Chiranjeevi Sarja: ಚಿರಂಜೀವಿ ಸರ್ಜಾಗೆ ಮರಣೋತ್ತರ ಕಲಾಭೂಷಣ ಪ್ರಶಸ್ತಿ.

Chiranjeevi Sarja: ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡಿದ ಚಿರಂಜೀವಿ ಸರ್ಜಾ (Chiranjeevi Sarja)ಅವರು ಚಿರು ಎಂದೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಹಾಗೆಯೆ ಕನ್ನಡದ ಜನಪ್ರಿಯ ನಟಿಯಾದ ಮೇಘನಾ ರಾಜ್ (Meghana Raj) ಅವರನ್ನು ವಿವಾಹವಾಗಿದ್ದರು.

ಮದುವೆ ಆಗಿ ಸ್ವಲ್ಪ ಸಮಯದ ನಂತರ ಚಿರಂಜೀವ ಸರ್ಜಾ ಅವರು ಮರಣ ಹೊಂದಿದ್ದರು. ಚಿರು ಅವರ ಮರಣದ ಸಂದರ್ಭದಲ್ಲಿ ಅವರ ಪತ್ನಿ ಮೇಘನಾ ರಾಜ್ ಅವರ ಮಗುವಿಗೆ ಗರ್ಭಿಣಿಯಾಗಿದ್ದರು.

Chiranjeevi Sarja Posthumous Arts Award.
Image Credit: thenewsminute

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಮ್ಮೆಲ್ಲರನ್ನೂ ಅಗಲಿ ಎರಡು ವರ್ಷಗಳಾಗಿವೆ. ಚಿರು ಅವರ ನೆನಪು ಅವರ ಮನೆಯವರನ್ನು ಇನ್ನು ಬಿಟ್ಟಿಲ್ಲ. ಚಿರು ಅವರ ಚಿತ್ರಗಳನ್ನು ನೋಡುತ್ತಾ ಮನೆಯವರು, ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಾ ಇರುತ್ತಾರೆ.

ಚಿರು ನೆನಪಿಗಾಗಿ ಕನ್ನಡ ಸಂಭ್ರಮ ಹಬ್ಬವನ್ನು ಆಚರಿಸಿದ ಅಭಿಮಾನಿಗಳು.
ಚಿರು ಅವರ ಅಗಲಿಕೆಯ ನೋವನ್ನು ಮರೆಯಲು ಅವರ ನೆನಪಿನ ಅಂಗವಾಗಿ ಕನ್ನಡ ಗೆಳಯರ ಬಳಗ ಹಾಗೂ ಚಾರಿಟೇಬಲ್ ಟ್ರಸ್ಟ್ ಕಡೆಯಿಂದ ಕನ್ನಡ ಸಂಭ್ರಮ ಹಬ್ಬವನ್ನು ಹಮ್ಮಿಕೊಂಡಿದೆ.

Two years after his death, Chiranjeevi Sarja has received a posthumous art costume award
Image Credit: indianexpress

ಚಿರುಗೆ ಮರಣೋತ್ತರ ಕಲಾಭೂಷಣ ಪ್ರಶಸ್ತಿ (Maranottara Kalabhoshana Prashasti)
ಚಿರಂಜೀವಿ ಸರ್ಜಾ ಅವರ ನೆನಪಿನ ಅಂಗವಾಗಿ ಕೆಲವು ಕನ್ನಡ ಗೆಳಯರ ಬಳಗ ಹಾಗೂ ಚಾರಿಟೇಬಲ್ ಟ್ರಸ್ಟ್ ಕಡೆಯಿಂದ ಕನ್ನಡ ಸಂಭ್ರಮ ಹಬ್ಬವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಚಿರುಗೆ ಮರಣೋತ್ತರ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ.

Join Nadunudi News WhatsApp Group

ಡಿಸೆಂಬರ್ 10 ರಂದು ಈ ಕಾರ್ಯಕ್ರಮ ನಡೆಯಲಿದೆ. ಚಿರು ಸಹೋದರ ದ್ರುವ ಸರ್ಜಾ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ಈ ವೇಳೆ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರ ಕಲಾಭೂಷಣ ಪ್ರಶಸ್ತಿ ನೀಡಲಾಗುವುದು.

 ಕನ್ನಡ ಸಂಭ್ರಮ ಕಾರ್ಯಕ್ರಮವು ಡಿಸೆಂಬರ್ 6 ರಿಂದ 11 ರತನಕ ಕಾರ್ಯಕ್ರಮ ನಡೆಯಲಿದೆ. ಎರಡು ದಿನ ಸರ್ಕಾರೀ ಶಾಲಾ ಮಕ್ಕಳ ಸ್ಕೂಲ್ ಡೇ ಹಾಗೂ ಇನ್ನೆರಡು ದಿನ ದೇವರ ಕಾರ್ಯಕ್ರಮವಿದೆ. ಉಳಿದ ಎರಡು ದಿನ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್ 10 ರಂದು ವಿಜಯ್ ಪ್ರಕಾಶ್ (Vijay Prakash), ನವೀನ ಸಜ್ಜು(Naveen Sajju), ಅನನ್ಯ ಭಟ್ (Ananya Bhat) ಕಾರ್ಯಕ್ರಮ ನೀಡಲಿದ್ದಾರೆ.

ಡಿಸೆಂಬರ್ 11 ರಂದು ಎಸ್ ಪಿಬಿ ಬಾಲಸುಬ್ರಮಣ್ಯ  (SP Balasubramanya)ಅವರ ಪುತ್ರ ಎಸ್ ಪಿಬಿ   ಚರಣ್, ಮನು, ಅನುರಾಧ ಶ್ರೀರಾಮ್ ಸಂಗೀತ ನೀಡಲಿದ್ದಾರೆ. ವರುಣ್ ಸ್ಟುಡಿಯೊಸ್ ಈ ಕಾರ್ಯಕ್ರಮದ ಉಸ್ತುವಾರಿಯನ್ನು ಹಮ್ಮಿಕೊಂಡಿದ್ದಾರೆ.

ಇದರ ಜೊತೆಗೆ ಡಿಸೆಂಬರ್ 11 ರಂದು ಶಿವರಾಜ್ ಕುಮಾರ್  (Shivaraj Kumar) ಅವರ 125 ನೇ ಚಿತ್ರವಾದ ವೇದ ಚಿತ್ರ ತಂಡ ಭಾಗಿಯಾಗಲಿದ್ದಾರೆ. ವೇದ ಚಿತ್ರದ ಟೀಸರ್, ಸಾಂಗ್ ಗಳನ್ನೂ ಚಿತ್ರತಂಡ ತೋರಿಸಲಿದೆ.

Actor Chiranjeevi Sarja received posthumous Kalabhushan award
Image Credit: india

 

Join Nadunudi News WhatsApp Group