Old Pension: ಸರ್ಕಾರೀ ನೌಕರರಿಗೆ ಹೊಸ ಪಿಂಚಣಿ ನಿಯಮ, ನಿರ್ಮಲ ಸೀತಾರಾಮನ್ ಇನ್ನೊಂದು ಘೋಷಣೆ

ಕೇಂದ್ರ ಸರ್ಕಾರ ಹಳೆ ಪಿಂಚಣಿ ಜಾರಿಗೆ ಸ್ಪಂದಿಸುತ್ತ...?

Budget 2024 New Update: ಸದ್ಯ ದೇಶದಲ್ಲಿ July 23 ರಂದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವ್ರು 2024 ರ ಬಜೆಟ್ ಅನ್ನು ಘೋಷಿಸಿದ್ದಾರೆ. ಈ ಬಜೆಟ್ ನಲ್ಲಿ ನಿರ್ಮಲ ಸೀತಾರಾಮನ್ ಹಲವು ವಿಚಾರಗಳ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ.

ಇನ್ನು ಸರ್ಕಾರೀ ನೌಕರರು ಈ ಬಜೆಟ್ ನಲ್ಲಿ ಹಳೆಯ ಪಿಂಚಣಿ ವ್ಯವಸ್ಥೆಯ ಜಾರಿಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎನ್ನುವ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ನೌಕರರ ನಿರೀಕ್ಷೆಯಂತೆ ಬಜೆಟ್ ನಲ್ಲಿ ಹಳೆಯ ಪಿಂಚಣಿ ಜಾರಿಯ ಬಗ್ಗೆ ನಿರ್ಧರಿಸಲಾಗಿದೆ. ಅಷ್ಟಕ್ಕೂ, ಕೇಂದ್ರ ಸರ್ಕಾರ ಏನು ನಿರ್ಧಾರ ಕೈಗೊಂಡಿದೆ…? ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Budget 2024 New Update
Image Credit: Livemint

ಕೇಂದ್ರ ಸರ್ಕಾರ ಹಳೆ ಪಿಂಚಣಿ ಜಾರಿಗೆ ಸ್ಪಂದಿಸುತ್ತ…?
ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಕುರಿತು ದೀರ್ಘಕಾಲದ ವಿವಾದದ ನಡುವೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ದೊಡ್ಡ ಘೋಷಣೆ ಮಾಡಿದ್ದಾರೆ. ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಬೇಕೆಂದು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾಗ, ನಿರ್ಮಲಾ ಸೀತಾರಾಮನ್ ಅವರು ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಹೊಸ ಪಿಂಚಣಿ ಯೋಜನೆಯನ್ನು ಪರಿಶೀಲಿಸಲು 2024 ರ ಬಜೆಟ್‌ ನಲ್ಲಿ ಘೋಷಿಸಿದ್ದಾರೆ.

ಹೊಸ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದವನ್ನು ಪರಿಹರಿಸಲು ಸಮಿತಿಯನ್ನು ರಚಿಸಲಾಗುವುದು. ಎಲ್ಲಾ ಉದ್ಯೋಗಿಗಳ ಸಲ್ಲಿಕೆಯನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆಗಳನ್ನು ಮಾಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.

Old Pension Scheme Update
Image Credit: Moneycontrol

ಹೊಸ ಪಿಂಚಣಿ ಯೋಜನೆ ಜಾರಿಯ ಬಗ್ಗೆ ನಿರ್ಮಾಲಾ ಸೀತಾರಾಮನ್ ಹೇಳುವುದೇನು…?
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಹೂಡಿಕೆ ಮತ್ತು ನಿವೃತ್ತಿಗಾಗಿ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಡಿ ಇಲ್ಲಿಯವರೆಗೆ ರೂ. 2 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಲಭ್ಯವಿದೆ. ಈ ಕಡಿತವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1.50 ಲಕ್ಷ ಮತ್ತು ಸೆಕ್ಷನ್ 80CCD(1B) ಅಡಿಯಲ್ಲಿ 50 ಸಾವಿರ ರೂ. ಮಾನ್ಯವಾಗಿದೆ. ಮುಖ್ಯವಾಗಿ, ಹಳೆಯ ತೆರಿಗೆ ವ್ಯವಸ್ಥೆಯಲ್ಲಿಯೇ 2 ಲಕ್ಷದವರೆಗೆ ಕಡಿತ ಲಭ್ಯವಿದೆ. ವಾಸ್ತವವಾಗಿ, ಸರ್ಕಾರವು NPS ಅನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ.

Join Nadunudi News WhatsApp Group

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹಳೆಯ ಪಿಂಚಣಿ (OPS) ಬೇಡಿಕೆಗೆ ಸ್ಪಂದಿಸಿ NPS ಅಡಿಯಲ್ಲಿ ಪಿಂಚಣಿ ಹೆಚ್ಚಿಸುವ ಬಗ್ಗೆ ನಿರ್ಧರಿಸಿದೆ. ಕೇಂದ್ರ ನೌಕರರು ಹಳೆಯ ಪಿಂಚಣಿ ಯೋಜನೆಯ ಲಾಭವನ್ನು ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಹಳೆಯ ಪಿಂಚಣಿ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಸರಕಾರ ಹೇಳುತ್ತಿದೆ. ಆದರೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ನೋಂದಾಯಿಸುವ ಮತ್ತು ಹೂಡಿಕೆ ಮಾಡುವ ಉದ್ಯೋಗಿಗಳಿಗೆ ಅವರ ಕೊನೆಯ ಸಂಬಳದ 50 ಪ್ರತಿಶತವನ್ನು ಪಿಂಚಣಿಯಾಗಿ ನೀಡಬಹುದು. ಇದರಿಂದ ನೌಕರರಿಗೆ ಹಳೆಯ ಪಿಂಚಣಿಯಂತೆ ಪಿಂಚಣಿ ಸಿಗಲಿದೆ ಎಂದು ಸರಕಾರ ಹೇಳುತ್ತಿದೆ.

Old Pension Latest news
Image Credit: India Today

Join Nadunudi News WhatsApp Group