BPL Card Update: ಅತ್ತೆಗೊಂದು, ಸೊಸೆಗೊಂದು ಪ್ರತ್ಯೇಕ ರೇಷನ್ ಕಾರ್ಡ್, ನಿಯಮ ಬದಲಿಸಿದ ರಾಜ್ಯ ಸರ್ಕಾರ.

ಒಂದೇ ಕುಟುಂಬದಲ್ಲಿ ಎರಡು ರೇಷನ್ ಕಾರ್ಡ್ ಮಾಡಿಸಿಕೊಳ್ಳುವವರಿಗೆ ಹೊಸ ನಿಯಮ.

Ration Card Latest Update: ಸದ್ಯ ರಾಜ್ಯದಲ್ಲಿ Gruha Lakshmi ಯೋಜನೆಯ ಬಗ್ಗೆ ಚರ್ಚೆ ಹೆಚ್ಚುತ್ತಿದೆ ಎನ್ನಬಹುದು. ಅರ್ಹ ಫಲಾನುಭವಿಗಳು ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ಜನರಿಗೆ ತಮ್ಮ ಮುಖ್ಯ ದಾಖಲೆಗಳನ್ನು ಸರಿ ಪಡಿಸಿಕೊಳ್ಳುವಂತೆ ಪದೇ ಪದೇ ಹೇಳುತ್ತಿದೆ.

ಇನ್ನು ಒಂದೆಡೆ ಫಲಾನುಭವಿಗಳಿಗೆ ಇನ್ನು ಹಣ ಜಮಾ ಆಗದೆ ಇರುವುದು ತೊಂದರೆಯಾದರೆ, ಇನ್ನೊಂದು ಮನೆಯ ಯಜಮಾನಿಯ ಬಗ್ಗೆ ಗೊಂದಲ ಕುಟುಂಬದಲ್ಲಿ ಹೆಚ್ಚುತ್ತಿದೆ. ಸದ್ಯ ರಾಜ್ಯದಲ್ಲಿ ಅತ್ತೆಗೊಂದು, ಸೊಸೆಗೊಂದು ರೇಷನ್ ಕಾರ್ಡ್ ಆರಂಭವಾಗುವ ಸಾಧ್ಯತೆ ಇದೆ.

Ration Card Latest
Image Credit: Kannadanews

ಒಂದೇ ಕುಟುಂಬದಲ್ಲಿ ಇಬ್ಬರು ಯಜಮಾನಿಯರ ಸೃಷ್ಟಿ
ಸದ್ಯ ಕಾಂಗ್ರೆಸ್ ಗ್ಯಾರಂಟಿ ಯೋಜನೆಯಲ್ಲಿ ಒಂದಾದ Gruha Lakshmi ಯೋಜನೆ ಕುಟುಂಬದ ಮನೆ ಯಜಮಾನಿಗೆ ಸೀಮಿತ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ಹೀಗಿರುವಾಗ ಸಾಮಾನ್ಯವಾಗಿ ಹೆಚ್ಚಿನ ಮನೆಯಲ್ಲಿ ಅತ್ತೆ ಮತ್ತು ಸೊಸೆ ಇದ್ದೆ ಇರುತ್ತಾರೆ. ಹೀಗಾಗಿ ಗೃಹ ಲಕ್ಷ್ಮಿ ಹಣ ಪಡೆಯುವಲ್ಲಿ ಅತ್ತೆ ಮತ್ತು ಸೊಸೆಯ ನಡುವೆ ಚಾರ್ಚೆ ಉಂಟಾಗುವುದು ಸಾಮಾನ್ಯ. ಹೀಗಾಗಿ ಸರ್ಕಾರ ರೇಷನ್ ಕಾರ್ಡ್ ನಲ್ಲಿ ಯಾರು ಮುಕ್ಯಸ್ತರಾಗಿದ್ದಾರೋ ಅವರಿಗೆ ಮಾತ್ರ ಗೃಹ ಲಕ್ಷ್ಮಿ 2000 ಹಣ ಜಮಾ ಆಗುತ್ತದೆ ಎಂದು ಆದೇಶ ಹೊರಡಿಸಿತು.

ಅತ್ತೆಗೊಂದು, ಸೊಸೆಗೊಂದು ಪ್ರತ್ಯೇಕ ರೇಷನ್ ಕಾರ್ಡ್
ಇನ್ನು ಸಾಮಾನ್ಯವಾಗಿ ಅತ್ತೆಯೇ ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥೆ ಆಗಿರುವುದು ಸಹಜ. ಹೀಗಾಗಿ ಸೊಸೆಯಂದಿರು ಗೃಹ ಲಕ್ಷ್ಮಿ ಯೋಜನೆಯ 2000 ರೂ. ಗಾಗಿ ಕಾದಾಡುವಂತಾಗಿದೆ. ಇನ್ನು ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಈಗಾಗಲೇ ಅವಕಾಶವನ್ನು ಮಾಡಿಕೊಟ್ಟಿದೆ.

Ration Card Latest Update
Image Credit: Kannadanews

ಈ ತಿದ್ದುಪಡಿಯ ಸಮಯದಲ್ಲಿ ಅತ್ತೆಗೊಂದು, ಸೊಸೆಗೊಂದು ಪ್ರತ್ಯೇಕ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಒಂದೇ ಕುಟುಂಬದಲ್ಲಿ ಎರಡು ರೇಷನ್ ಕಾರ್ಡ್ ಮಾಡಿಸಿಕೊಂಡು ಇಬ್ಬರು ಯಜಮಾನಿಯರನ್ನು ಮಾಡುವುದರ ಮೂಲಕ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಅತ್ತೆ ಸೊಸೆ ಸಿದ್ದರಾಗಿದ್ದಾರೆ. ಹೀಗಾಗಿ ಪಡಿತರ ತಿದ್ದುಪಡಿಯಲ್ಲಿ ಹೆಚ್ಚಿನ ಗಮನ ವಹಿಸಬೇಕು ಎಂದು ಸರ್ಕಾರ ಇಲಾಖೆಗೆ ಸೂಚನೆ ನೀಡಿದೆ.

Join Nadunudi News WhatsApp Group

November 1 ರಿಂದ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ
ಸರ್ಕಾರ ಈ ಹಿಂದೆ October 19 ರಿಂದ 21 ರ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿತ್ತು. ಆದರೆ ಸೈಬರ್ ಸಮಸ್ಯೆಯಿಂದಾಗಿ ಬಹುತೇಕ ಜನರು ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಜನತೆಗೆ ಮತ್ತೊಮ್ಮೆ ಅವಕಾಶವನ್ನು ನೀಡಿದೆ.

Ration Card Latest Update
Image Credit: News 18

November 1 ರಿಂದ ಜನರು ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಿಕೊಳ್ಳಬಹುದು. ಫಲಾನುಭವಿಗಳ ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ, ಕಾರ್ಡ್ ನಲ್ಲಿ ಸದಸ್ಯರ ಹೆಸರನ್ನು ರದ್ದುಗೊಳಿಸುವುದು, ಕಾರ್ಡ್ ನಲ್ಲಿ ಸದಸ್ಯರ ಹೆಸರು ಸೇರ್ಪಡೆ, ಕಾರ್ಡ್ ನಲ್ಲಿನ ಮಹಿಳಾ ಮುಖ್ಯಸ್ಥರ ಹೆಸರು ಬದಲಾವಣೆಗೆ ಸರ್ಕಾರ ಮತ್ತೊಮ್ಮೆ ಅನುಮತಿ ನೀಡಿದೆ.

Join Nadunudi News WhatsApp Group