BSNL Monthly Plan: 30 ದಿನದ ಅತೀ ಅಗ್ಗದ ರಿಚಾರ್ಜ್ ಪ್ಲ್ಯಾನ್, BSNL ಗ್ರಾಹಕರಿಗೆ ಬಂಪರ್ ಆಫರ್

BSNL ಗ್ರಾಹಕರಿಗೆ 30 ದಿನದ ಅತೀ ಅಗ್ಗದ ರಿಚಾರ್ಜ್ ಪ್ಲ್ಯಾನ್

BSNL New Recharge Plan For 30 Days: ಸದ್ಯ BSNL ಅತಿ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ಏರುತ್ತಿರುವ ಬೆಲೆಗಳ ಮಧ್ಯೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ಬಜೆಟ್ ಸ್ನೇಹಿ ಯೋಜನೆಗಳೊಂದಿಗೆ ಪರಿಹಾರ ನೀಡಲು ಮುಂದಾಗಿದೆ.

ಜಿಯೋ ಮತ್ತು ಏರ್ಟೆಲ್ ರಿಚಾರ್ಜ್ ದರಗಳು ಹೆಚ್ಚಾದ ಬೆನ್ನಲ್ಲೇ BSNL ತನ್ನ ಗ್ರಾಹಕರಿಗಾಗಿ ಇನ್ನಷ್ಟು ಅಗ್ಗದ ರಿಚಾರ್ಜ್ ಪ್ಲಾನ್ ಗಳನ್ನೂ ಘೋಷಿಸುತ್ತಿವೆ. ಸದ್ಯ BSNL ತನ್ನ ಬಳಕೆದಾರರಿಗೆ ಅತಿ ಕಡಿಮೆ ಬೆಲೆಯಲ್ಲಿ 30 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. BSNL ಬಳಕೆದಾರರು ಈ ಎರಡು ಯೋಜನೆಗಳ ಲಾಭವನ್ನು ಪಡೆಯಬಹುದು.

BSNL New Recharge Plan For 30 Days
Image Credit: India TV

BSNL ಗ್ರಾಹಕರಿಗೆ ಬಂಪರ್ ಆಫರ್
ಅತ್ಯುತ್ತಮ ರೀಚಾರ್ಜ್ ಯೋಜನೆಗಳಲ್ಲಿ ಸದ್ಯ 108 ರೂ. ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ಈ ಯೋಜನೆಯು ಕಡಿಮೆ ವೆಚ್ಚದ ಯೋಜನೆಯನ್ನು ಹುಡುಕುತ್ತಿರುವ ಬಳಕೆದಾರರಿಗೆ ಬೆಸ್ಟ್ ಆಗಿದೆ ಹಾಗೆಯೆ ಈ ಯೋಜನೆಯು 28 ​​ದಿನಗಳವರೆಗೆ ಮಾನ್ಯವಾಗಿರುತ್ತದೆ. ಹೆಚ್ಚಿನ ಹೆಚ್ಚುವರಿ ಶುಲ್ಕಗಳ ಬಗ್ಗೆ ಚಿಂತಿಸದೆ ನೀವು ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ.

ಇದರಲ್ಲಿ ಅನಿಯಮಿತ ಕರೆಗಳನ್ನು ಸಹ ನೀಡಲಾಗುತ್ತದೆ. ಈ ರೀಚಾರ್ಜ್ ಯೋಜನೆಯು ಮುಂದಿನ 28 ದಿನಗಳವರೆಗೆ ದಿನಕ್ಕೆ 1GB ಇಂಟರ್ನೆಟ್ ಡೇಟಾವನ್ನು ಒಳಗೊಂಡಿರುತ್ತದೆ. ಡೇಟಾ ಖಾಲಿಯಾದ ನಂತರ, ಬಳಕೆದಾರರು 40kbps ಕಡಿಮೆ ವೇಗದಲ್ಲಿ ಬ್ರೌಸಿಂಗ್ ಅನ್ನು ಮುಂದುವರಿಸಬಹುದು. ನಿಮಗೆ ತಿಳಿದಿರಬೇಕಾದ ವಿಷಯವೆಂದರೆ ಇದು FRC (First Recharge Coupon) ಯೋಜನೆಯಾಗಿದೆ. ಅಂದರೆ ಹೊಸ ಸಂಖ್ಯೆಯೊಂದಿಗೆ ಮಾತ್ರ ಈ ಯೋಜನೆಯನ್ನು ಸಕ್ರಿಯಗೊಳಿಸಬಹುದು.

BSNL New Recharge Plan
Image Credit: Navbharattimes

30 ದಿನದ ಅತೀ ಅಗ್ಗದ ರಿಚಾರ್ಜ್ ಪ್ಲ್ಯಾನ್
ಇದೀಗ BSNL ತನ್ನ ಗ್ರಾಹಕರಿಗೆ ವಿಶೇಷ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ನೀವು BSNL ನ 199 ಪ್ರೀಪೈಡ್ ಯೋಜನೆ ಮೂಲಕ ಪ್ರತಿನಿತ್ಯ 2GB ಡೇಟಾ ಜೊತೆಗೆ ಅನಿಯಮಿತ ಕರೆ ಹಾಗೂ SMS ಸೌಲಭ್ಯವನ್ನು ಪಡೆಯಬಹುದು. BSNL ನ ಈ 199 ರೂ. ರಿಚಾರ್ಜ್ ಪ್ಲಾನ್ ನಿಮಗೆ 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ನೀವು 30 ದಿನಗಳವರೆಗೆ ಕೇವಲ 199 ರೂ. ಗಳಲ್ಲಿ ಅನಿಯಮಿತ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group

BSNL New Recharge Plan 2024
Image Credit: Delhibreakings

Join Nadunudi News WhatsApp Group