ಮೂರೂ ತಿಂಗಳ ಬಸುರಿ ಮತ್ತೆ ಗರ್ಭಿಣಿ, ಗರ್ಭಿಣಿ ಮತ್ತೆ ಬಸುರಿಯಾಗಿ ಮಕ್ಕಳಿಗೆ ಜನ್ಮ ನೀಡಿದ್ದು ಹೇಗೆ ಗೊತ್ತಾ.

ಈ ಕಲಿಯುಗದಲ್ಲಿ ಏನು ಬೇಕಾದರೂ ನಡೆಯಬಹುದು ಅನ್ನುವುದಕ್ಕೆ ನಾವು ಹಲವು ಉದಾಹರಣೆಯನ್ನ ನೋಡಿದ್ದೇವೆ ಎಂದು ಹೇಳಬಹುದು. ಹೌದು ಈ ಭೂಮಿಯ ಮೇಲೆ ನಡೆಯುವ ಕೆಲವು ಘಟನೆಗಳು ಮನುಕುಲಕ್ಕೆ ದೊಡ್ಡ ಶಾಕ್ ನೀಡುತ್ತದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ನಿಮಗೆಲ್ಲ ತಿಳಿದಿರುವ ಒಂದು ಮಗಿವಿನ ಜನ್ಮ ನೀಡಲು ಅದೂ ತಾಯಿಯಿಂದ ಮಾತ್ರ ಸದ್ಯ. ಇನ್ನು ಒಂದು ಹೆಣ್ಣು ಗರ್ಭ ಧರಿಸಿದರೆ ಆಕೆ ಇನ್ನೊಮ್ಮೆ ಗರ್ಭವತಿ ಆಗುವುದು ಹೆರಿಗೆಯ ನಂತರವೇ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಇನ್ನು ಈಗ ಬ್ರಿಟನ್ ನಲ್ಲಿ ಜನರಿಗೆ ಶಾಕ್ ಆಗುವಂತಹ ಘಟನೆಯೊಂದು ನಡೆದಿದ್ದು ಈ ಘಟನೆಯನ್ನ ಕೇಳಿ ಇಡೀ ವಿಶ್ವವೇ ಶಾಕ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ಬ್ರಿಟನ್ ನಲ್ಲಿ ಒಬ್ಬ ಮಹಿಳೆ ಗರ್ಭಿಣಿ ಆಗಿರುವ ಸಮಯದಲ್ಲೇ ಇನ್ನೊಮ್ಮೆ ಗರ್ಭಿಣಿಯಾಗಿದ್ದು ಇದನ್ನ ಕೇಳಿ ಇಡೀ ವೈದ್ಯಲೋಕವೇ ಶಾಕ್ ಆಗಿದೆ. ಹಾಗಾದರೆ ನಡೆದ ಘಟನೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಇಲ್ಲೊಬ್ಬ ಮಹಿಳೆ ಗರ್ಭಿಣಿಯಾಗಿ ಮೂರೂ ತಿಂಗಳು ಕಳೆದ ನಂತರ ವೈದ್ಯರು ಆಕೆಯ ಹೊಟ್ಟೆಯನ್ನ ಸ್ಕ್ಯಾನ್ ಮಾಡಿದ ಸಮಯದಲ್ಲಿ ಆಕೆಯ ಹೊಟ್ಟೆಯಲ್ಲಿ ಇನ್ನೊಂದು ಭ್ರೂಣ ಇರುವುದು ಪತ್ತೆಯಾಗಿದೆ. ಇನ್ನು ಹೊಟ್ಟೆಯಲ್ಲಿ ಇರುವ ಎರಡು ಭ್ರೂಣಗಳ ನಡುವೆ ಎರಡು ವಾರಗಳ ಅಂತರ ಇದ್ದಿದ್ದು ಇದನ್ನ ನೋಡಿ ವೈದ್ಯ ಲೋಕವೇ ಶಾಕ್ ಆಗಿತ್ತು ಮತ್ತು ಇದು ವೈದ್ಯಲೋಕಕ್ಕೆ ದೊಡ್ಡ ಪ್ರಶ್ನೆ ಕೊಡ ಆಗಿತ್ತು.

Britan pragnent

ಇನ್ನು ಈಕೆಯನ್ನ ಪರೀಕ್ಷೆ ಮಾಡಿದ ವೈದ್ಯರು ಮಗು ಬದುಕುವುದು ಅಸಾಧ್ಯ ಎಂದು ಹೇಳಿದ್ದರು ಮತ್ತು ವೈದ್ಯರ ಈ ಮಾತು ಆಕೆಗೆ ಗಾಬರಿಯನ್ನ ಕೂಡ ಉಂಟುಮಾಡಿತ್ತು, ಇನ್ನು ವಿಶೇಷ ಏನು ಅಂದರೆ ಈಕೆ ಎರಡು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ್ದು ತಾಯಿ ಮತ್ತು ಮಕ್ಕಳು ಇಬ್ಬರು ಆರೋಗ್ಯವಾಗಿದ್ದಾರೆ ಬ್ರಿಟನ್ ನ ರೆಬೆಕ್ಕಾ ರಾಬರ್ಟ್ಸ್ ಮತ್ತು ರಿಸ್ ವಿವರ್ ದಂಪತಿಗಳಿಗೆ ಹಲವು ವರ್ಷಗಳ ಕಾಲ ಸಂತಾನ ಭಾಗ್ಯ ಇರಲಿಲ್ಲ ಮತ್ತು ವೈದ್ಯರು ಚಿಕೆತ್ಸೆಯ ನಂತರ ಈಕೆ ಗರ್ಭವತಿಯಾಗಿದ್ದಳು ಮತ್ತು ಈಕೆಯನ್ನ ಸ್ಕ್ಯಾನ್ ಮಾಡಿದ ಸಮಯದಲ್ಲಿ ಹೊಟ್ಟೆಯಲ್ಲಿ ಎರಡು ಭ್ರೂಣಗಳು ಇದ್ದು ಎರಡು ಭ್ರೂಣಗಳ ನಡುವೆ ಮೂರೂ ವಾರಗಳ ಅಂತರ ಇದೆ ಎಂದು ಹೇಳಿದ್ದಾರೆ.

ಇನ್ನು ಈಕೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಹೆಣ್ಣು ಮಗುವನ್ನ 95 ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ ಇಡಲಾಗಿದೆ. ಇನ್ನು ಗರ್ಭಿಣಿಯಾಗಿರುವಾಗಲೇ ಇನ್ನೊಂದು ಮಗುವಿಗೆ ಗರ್ಭ ಧರಿಸುವುದು ಸೂಪರ್ ಫೆಟೇಷನ್ ಎಂದು ಹೇಳಲಾಗುತ್ತದೆ, ಎರಡು ಬಾರಿ ಅಂಡಾಶಯದಿಂದ ಅಂಡಾಣು ಬಿಡುಗಡೆಯಾದಾಗ ಈರೀತಿ ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Britan pragnent

Join Nadunudi News WhatsApp Group