿದ ಇಲಾಖೆಯು ನಿಮಗೆ ಆಯುಷ್ಮಾನ್ ಕಾರ್ಡ್ ಅನ್ನು ನೀಡುತ್ತದೆ. ಈ ಕಾರ್ಡ್ ಪಡೆದ ನಂತರ ನೀವು ಉಚಿತ ಚಿಕಿತ್ಸೆಗೆ ಅರ್ಹರಾಗುತ್ತೀರಿ.

Join Nadunudi News WhatsApp Group