Gram Panchayat: ಜುಲೈ 1 ಗ್ರಾಮ ಪಂಚಾಯತಿಯಲ್ಲೇ ಸಿಗಲಿದೆ ಈ ಎಲ್ಲಾ ದಾಖಲೆಗಳು, ಹೊಸ ಯೋಜನೆ ಜಾರಿ

ಇನ್ಮುಂದೆ ಗ್ರಾಮ ಪಂಚಾಯತಿಯಲ್ಲೇ ಸಿಗಲಿದೆ ಈ ಎಲ್ಲಾ ದಾಖಲೆಗಳು

Birth And Death Certificate Available In Grama Panchayath: ಸಾಮಾನ್ಯವಾಗಿ ಎಲ್ಲರಿಗು ಜನನ ಮರಣ ನೋಂದಣಿಯ (Birth And Death Registration) ವಿವರವನ್ನು ಹೊಂದಿರಬೇಕು. ಪ್ರತಿಯೊಬ್ಬರ ಜನನ ಮತ್ತು ಮರಣ ನೊಂದಣಿ ಇರಬೇಕು. ಇನ್ನು ದೇಶದಲ್ಲಿ ಜನನ ಮತ್ತು ಮರಣ ನೋಂದಣಿಗೆ ವಿವಿಧ ನಿಯಮಗಳನ್ನು ಅಳವಡಿಸಲಾಗಿದೆ.

ಕೆಲವು ಮುಖ್ಯ ಇಲಾಖೆಯಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದೀಗ ಜನನ ಮತ್ತು ಮರಣ ಪ್ರಮಾಣಪತ್ರದ ನಿಯಮದಲ್ಲಿ ಸರ್ಕಾರ ಬಾರಿ ಬದಲಾವಣೆಯನ್ನು ಜಾರಿಗೊಳಿಸಿದೆ. ಹೌದು ರಾಜ್ಯದ ಗ್ರಾಮೀಣ ಜನತೆಗೆ ಜನನ ಮತ್ತು ಮರಣ ಪ್ರಮಾಣಪತ್ರ ಪಡೆದುಕೊಳ್ಳುವಲ್ಲಿ ಸರ್ಕಾರ ಹೊಸ ಸೌಲಭ್ಯವನ್ನು ಒದಗಿಸಿದೆ. ಇದರ ಬಗ್ಗೆ ನಾವೀಗ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

Birth And Death Certificate
Image Credit: Vijaykarnataka

ಜುಲೈ 1 ರಿಂದ ಗ್ರಾಮ ಪಂಚಾಯಿತಿಯಲ್ಲೇ ಜನನ, ಮರಣ ಪ್ರಮಾಣ ಪತ್ರ ಲಭ್ಯ
ಈ ಹಿಂದೆ ಜನರು ಜನರು ಜನನ ಹಾಗೂ ಮರಣ ಪ್ರಮಾಣ ಪತ್ರವನ್ನು ಪಡೆಯಲು ದೂರ ಇರುವ ಕಚೇರಿಗಳಿಗೆ ಭೇಟಿ ನೀಡಬೇಕಿತ್ತು. ಕೆಲವೊಂದು ಇಲಾಖೆ ಮಾತ್ರ ಜನನ ಮರಣ ಪ್ರಮಾಪತ್ರವನ್ನು ನೀಡುತ್ತಿತ್ತು. ಆದರೆ ಇನ್ನುಮುಂದೆ ಗ್ರಾಮ ಪಂಚಾಯತ್ ಗಳಲ್ಲಿ ಕೂಡ ಜನನ ಮತ್ತು ಮರಣ ಪ್ರಮಾಣಪತ್ರ ಲಭ್ಯವಾಗಲಿದೆ. ಹೌದು ಜುಲೈ 1 ರಿಂದ ಗ್ರಾಮ ಪಂಚಾಯಿತಿಯಲ್ಲೇ ಜನನ, ಮರಣ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು. ಈ ಮೂಲಕ ರಾಜ್ಯದ ಜನರಿಗೆ ಸಿಹಿ ಸುದ್ದಿ ಲಭಿಸಿದೆ.

ಸದ್ಯ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳವರೆಗಿನ ಪ್ರಕರಣಗಳಲ್ಲಿ ನೋಂದಾಯಿಸಲು ಪಂಚಾಯಿತಿ ಕಾರ್ಯದರ್ಶಿ ಹಾಗೂ 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಹಾಗೆ ಜನನ, ಮರಣ ನಡೆದ 21 ದಿನಗಳ ಒಳಗೆ ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರ ವಿತರಿಸಬೇಕು. 21 ರಿಂದ 30 ದಿನಗಳ ನಡುವೆ ನೋಂದಾಯಿಸಿದಲ್ಲಿ 2 ರೂಪಾಯಿ ಶುಲ್ಕ, 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ 5 ರೂ. ಶುಲ್ಕ, ಇನ್ನು ಒಂದು ವರ್ಷದ ಬಳಿಕ ನೋಂದಣಿ ಮಾಡಿದರೆ 10 ರೂಪಾಯಿ ವಿಳಂಬ ಶುಲ್ಕ ಪಡೆದು ನೋಂದಣಿ ಮಾಡಿಸಬೇಕಾಗುತ್ತದೆ. ಹೆಚನ್ ವಿವರಕ್ಕಾಗಿ ಇ-ಜನ್ಮ ಸಹಾಯವಾಣಿ ಸಂಖ್ಯೆ 1800 425 6578 ಗೆ ಸಂಪರ್ಕಿಸಬಹುದಾಗಿದೆ.

Join Nadunudi News WhatsApp Group

Birth And Death Certificate Available In Grama Panchayath
Image Credit: Kannadanewsnow

Join Nadunudi News WhatsApp Group