Ration Update: BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಪಡಿತರ ನಿಯಮ ಬದಲಾವಣೆ

BPL ,ಅಂತ್ಯೋದಯ ಕಾರ್ಡ್ ಇರುವವರಿಗೆ ಗುಡ್ ನ್ಯೂಸ್

Ration Card New Update: ರಾಜ್ಯ ಮತ್ತು ಕೇಂದ್ರ ಸರ್ಕಾರ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಆಗಾಗ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತದೆ. ಪ್ರಸ್ತುತ ದೇಶದಲ್ಲಿ BPL Ration Card ಹೊಂದಿರುವವರು ಅನೇಕ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

ಇನ್ನು ಸರ್ಕಾರ ಎಲ್ಲ ಅರ್ಹರು ಕೂಡ ಉಚಿತ ಪಡಿತರ ಲಾಭವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಹಾಗೂ ಪಡಿತರ ಚೀಟಿ ತಿದ್ದುಪಡಿಗೆ ಆಗಾಗ ಅವಕಾಶವನ್ನು ನೀಡುತ್ತಿರುತ್ತದೆ. ಇದೀಗ BPL ,ಅಂತ್ಯೋದಯ ಸೇರಿ ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪಡಿತರ ಚೀಟಿದಾರರು ಇನ್ನುಮುಂದೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

BPL Card and Antyodaya card
Image Credit: Newstrack

BPL ,ಅಂತ್ಯೋದಯ ಕಾರ್ಡ್ ಇರುವವರಿಗೆ ಗುಡ್ ನ್ಯೂಸ್
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಮೇ ತಿಂಗಳಿಗೆ ಅನ್ವಯವಾಗುವಂತೆ ಪಡಿತರ ಧಾನ್ಯಗಳನ್ನು ವಿತರಿಸಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್‌ ಗೆ 35 ಕೆಜಿ ಅಕ್ಕಿ, ಆದ್ಯತಾ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಎಪಿಎಲ್ ಏಕಸದಸ್ಯ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಮತ್ತು ಎರಡು ಮತ್ತು ಅದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವವರಿಗೆ 10 ಕೆಜಿ ಅಕ್ಕಿಯನ್ನು ಕೆಜಿಗೆ 15 ರೂ.ಗೆ ವಿತರಿಸಲಾಗುವುದು. ಪಡಿತರ ಚೀಟಿದಾರರಿಗೆ ಸರ್ಕಾರದ ಖಾತ್ರಿ ಯೋಜನೆಯಡಿ 5 ಕೆಜಿ ಅಕ್ಕಿಯನ್ನು ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದ್ದು, ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದು ಎಂದು ತಹಶೀಲ್ದಾರ್ ತಿಳಿಸಿದರು. ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರೂ ಕೂಡ ಯೋಜನೆಯ ಲಾಭವನ್ನು ಶೀಘ್ರದಲ್ಲೇ ಪಡೆಯಲಿದ್ದಾರೆ.

Ration Card New Update
Image Credit: India Todayne

Join Nadunudi News WhatsApp Group

Join Nadunudi News WhatsApp Group