Canara Bank Home Loan: ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಬೇಕು ಅನ್ನುವ ಆಸೆ ಇರುತ್ತದೆ. ಆದರೆ ಹಣಕಾಸಿನ ಸಮಸ್ಯೆಯಿಂದ ಅವರ ಕನಸು ಕನಸಾಗಿಯೇ ಉಳಿದುಕೊಳ್ಳುತ್ತದೆ. ಇದೀಗ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಲು ಗೃಹಸಾಲ ಪಡೆದುಕೊಳ್ಳುವ ಯೋಜನೆ ಇದ್ದರೆ ಈ ಮಾಹಿತಿ ನಿಮಗೆ ಉಪಯುಕ್ತ ಆಗಲಿದೆ. ಇದೀಗ ಕೆನರಾ ಬ್ಯಾಂಕ್ ನೀಡುವ ಗೃಹ ಸಾಲದ EMI ಬಗ್ಗೆ ನಾವೀಗ ಮಾಹಿತಿಯನ್ನ ತಿಳಿದುಕೊಳ್ಳೋಣ.
ಕೆನರಾ ಬ್ಯಾಂಕ್ ನ ಗೃಹ ಸಾಲದ EMI
ಕೆನರಾ ಬ್ಯಾಂಕ್ ನ ಗೃಹಸಾಲದ ಆರಂಭಿಕ ಬಡ್ಡಿದರ 8.25% ಆಗಿದೆ. ಮಹಿಳಾ ಅರ್ಜಿದಾರರಿಗೆ 8.20% ಬಡ್ಡಿದರ ನೀಡಲಾಗುತ್ತದೆ. ಸರ್ಕಾರಿ /PSU/ ರಕ್ಷಣಾ ಸಿಬಂಧಿಗೆ ಗೃಹ ಸಾಲದ ಬಡ್ಡಿದರ 8.20% ನಿಂದ 8.25% ಆಗಿರುತ್ತದೆ. ಕ್ರೆಡಿಟ್ ಸ್ಕೋರ್ 800 ಕ್ಕೂ ಅಧಿಕವಾಗಿದ್ದರೆ 8.25% ಬಡ್ಡಿದರ ನೀಡಲಾಗುತ್ತದೆ. ಕ್ರೆಡಿಟ್ ಸ್ಕೋರ್ 750 – 799 ಇದ್ದರೆ ಬಡ್ಡಿದರ 8.35% – 8.50% ಆಗುತ್ತದೆ. ಕ್ರೆಡಿಟ್ ಸ್ಕೋರ್ 700- 749 ಕ್ಕಿಂತ ಕಡಿಮೆ ಇದ್ದರೆ ಬಡ್ಡಿದರ 8.60% – 8.85% ಆಗಿರುತ್ತದೆ.
15 ಲಕ್ಷ ಸಾಲವನ್ನು 15 ವರ್ಷಕ್ಕೆ EMI ಎಷ್ಟಾಗುತ್ತದೆ..?
15 ಲಕ್ಷದ ಸಾಲವನ್ನು 8.20% ಬಡ್ಡಿದರದಲ್ಲಿ ಪಡೆದುಕೊಂಡರೆ ತಿಂಗಳ EMI 14,480 ಆಗುತ್ತದೆ. ಅದೇ ಸಾಲವನ್ನು 8.25% ಬಡ್ಡಿದರದಲ್ಲಿ ಪಡೆದುಕೊಂಡರೆ ತಿಂಗಳ EMI 14,530 ಆಗುತ್ತದೆ. 8.35% ಬಡ್ಡಿದರದಲ್ಲಿ ಪಡೆದುಕೊಂಡರೆ ತಿಂಗಳ EMI 14,630 ಆಗುತ್ತದೆ. 8.50% ಬಡ್ಡಿದರದಲ್ಲಿ ಪಡೆದುಕೊಂಡರೆ ತಿಂಗಳ EMI 14,780 ಆಗುತ್ತದೆ. 8.75% ಬಡ್ಡಿದರದಲ್ಲಿ ಪಡೆದುಕೊಂಡರೆ ತಿಂಗಳ EMI 15,030 ಆಗುತ್ತದೆ. 9.00% ಬಡ್ಡಿದರದಲ್ಲಿ ಪಡೆದುಕೊಂಡರೆ ತಿಂಗಳ EMI 15,220 ಆಗುತ್ತದೆ.
ಕೆನರಾ ಬ್ಯಾಂಕಿನ ಗೃಹಸಾಲದ ಅರ್ಹತೆ
* 18 ರಿಂದ 70 ವರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ.
