Roopesh Shetty and Sudeep: ಬಿಗ್ ಬಾಸ್ ಗೆ ಬಂದರೆ ಕ್ಯಾರೆಕ್ಟಾರ್ ಹಾಳಾಗುತ್ತದೆ, ಸುದೀಪ್ ಬಳಿ ನೋವು ಹೇಳಿಕೊಂಡ ರೂಪೇಶ್ ಶೆಟ್ಟಿ.

Roopesh Shetty and Sudeep: ಕನ್ನಡ ಕಿರುತೆರೆಯ ಬಿಗ್ ಶೋ ಎಂದರೆ ಅದು ಬಿಗ್ ಬಾಸ್. ಬಿಗ್ ಬಾಸ್ ಸತತ 8 ಸೀಸನ್ ಗಳನ್ನೂ ಮುಗಿಸಿ ಇದೀಗ 9 ನೇ ಸೀಸನ್ ಅಲ್ಲಿ ಕೊನೆಯ ಹಂತದಲ್ಲಿಇದೆ.

ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Reality Show Bigg Boss) ಇದೀಗ ಕೊನೆಯ ಹಂತದಲ್ಲಿದೆ. ಶುಕ್ರವಾರ ಮತ್ತು ಶನಿವಾರದಂದು ಬಿಗ್ ಬಾಸ್ ಸೀಸನ್ 9 ನ ಗ್ರಾಂಡ್ ಫಿನಾಲೆ ನಡೆಯಲಿದೆ. ಈ ನಡುವೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಆಸೆಯನ್ನು ಕೇಳಿ ಈಡೇರಿಸಿದ್ದಾರೆ. ಬಿಗ್ ಬಾಸ್ ಸೀಸನ್ 9 ಗೆ ರೂಪೇಶ್ ಶೆಟ್ಟಿ ಬಂದಿದ್ದರು.

If you come to Bigg Boss, your character will be ruined, Rupesh Shetty told Sudeep that he was hurt.
Image Credit: timesofindia.indiatimes

ರೂಪೇಶ್ ಶೆಟ್ಟಿ ಮತ್ತು ಸಾನ್ಯಾ
ಬಿಗ್ ಬಾಸ್ ಸೀಸನ್ 9 ರಲ್ಲಿ ಸಾನ್ಯಾ ಹಾಗು ರೂಪೇಶ್ ಶೆಟ್ಟಿ (Sanya And Roopesh Shetty) ಪ್ರೇಮಪಕ್ಷಿಗಳಾಗಿದ್ದರು. ಈ ವಿಚಾರ ಇಡೀ ಕರ್ನಾಟಕ ಜನತೆಗೆ ತಿಳಿದಿರುವ ವಿಷಯ. ಸಾನ್ಯಾ ಎಲಿಮಿನೇಷನ್ ಆದ ಬಳಿಕ ರೂಪೇಶ್ ಸಾನ್ಯಾ ಅವರನ್ನು ತುಂಬಾ ಮಿಸ್ ಮಾಡಿಕೊಂಡಿದ್ದರು.

ಇದೀಗ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಹಂತಕ್ಕೆ ತಲುಪಿದ್ದಾರೆ. ರೂಪೇಶ್ ಮನೆಯಿಂದ ಹೊರಬಂದ ಮೇಲೆ ಸಾನ್ಯಾ ಅವರಿಗೆ ಏನು ಹೇಳುತ್ತಾರೆ ಎಂಬ ಮಾತನ್ನು ಬಿಚ್ಚಿಟ್ಟಿದ್ದಾರೆ.

Rupesh Shetty remembers people saying that his character will be ruined if he goes to the Bigg Boss house.
Image Credit: voot

ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಗೆ ಬರುತ್ತೇನೆ ಎಂದಾಗ ಒಂದಿಷ್ಟು ಮಂದಿ ನೆಗೆಟಿವ್ ಮಾತನ್ನು ಹೇಳಿದ್ದಾರಂತೆ. ಇದೀಗ ಬಿಗ್ ಬಾಸ್ ಸೀಸನ್ 9 ಫಿನಾಲೆ ಆರಂಭ ಆಗಿದೆ. ಕಿಚ್ಚ ಸುದೀಪ್ ಫಿನಾಲೆಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ರೂಪೇಶ್ ಶೆಟ್ಟಿ ಬಳಿ ಚರ್ಚೆ ಮಾಡಿದ್ದಾರೆ. ರೂಪೇಶ್ ಶೆಟ್ಟಿ (Roopesh Shetty) ಒಂದು ವಿಚಾರದ ಬಗ್ಗೆ ನಟ ಸುದೀಪ್ (Actor Sudeep) ಬಳಿ ಹೇಳಿಕೊಂಡಿದ್ದಾರೆ.

