Delay Fee Hike: ರಾಜ್ಯದ ಜನತೆಗೆ ಇನ್ನೊಂದು ಬೆಲೆ ಏರಿಕೆಯ ಬಿಸಿ, ಈ ದಾಖಲೆ ಪಡೆಯಲು ಕೊಡಬೇಕು ಹೆಚ್ಚು ಶುಲ್ಕ.

ಜನ ಮರಣ ಪ್ರಮಾಣಪತ್ರದ ಕುರಿತಂತೆ ಸರ್ಕಾರದ ಇನ್ನೊಂದು ರೂಲ್ಸ್.

Birth And Death Registration Delay Fee Hike: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರ ಆರಂಭಗೊಂಡ ಸಮಯದಿಂದ ಅನೇಕ ಯೋಜನೆಗಳು ರೂಪುಗೊಳ್ಳುವುದರ ಜೊತೆಗೆ ಹೆಚ್ಚಿನ ನಿಯಮಗಳು ಕೂಡ ಬದಲಾಗುತ್ತಿದೆ. ಸದ್ಯ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಬಾರಿ ನಷ್ಟವನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ.

ಹೀಗಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದೆಗೆಟ್ಟಿರುವ ಸಮಯದಲ್ಲಿ ರಾಜ್ಯ ಸರ್ಕಾರ ಒಂದೊಂದೇ ವಸ್ತುಗಳ ಬೆಳೆಯನ್ನು ಏರಿಸುತ್ತಿದೆ. ಈಗಾಗಲೇ ಹಣದುಬ್ಬರದಿಂದಾಗಿ ಆರ್ಥಿಕ ಹೊರೆ ಹೆಚ್ಚಿರುವ ರಾಜ್ಯದ ಜನತೆಗೆ ಮತ್ತೊಂದು ಬೇಸರದ ಸುದ್ದಿ ಹೊರಬಿದ್ದಿದೆ.

Birth And Death Registration
Image Credit: Onlinesambalpur

ರಾಜ್ಯದ ಜನತೆಗೆ ಇನ್ನೊಂದು ಬೆಲೆ ಏರಿಕೆಯ ಬಿಸಿ
ಸಾಮಾನ್ಯವಾಗಿ ಎಲ್ಲರು ಜನನ ಮರಣ ನೋಂದಣಿಯ (Birth And Death Registration) ವಿವರವನ್ನು ಹೊಂದಿರಬೇಕು. ಪ್ರತಿಯೊಬ್ಬರು ಜನನ ಮತ್ತು ಮರಣ ನೊಂದಣಿ ಹೊಂದುವುದು ಕಡ್ಡಾಯವಾಗಿದೆ. ಇನ್ನು ದೇಶದಲ್ಲಿ ಜನನ ಮತ್ತು ಮರಣ ನೋಂದಣಿಗೆ ವಿವಿಧ ನಿಯಮಗಳನ್ನು ಅಳವಡಿಸಲಾಗಿದೆ. ಕೆಲವು ಮುಖ್ಯ ಇಲಾಖೆಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದೀಗ ಜನನ ಮತ್ತು ಮರಣ ಪ್ರಮಾಣಪತ್ರದ ನಿಯಮದಲ್ಲಿ ಸರ್ಕಾರ ಬಾರಿ ಬದಲಾವಣೆಯನ್ನು ಜಾರಿಗೊಳಿಸಿದೆ. ಈ ಮೂಲಕ ಮೊದಲೇ ಬೆಲೆ ಏರಿಕೆಯ ಬಿಸಿಯಲ್ಲಿ ಬೇಯುತ್ತಿರುವ ಜನತೆಗೆ ಮತ್ತೊಂದು ಶಾಕ್ ನೀಡಿದೆ.

ಈ ದಾಖಲೆ ಪಡೆಯಲು ಕೊಡಬೇಕು ಹೆಚ್ಚು ಶುಲ್ಕ
ಸದ್ಯ ರಾಜ್ಯ ಸರ್ಕಾರ ಜನನ ಮರಣ ನೋಂದಣಿ ವಿಳಂಬ ಶುಲ್ಕ ಹೆಚ್ಚಿಸುವಂತೆ ಆದೇಶಿಸಿದೆ. ಈ ಕುರಿತು ಜನನ ಮರಣ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಪ್ರಭಾರ ನಿರ್ದೇಶಕರು ಎಲ್ಲ ಜಿಲ್ಲಾಧಿಕಾರಿಗಳು, ಜನನ ಮರಣ ನೋಂದಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಭಾರತ ಸರ್ಕಾರದ ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು 2023 ತಿದ್ದುಪಡಿ ಮಾಡಿದಂತೆ ಕರ್ನಾಟಕ ಜನನ, ಮರಣ ನೋಂದಣಿ ನಿಯಮ 9 ಕ್ಕೆ ತಿದ್ದುಪಡಿ ಮಾಡಿ, ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು 2023 ರನ್ನು ಉಲ್ಲೇಖ ಅಧಿಸೂಚನೆಯಲ್ಲಿ ಹೊರಡಿಸಲಾಗಿದೆ ಎಂದು ಪಾತ್ರದಲ್ಲಿ ಬರೆಯಲಾಗಿದೆ.

Birth And Death Registration Fee Hike
Image Credit: Tribuneindia

ಜನನ ಮರಣ ನೋಂದಣಿ ವಿಳಂಬ ಶುಲ್ಕದ ವಿವರ ಇಲ್ಲಿದೆ
*ಜನನ, ಮರಣದ 21 ದಿನಗಳ ನಂತರ ಮತ್ತು 30 ದಿನಗಳ ಒಳಗೆ ನೋಂದಣಿಗಾಗಿ ವಿಳಂಬ ನೋಂದಣಿ ಶುಲ್ಕವನ್ನು ರೂ. 2 ರಿಂದ ರೂ. 100 ಕ್ಕೆ ಹೆಚ್ಚಿಸಲಾಗಿದೆ.

Join Nadunudi News WhatsApp Group

*ಜನನ, ಮರಣದ 30 ದಿನಗಳ ನಂತರ ಮತ್ತು 1 ವರ್ಷದೊಳಗೆ ನೋಂದಣಿಗೆ ವಿಳಂಬ ನೋಂದಣಿ ಶುಲ್ಕವನ್ನು ರೂ. 5 ರಿಂದ ರೂ. 200 ಕ್ಕೆ ಹೆಚ್ಚಿಸಲಾಗಿದೆ.

*ಜನನ, ಮರಣದ ನಂತರದ 1 ವರ್ಷದ ವಿಳಂಬ ನೋಂದಣಿ ಶುಲ್ಕವನ್ನು ಈಗಿರುವ ರೂ. 10 ರಿಂದ ರೂ.  500 ಕ್ಕೆ ಪರಿಷ್ಕರಿಸಲಾಗಿದೆ.

Join Nadunudi News WhatsApp Group