Children’s Gram Sabha: ರಾಜ್ಯದಲ್ಲಿ ಇರುವ ಎಲ್ಲಾ ಮಕ್ಕಳಿಗೆ ಮಹತ್ವದ ಆದೇಶದ ಹೊರಡಿಸಿದ ರಾಜ್ಯ ಸರ್ಕಾರ, ನಡೆಯಲಿದೆ ಮಕ್ಕಳ ಗ್ರಾಮ ಸಭೆ.

Children’s Gram Sabha: ನಮ್ಮ ಕರ್ನಾಟಕ ರಾಜ್ಯ ಸರ್ಕಾರ (Karnataka State Govt) ದಿನದಿಂದ ದಿನಕ್ಕೆ ಹೊಸ ಹೊಸ ನಿಯಮಗಳನ್ನ ಮತ್ತು ಆದೇಶಗಳನ್ನ ಜಾರಿಗೆ ತರುತ್ತಿದೆ ಎಂದು ಹೇಳಬಹುದು. ಹೌದು ಜನರ ಅನುಕೂಲದ ಉದ್ದೇಶಗಳಿಂದ ದೇಶದಲ್ಲಿ ಹೊಸ ಹೊಸ ನಿಯಮಗಳನ್ನ ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಧಾರವನ್ನ ಮಾಡಿದೆ.

ಜನರ ಕುಂದು ಕೊರತೆಗಳನ್ನ ನಿವಾರಣೆ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಹೊಸ ನಿಯಮವನ್ನ ಜಾರಿಗೆ ತರಲು ಈಗ ರಾಜ್ಯ ಸರ್ಕಾರ ಆದೇಶವನ್ನ ಹೊರಡಿಸಿದೆ. ರಾಜ್ಯದಲ್ಲಿ ಇರುವ ಎಲ್ಲಾ ಮಕ್ಕಳನ್ನ ಸೇರಿಸಿ ಆಯಾ ಗ್ರಾಮದಲ್ಲಿ ಗ್ರಾಮ ಪಂಚಾಯತಿಯಲ್ಲಿ (Gram Panchayat) ಮಕ್ಕಳ ಗ್ರಾಮ ಸಭೆಯನ್ನ ನಡೆಸುವಂತೆ ಈಗ ರಾಜ್ಯ ಸರ್ಕಾರ ಈಗ ಆದೇಶವನ್ನ ಹೊರಡಿಸಿದೆ.

A children's village meeting will be held this month
Image Credit: brightthemag

ಮಕ್ಕಳ ಗ್ರಾಮ ಸಭೆ ನಡೆಸಲು ಸರ್ಕಾರದ ಆದೇಶ
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿನಯದ ಸಂಬಂಧ ಒಂದು ದಿನ ಮಕ್ಕಳ ಗ್ರಾಮ ಸಭೆಯನ್ನ ರಾಜ್ಯ ಸರ್ಕಾರ ಆದೇಶವನ್ನ ಹೊರಡಿಸಿದೆ.

ಇದರ ಕುರಿತಂತೆ ಆಯುಕ್ತರು ಶಿಕ್ಷಣ ಇಲಾಖೆಗೆ ಆದೇಶವನ್ನ ಕೂಡ ಹೊರಡಿಸಿದ್ದಾರೆ. 2022 ನೇ ಸಾಲಿನಲ್ಲಿ ಮಕ್ಕಳ ಅಭಿವೃದ್ಧಿ ಅಂಶಗಳ ಪರಿಣಾಮಕಾರಿ ಅನುಷ್ಠಾನದ ಉದ್ದೇಶಗಳಿಂದ, ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ ಪಂಚಾಯತಿಯನ್ನಾಗಿಸಲು ಒಂದು ಮಕ್ಕಳ ಗ್ರಾಮ ಸಭೆಯನ್ನ ನಡೆಸಲು ರಾಜ್ಯ ಸರ್ಕಾರ ಆದೇಶವನ್ನ ಹೊರಡಿಸಿದೆ.

State government order to hold village meeting of school children
Image Credit: economictimes.indiatimes

ರಾಜ್ಯ ಎಲ್ಲ ಪಂಚಾಯತಿಗಳಲ್ಲಿ ನಡೆಯಲಿದೆ ಮಕ್ಕಳ ಗ್ರಾಮ ಸಭೆ
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಲು ಆದೇಶವನ್ನ ಹೊರಡಿಸಿದ್ದು ಶಿಕ್ಷಕರು, ಮುಖ್ಯ ಶಿಕ್ಷಕರು, ಸ್ಥಳೀಯ ಸಮುದಾಯ ಗ್ರಾಮಸ್ಥರು ಮತ್ತು ಇದಕ್ಕೆ ಸಂಬಂಧಿಸಿದ ಎಲ್ಲಾ ಅಭಿಕಾರಿಗಳು ಕರೋನ ಸುರಕ್ಷತಾ ಕ್ರಮಗಳನ್ನ ಅನುಸರಿಸಿ ಮಕ್ಕಳ ಗ್ರಾಮ ಸಭೆಯನ್ನ ನಡೆಯಲು ರಾಜ್ಯ ಸರ್ಕಾರ ಆದೇಶವನ್ನ ಹೊರಡಿಸಿದೆ.