* ಸಂಬಳ ಪಡೆಯುವ ಉದ್ಯೋಗಿಗಳು ತಿಂಗಳಿಗೆ ಕನಿಷ್ಠ 25000 ಆದಾಯ ಇರಬೇಕು. * ಇನ್ನು ಸ್ವ ಉದ್ಯೋಗಿಗಳು ಕನಿಷ್ಠ 3- 4 ಲಕ್ಷ ವಾರ್ಷಿಕ ಆದಾಯ ಪಡೆದುಕೊಳ್ಳಬೇಕು.
* ಕ್ರೆಡಿಟ್ ಸ್ಕೋರ್ 700 ಕಿಂತ ಅಧಿಕವಾಗಿರಬೇಕು
* ಆಸ್ತಿ ಮೌಲ್ಯದ 90% ವರೆಗೆ ಸಾಲ ಸಿಗುತ್ತದೆ.
ಗೃಹಸಾಲಕ್ಕೆ ಬೇಕಾದ ಅಗತ್ಯ ದಾಖಲೆಗಳು
* ಗುರುತು ಹಾಗೆ ವಿಳಾಸ ಪುರಾವೆ – ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್
*ಆದಾಯ ಪುರಾವೆ
* ಸಂಬಳ ಪಡೆಯುವವರು ಕೊನೆಯ 3 ತಿಂಗಳ ಸಂಬಳ ಸ್ಲಿಪ್, ಫಾರ್ಮ್-16 ಮತ್ತು 2-3 ವರ್ಷದ ITR, 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
* ಸ್ವಂತ ಉದ್ಯೋಗಿಗಳು ಕೊನೆಯ 3 ವರ್ಷ ITR + CA ಸರ್ಟಿಫೈಡ್ ಕಂಪ್ಯೂಟೇಷನ್, GST ರಿಟರ್ನ್ಸ್, 12 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
*ಆಸ್ತಿ ದಾಖಲೆಗಳು – ಮಾರಾಟ ಒಪ್ಪಂದ, ಎನ್‌ಕಂಬ್ರನ್ಸ್ ಸರ್ಟಿಫಿಕೇಟ್ (EC) ಖಾತಾ, ಟ್ಯಾಕ್ಸ್ ಪೇಯ್ಡ್ ರಸೀದಿ, ಒಡೆತನದ ದಾಖಲೆಗಳು.
ಪ್ರೊಸೆಸಿಂಗ್ ಫೀ ಮತ್ತು ಇತರ ಶುಲ್ಕ
ಡಿಸೆಂಬರ್ 2025 ರ ವರೆಗೆ ಶೂನ್ಯ ಪ್ರೊಸೆಸಿಂಗ್ ಫೀ ಇರುತ್ತದೆ. ಕಾನೂನು ಮತ್ತು ಮೌಲ್ಯ ನಿರ್ಣಯ ಶುಲ್ಕ 3000 ದಿಂದ 7000 ರೂ ಇರುತ್ತದೆ. ಪ್ರಿ ಪೇಮೆಂಟ್ ಶುಲ್ಕ ಶೂನ್ಯವಾಗಿರುತ್ತದೆ. ಇನ್ನು ಆರಂಭಿಕ ಮುಕ್ತಾಯ ಶುಲ್ಕ ಶೂನ್ಯವಾಗಿರುತ್ತದೆ.
ತೆರಿಗೆ ವಿನಾಯಿತಿ
ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ. ಸೆಕ್ಷನ್ 24(b) ಅಡಿಯಲ್ಲಿ 2 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ. ಹಾಗೆ ಮಹಿಳಾ ಸಹ ಒಡೆತನದಲ್ಲಿ ಹೆಚ್ಚುವರಿ 50000 ಉಳಿತಾಯ ಸಾಧ್ಯವಾಗುತ್ತದೆ.
ಆನ್ಲೈನ್ ಮೂಲಕ ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಮೊದಲು https://www.canarabank.com/ ಗೆ ಭೇಟಿ ನೀಡಿ, ಮೊಬೈಲ್ ನಂಬರ್ ಹಾಕಿ ನಂತರ OTP ನಮೂದಿಸಬೇಕು. ವಯಕ್ತಿಕ ದಾಖಲೆ, ಉದ್ಯೋಗ, ಆದಾಯ ವಿವರವನ್ನು ಭರ್ತಿ ಮಾಡಬೇಕು. ನಂತರ ದಾಖಲೆಗಳನ್ನು ಅಪ್ಲೋಡ್ ಮಾಡಿ KYC ಪೂರ್ಣ ಗೊಳಿಸಬೇಕು. ನಿಮಗೆ 24 ರಿಂದ 48 ಗಂಟೆಗಳಲ್ಲಿ ಸಾಲ ಮಂಜೂರಾತಿ ಪತ್ರ ಬರುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

