Biometric Registration: ರಾಜ್ಯದ ಸರ್ಕಾರದ ಇನ್ನೊಂದು ನಿರ್ಧಾರ, ರೈತರು ತಕ್ಷಣ ಬೆರಳಚ್ಚು ಮಾಡಿಸಲಿದ್ದಾರೆ ಈ ಸೇವೆಗಳು ಲಭ್ಯವಿಲ್ಲ.

ಬೆಂಬಲ ಬೆಲೆ ಪ್ರಯೋಜನ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ, ರಾಜ್ಯ ಸರ್ಕಾರದ ಆದೇಶ.

Biometric Registration Mandatory: ರಾಜ್ಯ ಸರ್ಕಾರ ದೇಶದ ಬೆನ್ನೆಲುಬಾಗಿರುವ ರೈತರ ಏಳಿಗೆಗಾಗಿ ವಿವಿಧ ಯೋಜನೆಯನ್ನು ರೂಪಿಸುತ್ತಿದೆ. ಈಗಾಗಲೇ ರೈತರಿಗಾಗಿ ವಿವಿಧ ಯೋಜನೆಯನ್ನು ಕೂಡ ಅನುಷ್ಠಾನಗೊಳಿಸುತ್ತಿದೆ. ರಾಜ್ಯದ ರೈತರು ಪ್ರತಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಇನ್ನು ಈ ಬಾರಿ ಮಳೆಯ ಕ್ರೆಯಿಂದಾಗಿ ರೈತರು ಬೆಲೆ ಹಾನಿಯಿಂದಾಗಿ ಭಾರಿ ನಷ್ಟಕ್ಕೆ ತುತ್ತಾಗಿದ್ದಾರೆ ಎನ್ನುವುದು ಎಲ್ಲರ ಗಮನಕ್ಕೆ ಬಂದಿರಬಹುದು. ಈ ನಿಟ್ಟಿನಲ್ಲಿ ಸರ್ಕಾರ ಬರ ಪರಿಹಾರ ಕಾರ್ಯವನ್ನು ಕೂಡ ಕೈಗೊಂಡಿದೆ. ಸದ್ಯ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದೆ ಈ ಮಹತ್ವದ ಯೋಜನೆಯಲ್ಲಿ ಪ್ರಮುಖವಾದ ಬದಲಾವಣೆಯನ್ನು ತರಲು ಮುಂದಾಗಿದೆ.

Biometric Registration Mandatory
Image Credit: India Today

ರೈತರಿಗಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆ
ರೈತರಿಗೆ ಉಂಟಾಗುವ ಮಾರಾಟ ಯಾತನೆಯನ್ನು ಸರಿಪಡಿಸುವುದು ಮತ್ತು ಸಾರ್ವಜನಿಕ ವಿತರಣೆಗಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೈತರಿಗಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಪರಿಚಯಿಸಿದೆ.

ಇದೊಂದು ಕನಿಷ್ಠ ಬೆಂಬಲ ಬೆಲೆಗಳು ಸರ್ಕಾರದಿಂದ ಕೃಷಿ ಉತ್ಪನ್ನಗಳಿಗೆ ನೀಡುವ ಖಾತರಿಯ ಬೆಲೆಯಾಗಿದೆ. ಇತ್ತೀಚೆಗಂತೂ ಯಾರದ್ದು ಪಹಣಿಯಲ್ಲಿ (RTC ) ನಕಲಿ FID ಸ್ರಷ್ಟಿಸಿ ವಂಚನೆ ನಡೆಯುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಸದ್ಯ ರಾಜ್ಯ ಸರ್ಕಾರ ಈ ವಂಚನೆ ತಡೆಗೆ ಕ್ರಮ ಕೈಗೊಂಡಿದೆ. ಬೆಂಬಲ ಬೆಲೆ ಯೋಜನೆಯ ಪ್ರಯೋಜನ ಪಡೆಯಲು ರೈತರು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

Minimum Support Price
Image Credit: Bignews

ಬೆಂಬಲ ಬೆಲೆ ಪ್ರಯೋಜನ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ
ಮುಕ್ತ ಮಾರುಕಟ್ಟೆಯಲ್ಲಿ ಕೆಲವು ಆಹಾರ ಧಾನ್ಯಗಳ ಬೆಲೆ ಬೆಂಬಲ ಬೆಲೆ ಯೋಜನೆಯ ಬೆಲೆಗಿಂತ ಕಡಿಮೆ ಇದೆ. ಇದರಿಂದ ನಕಲಿ FRUITS IT ಸೃಷ್ಟಿಸಿ ಅಮಾಯಕ ರೈತರ ಯೋಜನೆಗಳನ್ನು ಬಳಸಿಕೊಂಡು ಕೆಲ ವರ್ತಕರು ಹಾಗೂ ದೊಡ್ಡ ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ.

Join Nadunudi News WhatsApp Group

ಈ ನಿಟ್ಟಿನಲ್ಲಿ ರೈತರು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸುವಾಗ Biometric ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಿಗೆ ಆಹಾರ ಧಾನ್ಯಗಳನ್ನು ಮಾರಾಟ ಮಾಡಲು ಭೂಮಾಲೀಕರು ಖುದ್ದಾಗಿ ಹಾಜರಾಗಿ ಬಯೋಮೆಟ್ರಿಕ್ ನೀಡುವುದು ಮತ್ತು ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.

Join Nadunudi News WhatsApp Group