Chandan Shetty: ಮದುವೆಗಾಗಿ ಚಂದನ್ ಶೆಟ್ಟಿ ಮಾಡಿದ್ದು ಎಷ್ಟು ಖರ್ಚು ಗೊತ್ತಾ…? ನೀರಿನ ಮೇಲೆ ಹೋಮ

ಮದುವೆಗೆ 60 ಲಕ್ಷ ಖರ್ಚು ಮಾಡಿದ್ದೆ, ಲೈಫ್ ನನಗೆ ದೊಡ್ಡ ಪಾಠ ಕಲಿಸಿದೆ

Chandan Shetty Life Story: ಚಂದನವನದ ಕ್ಯೂಟ್ ಕಪಲ್ ಆಗಿರುವ ಚಂದನ್ ಶೆಟ್ಟ್ಟಿ ಹಾಗೂ ನಿವೇದಿತಾ ಗೌಡ ತಮ್ಮ ಸಾಂಸಾರಿಕ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಕಳೆದ ಎರಡು ವಾರದ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ಸುದ್ದಿ ಬಾರಿ ವೈರಲ್ ಆಗಿತ್ತು. ಸದ್ದಿಲ್ಲದೆ ಜೋಡಿ ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಕೇಳಿ ಎಲ್ಲರು ಅಚ್ಚರಿಗೊಳಗಾಗಿದ್ದರು.

ಚಂದನ್ ಹಾಗೂ ನಿವೇದಿತಾ ವಿಚ್ಛೇದನದ ಕಾರಣದ ಬಗ್ಗೆ ಕೂಡ ಚರ್ಚೆ ಜೋರಾಗಿತ್ತು. ಇನ್ನು ವಿಚ್ಛೇದನದ ಪಡೆದ ಬಳಿಕ ಚಂದನ್ ಹಾಗೂ ನಿವೇದಿತಾ ಒಟ್ಟಾಗಿ ಪ್ರೆಸ್ ಮೀಟ್ ನಡೆಸಿ ತಮ್ಮ ವಿಚ್ಛೇದನದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದರು. ಸದ್ಯ ಚಂದನ್ ಶೆಟ್ಟಿ ತಮ್ಮ ಜೀವನದ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೀವನ ತಮಗೆ ಯಾವ ರೀತಿ ಪಾಠ ಕಳಿಸಿತು ಎನ್ನುವ ಬಗ್ಗೆ ಚಂದನ್ ಮನದಾಳದ ಮಾತುಗಳನ್ನಾಡಿದ್ದಾರೆ.

Chandan Shetty Life Story
Image Credit: Vistaranews

ಡಿವೋರ್ಸ್ ಬಳಿಕ ಚಂದನ್ ಮನದಾಳದ ಮಾತು
ಜೀವನದಲ್ಲಿ ಅಹಂ ಮತ್ತು ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಂದನ್ ಶೆಟ್ಟಿ, ನನಗೆ ಅಹಂ ಇಲ್ಲ. ಒಂದು ಹಾಡು ಹಿಟ್ ಆದಾಗ ಅದರ ಹಿಂದೆ ಸಾಕಷ್ಟು ಜನರ ಶ್ರಮ ಇರುತ್ತದೆ ಎಂದರು. ಈ ವೇಳೆ ತಾವು ನಡೆದು ಬಂದ ಹಾದಿ ಹಾಗೂ ಜೀವನ ಕಲಿಸಿದ ಪಾಠಗಳ ಕುರಿತು ಮಾತನಾಡಿದ ಅವರು, ‘ನಾನು ಹಣ ಖರ್ಚು ಮಾಡುತ್ತಿದ್ದೆ. ನಾನು ಗೆಜೆಟ್ ಗಳನ್ನು ಅತಿಯಾಗಿ ಖರೀದಿಸುತ್ತಿದ್ದೆ. ಕೋವಿಡ್ ನನಗೆ ಪಾಠ ಕಲಿಸಿದೆ ಎಂದು ಹೇಳಿದರು. ರಶ್ಮಿ ಈ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದಾಗ ಚಂದನ್ ಅದಕ್ಕೆ ಉತ್ತರಿಸಿದ್ದಾರೆ.

ಮದುವೆಗೆ 60 ಲಕ್ಷ ಖರ್ಚು ಮಾಡಿದ್ದೆ, ಲೈಫ್ ನನಗೆ ದೊಡ್ಡ ಪಾಠ ಕಲಿಸಿದೆ
ನಾನು ಕೋವಿಡ್ ಸಮಯದಲ್ಲಿ ದುಡ್ಡನ್ನು ಹೇಗೆ ನಿರ್ವಹಿಸಬೇಕೆಂದು ಕಲಿತಿದ್ದೇನೆ. ನಾನು ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ನಾನು ಭಾವಿಸಿದಾಗ, ಕೋವಿಡ್ ಬಂದು ನನ್ನಜೀವನಕ್ಕೆ ತೀವ್ರ ಹೊಡೆತ ನೀಡಿತು. ಆಗಷ್ಟೇ ನನ್ನ ಮದುವೆಯಾಯಿತು. ಮದುವೆಗೆ 50-60 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಮದುವೆಯಾಗುತ್ತಿರುವಾಗಲೇ ಕೋವಿಡ್‌ ಸಿಕ್ಕಿತು.

Join Nadunudi News WhatsApp Group

ಹಣದ ಕೊರತೆಯಿಂದ ಇದೆಲ್ಲ ನನಗೆ ಬೇಕಿತ್ತಾ ಅನ್ನಿಸಿತು. ನಾನು ತುಂಬಾ ಕಷ್ಟಪಟ್ಟೆ. ಕೊನೆಗೆ ನಿದಹನವಾಗಿ ಮೇಲಕ್ಕೆ ಬಂದೆ ಎಂದು ಚಂದನ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಬಂದರೆ ಬೆಟ್ಟ, ಹೋದರೆ ಟಾಟಾ ಎನ್ನುವುದು ಲೈಫ್. ಯಾವ ಹಾಡುಗಳು ಫ್ಲಾಪ್ ಆಗುತ್ತವೆ ಮತ್ತು ಯಾವುದು ಹಿಟ್ ಆಗುತ್ತವೆ ಎಂದು ತಿಳಿಯುವುದಿಲ್ಲ. ಆದರೆ ಕೋವಿಡ್ ನಂತರ ಹಣವನ್ನು ಹೇಗೆ ಖರ್ಚು ಮಾಡಬೇಕೆಂದು ಕಲಿತಿದ್ದೇನೆ ಎಂದು ಹೇಳಿದರು.

Chandan Shetty And Niveditha Gowda Latest News
Image Credit: Vijaykarnataka

Join Nadunudi News WhatsApp Group