Join Nadunudi News WhatsApp Group

ಇದೆ ತಿಂಗಳಲ್ಲಿ ಆಗಬೇಕು ಗ್ರಾಮ ಸಭೆ
ಇದೆ ತಿಂಗಳ 14 ರಿಂದ 24 ರ ವರೆಗೆ ಒಂದು ದಿನ ಮಕ್ಕಳ ಗ್ರಾಮ ಸಬ್ಬೆಯನ್ನ ನಡೆಸಬೇಕು ಎಂದು ರಾಜ್ಯ ಸರ್ಕಾರ ಆದೇಶವನ್ನ ಹೊರಡಿಸಿದೆ. ಆದೇಶವನ್ನ ಹೊರಡಿಸಿರುವ ಅಧಿಕಾರಿಗಳು. ಈ ಸಭೆಯಲ್ಲಿ ಕಾರ್ಯಕ್ರಮಗಳ ವೇಳಾಪಟ್ಟಿಗಳ ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ನೆರವು ಮತ್ತು ಸಹಕಾರವನ್ನ ಕೊಡಬೇಕು ಎಂದು ಸೂಚನೆಯನ್ನ ನೀಡಲಾಗಿದೆ.

ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಇರುವ ಗ್ರಾಮ ಪಂಚಾಯತಿಗಳಲ್ಲಿ ಈ ಮಕ್ಕಳ ಗ್ರಾಮ ಸಭೆ ನಡೆಸಲು ಸೂಚನೆಯನ್ನ ನೀಡಲಾಗಿದೆ. ಈ ಗ್ರಾಮ ಸಭೆಯಲ್ಲಿ ಯಾವ ವಿಷಯದ ಬಗ್ಗೆ ಚರ್ಚೆ ಮಾಡಲಾಗುತ್ತದೆ ಅನ್ನುವುದರ ಬಗ್ಗೆ ವೇಳಾಪಟ್ಟಿಯನ್ನ ರಚನೆ ಮಾಡಲು ಅದನ್ನ ಸರ್ಕಾರಕ್ಕೆ ಒದಗಿಸಲು ಅಧಿಕಾರಿಗಳಿಗೆ ಸೂಚನೆಯನ್ನ ಕೂಡ ನೀಡಲಾಗಿದೆ.

ಎಲ್ಲಾ ಮಕ್ಕಳ ಈ ಗ್ರಾಮ ಭಾಸೆಯಲ್ಲಿ ಭಾವಹಿಸಬೇಕು
ರಾಜ್ಯದ ಎಲ್ಲಾ ತಾಲೂಕುಗಳ ಎಲ್ಲಾ ಮಕ್ಕಳು ಈ ಗ್ರಾಮ ಸಭೆಯಲ್ಲಿ ಭಾಗವಹಿಸಬೇಕು ಎಂದು ಆದೇಶವನ್ನ ಹೊರಡಿಸಲಾಗಿದೆ.

The state government order to conduct children's gram sabha in every taluk of the state
Image Credit: businessinsider

ಸದ್ಯ ಗ್ರಾಮ ಸಭೆಯನ್ನ ಯಾವ ರೀತಿಯಲ್ಲಿ ನಡೆಸಬೇಕು ಮತ್ತು ಅದಕ್ಕೆ ಯಾವ ಯಾವ ಅಗತ್ಯ ವ್ಯವಸ್ಥೆಗಳನ್ನ ಮಾಡಬೇಕು ಅನ್ನುವುದರ ಬಗ್ಗೆ ಅಧಿಕಾರಿಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಅಗತ್ಯ ಮಾಹಿತಿ ಬರಲಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಈ ಗ್ರಾಮ ಸಭೆಯಲ್ಲಿ ಮಕ್ಕಳ ಸಬಲೀಕರಣದ ಬಗ್ಗೆ ಚರ್ಚೆಯನ್ನ ಕೂಡ ನಡೆಸಬೇಕಾಗಿದೆ. ಈ ಮಕ್ಕಳ ಸ್ನೇಹಿ ಗ್ರಾಮ ಸಭೆ ಮಕ್ಕಳಿಗೆ ಗ್ರಾಮ ಪಂಚಾಯತಿಗಳ ಕೆಲಸಗಳ ಬಗ್ಗೆ ಮಾಹಿತಿಯನ್ನ ತಿಳಿಸಿಕೊಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group