Join Nadunudi News WhatsApp Group

ಈ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ಬಿಗ್ ಬಾಸ್ ಅವಕಾಶ ಎಲ್ಲರಿಗೂ ಸಿಕ್ಕುವುದಿಲ್ಲ. ಕೆಲವರು ಈ ಅವಕಾಶ ಸಿಕ್ಕರೂ ಒಪ್ಪಿಕೊಳ್ಳುವುದಿಲ್ಲ. ಇನ್ನು ಈ ಅವಕಾಶದ ನಂತರ ಹಲವರು ಬಣ್ಣದ ಬದುಕಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈ ನಿರೀಕ್ಷೆಯಲ್ಲೇ ಅನೇಕರು ಬಿಗ್ ಬಾಸ್​​ಗೆ ಬರುತ್ತಾರೆ.

Rupesh Shetty worried that the character will be spoiled before coming to the Bigg Boss house
Image Credit: voot

ರೂಪೇಶ್ ಶೆಟ್ಟಿಗೆ ಬಿಗ್ ಬಾಸ್​​ಗೆ ಬರುತ್ತೇನೆ ಎಂದಾಗ ಒಂದಷ್ಟು ಮಂದಿ ಒಳ್ಳೆಯ ಮಾತನ್ನು ಹೇಳಿದರೆ, ಇನ್ನೂ ಕೆಲವರು ನೆಗೆಟಿವ್ ಮಾತನ್ನು ಹೇಳಿದ್ದರು.

ಸುದೀಪ್ ಜೊತೆ ಕೆಲವು ವಿಚಾರಗಳನ್ನು ಹಂಚಿಕೊಂಡ ರೂಪೇಶ್
ಬಿಗ್ ಬಾಸ್ ನಿಂದ ಕಾಲ್ ಬಂದಾಗ ರೂಪೇಶ್ ಶೆಟ್ಟಿ ಏನು ಮಾಡ್ತಾ ಇದ್ದೀರಿ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರೂಪೇಶ್ ಕರೆ ಬಂದಿದಾಗ ನಾನು ಮಂಗಳೂರಿನಲ್ಲಿ ಇದ್ದಿದ್ದೆ. ನನ್ನ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಇದ್ದಿದ್ದೆ. ಮೊದಲು ಇದು ಪ್ರ್ಯಾಂಕ್ ಅಂದುಕೊಂಡಿದ್ದೆ. ನಂತರ ಖಚಿತಪಡಿಸಿಕೊಂಡೆ. ಕೆಲವರಲ್ಲಿ ಈ ಬಗ್ಗೆ ಅಭಿಪ್ರಾಯ ಕೇಳಿದೆ.

ನನಗಿಂತ ಅವರು ಖುಷಿಪಟ್ಟರು. ನಂತರ ನೀವು ಸೆಲೆಕ್ಷನ್ ಅಂತ ಅಂದರು ಅಂತ ರೂಪೇಶ್ ಹೇಳಿದ್ದಾರೆ. ಕೆಲವರು ಈ ಶೋ ಬಗ್ಗೆ ನೆಗೆಟಿವ್ ಪ್ರತಿಕ್ರಿಯೆ ನೀಡಿದ್ದಾರೆ

ಇನ್ನು ಕೆಲವರು ಪಾಸಿಟಿವ್ ಆಗಿ ಮಾತನಾಡಿದ್ದಾರೆ. ಇನ್ನು ಕೆಲವರು ನನ್ನನ್ನು ಹೆದರಿಸಿದ್ದಾರೆ, ಆ ಶೋಗೆ ಹೋದರೆ ಕ್ಯಾರೆಕ್ಟರ್ ಹಾಳಾಗತ್ತೆ ಅಂತ ಹೆದರಿಸಿದ್ದಾರೆ. ನಾನು ಇಲ್ಲಿಗೆ ಬರದೆ ಇದ್ದಿದ್ದರೆ ಅದ್ಭುತ ಲೈಫ್ ಮಿಸ್ ಮಾಡಿಕೊಳ್ಳುತ್ತಿದ್ದೆ. ಸಂಬಂಧಗಳು ಅಂದರೆ ಏನು ಅಂತ ಅರ್ಥ ಮಾಡಿಸಿತು ಈ ಶೋ. ನಿಮ್ಮ ಬಾಯಿಂದ ನನ್ನ ಹೆಸರು ಕರೆಸಿಕೊಂಡೆ. ಇನ್ನೇನು ಬೇಕು ಎಂದು ಸಂತಸಪಟ್ಟರು ರೂಪೇಶ್ ಶೆಟ್ಟಿ.

Rupesh Shetty said that it was Bigg Boss who understood what the relatives meant
Image Credit: voot

Join Nadunudi News WhatsApp Group