Pension Hike: ಶಾಸಕರಿಗೆ ಸಿಗುವ ಪ್ರತಿ ತಿಂಗಳ ಪಿಂಚಣಿ ತಿಳಿದರೆ ನೀವು ಆಶ್ಚರ್ಯಕ್ಕೆ ಒಳಗಾಗುತ್ತೀರಾ, ಜನಸಾಮಾನ್ಯರಿಗೆ ಮಾತ್ರ ಕಡಿಮೆ ಪಿಂಚಣಿ.

ಮಾಜಿ ಶಾಸಕರು ತಮ್ಮ ಸದಸ್ಯತ್ವದ ಮೊದಲ ಅವಧಿಯ ನಂತರ ಐದು ವರ್ಷಗಳಿಗಿಂತ ಹೆಚ್ಚು ಅವಧಿ ಪ್ರತಿ ಒಂದು ವರ್ಷಕ್ಕೆ, ತಿಂಗಳಿಗೆ ಒಂದು ಸಾವಿರ ರೂಪಾಯಿ ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

Employees Pension Hike: ಇದೀಗ ಪಿಂಚಣಿ ಪಡೆಯುವರ ಪಾಲಿಗೊಂದು ಸಂತೋಷದ ಸುದ್ದಿ ಹೊರ ಬಿದ್ದಿದೆ. ನೀವೂ ಕೂಡ ಪಿಂಚಣಿ ಹೆಚ್ಚಳಕ್ಕಾಗಿ ಕಾಯುತ್ತಿದ್ದರೆ, ಈ ಸಂದರ್ಭದಲ್ಲಿ ಸರ್ಕಾರ ತನ್ನ ನೌಕರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದೆ.

ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರದಿಂದ ಕೂಡ ನೌಕರರಿಗೆ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ, ಇದೀಗ ನೌಕರರ ಪಿಂಚಣಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

Employees Pension Hike
Image Source: India Today

ಪಿಂಚಣಿ ಹೆಚ್ಚಳ ಮಾಡಿದ ಸರ್ಕಾರ
ಛತ್ತೀಸ್‌ಗಢ ಸರ್ಕಾರವು ವಿಧಾನ ಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ, ಇದರಲ್ಲಿ ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಮತ್ತು ಪ್ರಯಾಣ ಭತ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಮಸೂದೆ ಪ್ರಕಾರ ಮಾಜಿ ಶಾಸಕರ ಪಿಂಚಣಿಯನ್ನು 35,000 ರೂ.ನಿಂದ 58,300 ರೂ.ಗೆ ಹೆಚ್ಚಿಸಲಾಗುವುದು ಎನ್ನಲಾಗಿದೆ.

ಮಸೂದೆಯ ಪ್ರಕಾರ ಮಾಜಿ ಶಾಸಕರು ತಮ್ಮ ಸದಸ್ಯತ್ವದ ಮೊದಲ ಅವಧಿಯ ನಂತರ ಐದು ವರ್ಷಗಳಿಗಿಂತ ಹೆಚ್ಚು ಅವಧಿ ಪ್ರತಿ ಒಂದು ವರ್ಷಕ್ಕೆ, ತಿಂಗಳಿಗೆ ಒಂದು ಸಾವಿರ ರೂಪಾಯಿ ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

Employees Pension Hike
Image Source: The Economic Times

 

Join Nadunudi News WhatsApp Group

8 ಲಕ್ಷದಿಂದ ಹತ್ತು ಲಕ್ಷಕ್ಕೆ ಏರಿಕೆಯಾದ ಭತ್ಯೆ
ಈ ಮೊದಲು ವಾರ್ಷಿಕ 8 ಲಕ್ಷ ರೂ.ಗಳ ವರೆಗೆ ನೀಡಲಾಗುತ್ತಿದ್ದ ರೈಲ್ವೆ ಅಥವಾ ವಿಮಾನ ಪ್ರಯಾಣಕ್ಕೆ ಭತ್ಯೆಯನ್ನು 10 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದೂ ಕೂಡ ಮಸೂದೆಯಲ್ಲಿ ನಮೂಡಿಸಲಾಗಿದೆ. ಅದೇ ಸಮಯದಲ್ಲಿ, ಮಾಜಿ ಶಾಸಕರಿಗೆ ಈ ಭತ್ಯೆ ವಾರ್ಷಿಕವಾಗಿ 4 ಲಕ್ಷದಿಂದ 5 ಲಕ್ಷಕ್ಕೆ ಏರಿಕೆಯಾಗಿದೆ.

ಮಾಜಿ ಶಾಸಕರಿಗೆ ದೂರವಾಣಿ ಭತ್ಯೆ 10,000 ಮತ್ತು ಆರ್ಡರ್ಲಿ ಭತ್ಯೆ 15,000 ರೂ. ನಿರ್ಧರಿಸಲಾಗಿದೆ. ರಾಜ್ಯ ಕೈಗೊಂಡಿರುವ ಈ ನಿರ್ಧಾರದ ನಂತರ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 16.96 ಕೋಟಿ ರೂ.ಗಳ ಹೊರೆ ಬೀಳಲಿದೆ.

Employees Pension Hike
Image Source: India Today

ಕಳೆದ ವರ್ಷ ಜುಲೈನಲ್ಲಿ ಮುಖ್ಯಮಂತ್ರಿ ಸ್ಪೀಕರ್, ಸಚಿವರು ಮತ್ತು ಶಾಸಕರ ವೇತನ ಹೆಚ್ಚಳದ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದ್ದು ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 6.81 ಕೋಟಿ ರೂ.ಹೊರೆ ಬಿದ್ದಿತ್ತು. ಛತ್ತೀಸ್‌ಗಢ ವಿಧಾನಸಭೆಯಲ್ಲಿ ಪ್ರಸ್ತುತ 90 ಸದಸ್ಯರಿದ್ದಾರೆ.

Employees Pension Hike
Image Source: India Today

Join Nadunudi News WhatsApp Group